ಕರ್ನಾಟಕ

karnataka

ETV Bharat / entertainment

'ಆದಿಪುರುಷ್​'ಗೆ ಗೀತಾ ಸನೋನ್​ ಬೆಂಬಲ: 'ನಿಮ್ಮ ಮಗಳಿಗೆ ಹಿಂದೂ ಸಂಸ್ಕೃತಿ ಕಲಿಸಿ' ಎಂದ ನೆಟ್ಟಿಗರು

'ಆದಿಪುರುಷ್'​ಗೆ ಭಾರೀ ಟೀಕೆ ವ್ಯಕ್ತವಾಗುತ್ತಿರುವ ಮಧ್ಯೆ ನಟಿ ಕೃತಿ ಸನೋನ್​ ತಾಯಿ ಗೀತಾ ಸನೋನ್​ ಚಿತ್ರಕ್ಕೆ ಬೆಂಬಲ ನೀಡಿ ಮಾತನಾಡಿದ್ದಾರೆ.

adipurush
ಆದಿಪುರುಷ್​

By

Published : Jun 22, 2023, 7:24 PM IST

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಮತ್ತು ಬಾಲಿವುಡ್​ ಬಹುಬೇಡಿಕೆಯ ನಟಿ ಕೃತಿ ಸನೋನ್​ ಅಭಿನಯದ 'ಆದಿಪುರುಷ್​' ಚಿತ್ರದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಚಿತ್ರದ ಬಗ್ಗೆ ಎಲ್ಲೆಡೆ ಟೀಕೆ ಕೇಳಿಬರುತ್ತಿದೆ. ನಿರ್ದೇಶಕ ಓಂ ರಾವುತ್​ ಮತ್ತು ಸಂಭಾಷಣೆ ಬರಹಗಾರ ಮನೋಜ್​ ಮುಂತಾಶಿರ್​ ಶುಕ್ಲಾ ಸಾಕಷ್ಟು ನಿಂದನೆಗೆ ಒಳಗಾಗುತ್ತಿದ್ದಾರೆ. ಚಿತ್ರದ ಸಂಭಾಷಣೆಯ ವೇಳೆ ಬಳಸಿರುವ ಭಾಷೆಗೆ "ಟಪೋರಿ" ಭಾಷೆ ಎಂದು ಕರೆಯಲಾಗಿದೆ.

ಭಾರತದಲ್ಲಿ 'ಆದಿಪುರುಷ್'​ ಸಿನಿಮಾವನ್ನು ಬ್ಯಾನ್​ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಜೊತೆಗೆ ಈ ಚಿತ್ರದಲ್ಲಿ ಸೀತೆಯನ್ನು ಭಾರತದ ಮಗಳು ಎಂದು ಕರೆಯುವ ಮೂಲಕ ನೇಪಾಳದ ಜನತೆಯನ್ನು ಕೆರಳಿಸಿದೆ. ಇಷ್ಟೇ ಅಲ್ಲದೇ ಭಗವಾನ್​ ಹನುಮಾನ್​ ಸಂಭಾಷಣೆಗಳು ಕೂಡ ಟ್ರೋಲ್​ ಆಗಿವೆ. ಚಿತ್ರದಲ್ಲಿ ಕೆಲವು ಸ್ಥಳೀಯ ಪದಗಳನ್ನು ಬಳಸಿ ರಾಮಾಯಣದ ಶೈಲಿಯನ್ನೇ ಬದಲಾವಣೆ ಮಾಡಲಾಗಿದೆ. ಭಾರೀ ಟೀಕೆಯ ಮಧ್ಯೆ, ಇದೀಗ ಕೃತಿ ಸನೋನ್​ ತಾಯಿ ಗೀತಾ ಸನೋನ್​ ಚಿತ್ರಕ್ಕೆ ಬೆಂಬಲ ನೀಡಿ ಮಾತನಾಡಿದ್ದಾರೆ.

'ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ..'ಗೀತಾ ಸನೋನ್​ ತಮ್ಮ ಇನ್​ಸ್ಟಾ ಪೇಜ್​ನಲ್ಲಿ ಪೋಸ್ಟ್​ ಒಂದನ್ನು ಶೇರ್​ ಮಾಡುವ ಮೂಲಕ ಜನರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. "ನೀವು ಒಳ್ಳೆಯ ಆಲೋಚನೆ ಮತ್ತು ಉತ್ತಮ ದೃಷ್ಟಿಯಿಂದ ನೋಡಿದರೆ, ಇಡೀ ಬ್ರಹ್ಮಾಂಡವೇ ಸುಂದರವಾಗಿ ಕಾಣುತ್ತದೆ. ಶಬರಿ ತಿಂದು ಕೊಟ್ಟ ಹಣ್ಣನ್ನು ಪ್ರೀತಿಯಿಂದ ಶ್ರೀರಾಮನು ಸ್ವೀಕರಿಸುತ್ತಾನೆ. ಅಂತಹ ತಪ್ಪುಗಳನ್ನು ಕಡೆಗಣಿಸಿ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಜೈ ಶ್ರೀರಾಮ್​" ಎಂದು ಪೋಸ್ಟ್​ಗೆ ಕ್ಯಾಪ್ಶನ್​ ಬರೆದಿದ್ದಾರೆ.

