ಕರ್ನಾಟಕ

karnataka

ETV Bharat / entertainment

ಮಾಳವಿಕ ನಾಯರ್ ಜನ್ಮದಿನಕ್ಕೆ 'ಕೃಷ್ಣಂ ಪ್ರಣಯ ಸಖಿ' ಪೋಸ್ಟರ್ ಬಿಡುಗಡೆ - Krishnam Pranaya Sakhi

ಮಾಳವಿಕ ನಾಯರ್ ಹುಟ್ಟುಹಬ್ಬ ಹಿನ್ನೆಲೆ 'ಕೃಷ್ಣಂ ಪ್ರಣಯ ಸಖಿ' ಪೋಸ್ಟರ್ ಅನಾವರಣಗೊಂಡಿದೆ.

Krishnam Pranaya Sakhi poster
ಮಾಳವಿಕ ನಾಯರ್

By ETV Bharat Karnataka Team

Published : Jan 4, 2024, 6:49 PM IST

ಶೀರ್ಷಿಕೆ ಇಂದಲೇ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ 'ಕೃಷ್ಣಂ ಪ್ರಣಯ ಸಖಿ'. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ ರಾಜು ಕಾಂಬಿನೇಷನ್​​ನ ಈ ಚಿತ್ರ ಸದ್ದಿಲ್ಲದೇ ಶೂಟಿಂಗ್​ ಮುಗಿಸಿದೆ. ಬೆಂಗಳೂರು, ಇಟಲಿ ಹಾಗೂ ಮಾಲ್ಟಾದಲ್ಲಿ ಚಿತ್ರೀಕರಣ ನಡೆಸಿರೋ ಚಿತ್ರತಂಡವೀಗ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ‌. ಡಬ್ಬಿಂಗ್ ಬಹುತೇಕ ಮುಕ್ತಾಯ ಹಂತ ತಲುಪಿದೆ. ಚಿತ್ರದ ನಾಯಕಿ ಮಾಳವಿಕ ನಾಯರ್ ಅವರಿಗಿಂದು 26ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡ ನಾಯಕಿಗೆ ವಿಶೇಷವಾಗಿ ಶುಭ ಕೋರಿದೆ.

ಗೋಲ್ಡನ್​ ಸ್ಟಾರ್​​ಗೆ ಜೋಡಿಯಾದ ಬಹುಭಾಷಾ ನಟಿ: ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ತನ್ನದೇ ‌ಬೇಡಿಕೆ‌ ಹೊಂದಿರುವ ಮಾಳವಿಕಾ ನಾಯರ್ ಬ್ಲ್ಯಾಕ್ ಬಟರ್‌ಫ್ಲೈ, ಯೇವಡೆ ಸುಬ್ರಮಣ್ಯಂ ಮತ್ತು ಟ್ಯಾಕ್ಸಿವಾಲಾ ಚಿತ್ರಗಳ ಮೂಲಕ ‌ಸಿಲ್ವರ್ ಸ್ಕ್ರೀನ್ ಮೇಲೆ ಮ್ಯಾಜಿಕ್ ‌ಮಾಡಿದ್ದಾರೆ. ಇದೀಗ 'ಕೃಷ್ಣಂ ಪ್ರಣಯ ಸಖಿ' ಮೂಲಕ ಗೋಲ್ಡನ್​ ಸ್ಟಾರ್​​ಗೆ ಜೋಡಿಯಾಗಿದ್ದಾರೆ.

ಗಣೇಶ್ ಅಭಿನಯದ 41ನೇ ಚಿತ್ರ: ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್​ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮೂರನೇ ಚಿತ್ರವಿದು. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 41ನೇ ಚಿತ್ರವಿದು. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಗಣೇಶ್ ಫ್ಯಾಮಿಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ‌. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಮೊದಲಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಜನ್ಮದಿನದ ಸಂಭ್ರಮದಲ್ಲಿ ಮಾಳವಿಕ ನಾಯರ್

ಇದನ್ನೂ ಓದಿ:ರಾಜ್ಯಾದ್ಯಂತ 'ಕಾಟೇರ' ಅಬ್ಬರ: ಸೆಲೆಬ್ರಿಟಿಗಳೊಂದಿಗೆ ಚಾಲೆಂಜಿಂಗ್​ ಸ್ಟಾರ್ ಸಂಭ್ರಮ

ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸ ರಾಜು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿರೋ ಕೃಷ್ಣಂ ಪ್ರಣಯ ಸಖಿ ಚಿತ್ರದ ಟ್ರೇಲರ್​ ಅನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. 2024 ರಲ್ಲಿ ತೆರೆ ಕಾಣಲಿರುವ ಬಹು ನಿರೀಕ್ಷಿತ ಕನ್ನಡ ಚಿತ್ರಗಳಲ್ಲೊಂದಾಗಿದ್ದು, ಸಿನಿಮಾ ವೀಕ್ಷಿಸಲು ಸಿನಿಪ್ರಿಯರು ಕಾತರರಾಗಿದ್ದಾರೆ.

ಇದನ್ನೂ ಓದಿ:ಸಲಾರ್​ ಸೀಕ್ವೆಲ್​​ ಕಥೆ ರೆಡಿ, ಶೀಘ್ರದಲ್ಲೇ ಶೂಟಿಂಗ್​ ಶುರು: ಅಪ್​ಡೇಟ್ಸ್ ಕೊಟ್ಟ ಪ್ರಭಾಸ್​​

ABOUT THE AUTHOR

...view details