ಇದನ್ನೂ ಓದಿ:Adipurush: ವಿವಾದಕ್ಕೊಳಗಾದ ಭಗವಾನ್ ಹನುಮಂತನ ಡೈಲಾಗ್ಸ್​​ ಸರಿಪಡಿಸಿದ ಚಿತ್ರತಂಡ - ವಿಡಿಯೋ ನೋಡಿ

'ನಿಮ್ಮ ಮಗಳಿಗೆ ಸಂಸ್ಕೃತಿ ಕಲಿಸಿ..'ಈ ಪೋಸ್ಟ್​ಗೆ ಸೋಶಿಯಲ್​ ಮೀಡಿಯಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಒಬ್ಬರು, 'ನೀವು ಈ ಹಿಂದೂ ವಿರೋಧಿ ಚಿತ್ರವನ್ನು ಕುರುಡಾಗಿ ಬೆಂಬಲಿಸಬೇಡಿ. ನಿಮ್ಮ ಮಗಳಿಗೆ ಹಿಂದೂ ಧರ್ಮ ಮತ್ತು ಅದರ ಸಂಸ್ಕೃತಿಯ ಬಗ್ಗೆ ಕಲಿಸಬೇಕು' ಎಂದು ಬರೆದಿದ್ದಾರೆ. ಮತ್ತೊಬ್ಬರು, 'ನೀವು ಈ ಚಿತ್ರವನ್ನು ಬೆಂಬಲಿಸುತ್ತಿದ್ದೀರಿ. ಏಕೆಂದರೆ ನಿಮ್ಮ ಮಗಳು ಇದರಲ್ಲಿ ಸೀತೆಯಾಗಿ ನಟಿಸಿದ್ದಾರೆ. ಅಲ್ಲದೇ ನಿಮ್ಮ ಮಗಳ ಈ 600 ಕೋಟಿ ಚಿತ್ರ ಫ್ಲಾಪ್ ಆಗುವುದನ್ನು ನೀವು ಬಯಸುವುದಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, 'ಕೃತಿ ಸನೋನ್​ ಅವರು ಆದಿಪುರುಷ್​ನಂತಹ ಚಿತ್ರದ ಭಾಗವಾಗುತ್ತಿರುವುದು ದುರದೃಷ್ಟಕರ' ಎಂದು ಹೇಳಿದ್ದಾರೆ.

ಆದಿಪುರುಷ್​ ಕಲೆಕ್ಷನ್​ ಕುಸಿತ:ವಿಶ್ವದಾದ್ಯಂತ ಮೂರೇ ದಿನದಲ್ಲಿ 300 ಕೋಟಿ ರೂ. ಕಲೆಕ್ಷನ್​ ಮಾಡಿದ ಸಿನಿಮಾ ಸೋಮವಾರದಂದು ಗಳಿಸಿದ್ದು 20 ಕೋಟಿ ರೂಪಾಯಿ. ಬುಧವಾರ ಅಂದರೆ ಚಿತ್ರ ತೆರೆಕಂಡ 6ನೇ ದಿನ ಸಿನಿಮಾ ಗಳಿಕೆ ಒಂದಂಕಿಗೆ ಒಂದು ನಿಂತಿದೆ. ಬುಧವಾರದಂದು 7.50 ಕೋಟಿ ರೂ.ಗೆ ಕುಸಿದಿದೆ. ಚಿತ್ರದಲ್ಲಿ ಕೆಲವು ಸಂಭಾಷಣೆಗಳನ್ನು ಬದಲಾಯಿಸಿದ ನಂತರವೂ ಸಿನಿಮಾ ಬಗೆಗಿನ ನೆಗೆಟಿವ್​​ ಟ್ರೆಂಡ್ ಮುಂದುವರಿದಿದೆ.

ಇದನ್ನೂ ಓದಿ:Ragini Sheela Movie: ದ್ವಿಭಾಷೆಯಲ್ಲಿ ದ್ವಿವೇದಿ ಸಿನಿಮಾ ರೆಡಿ.. ರಾಗಿಣಿಯ 'ಶೀಲಾ' ಸಿನಿಮಾ ಫಸ್ಟ್​ ಲುಕ್​ ಔಟ್​

ABOUT THE AUTHOR

...view details