ಮುಂಬೈ: ಖ್ಯಾತ ಚಲನಚಿತ್ರ ನಿರ್ಮಾಪಕ ವಿಕ್ರಮ್ ಭಟ್ ಅವರ ಪುತ್ರಿ ಕೃಷ್ಣ ಭಟ್ ಭಾನುವಾರ ಬಹುಕಾಲದ ಗೆಳೆಯ ವೇದಾಂತ್ ಸರ್ದಾ ಅವರನ್ನು ವಿವಾಹವಾಗಿದ್ದಾರೆ. ಮುಂಬೈನಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನೆರವೇರಿತು. ಒಂದು ವರ್ಷದ ಹಿಂದೆ ಡೇಟಿಂಗ್ ಆರಂಭಿಸಿದ ದಿನವೇ ಇವರಿಬ್ಬರೂ ವಿವಾಹವಾಗಿದ್ದು ವಿಶೇಷ.
ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಬಾಬಿ ಡಿಯೋಲ್, ಸನ್ನಿ ಲಿಯೋನ್ , ಪತಿ ಡೇನಿಯಲ್ ವೆಬರ್ ಮತ್ತು ಅವರ ಮಕ್ಕಳು, ಸಂದೀಪ ಧರ್, ಬಾಲಿಕಾ ವಧು' ಖ್ಯಾತಿಯ ಅವಿಕಾ ಗೋರ್, ಮಹೇಶ್ ಭಟ್, ಪೂಜಾ ಭಟ್, ಅಫ್ತಾಬ್ ಶಿವದಾಸನಿ, ಸಂದೀಪ ಧರ್ ಸೇರಿದಂತೆ ಹಲವು ಬಿ - ಟೌನ್ ಸೆಲೆಬ್ರಿಟಿಗಳು ಭಾಗವಹಿಸಿ ನವವಿವಾಹಿತರನ್ನು ಆಶೀರ್ವದಿಸಿದರು.
ಸಮಾರಂಭಕ್ಕೆ ಆಗಮಿಸಿದ ಗಣ್ಯರಲ್ಲಿ ನಟ ಬಾಬಿ ಡಿಯೋಲ್ ಕೂಡ ಒಬ್ಬರು. ಬಾಬಿ ವಿಕ್ರಮ್ ಭಟ್ ಮತ್ತು ಅವರ ಕುಟುಂಬದೊಂದಿಗೆ ಪೋಸ್ ನೀಡುತ್ತಿರುವುದು ಕಂಡು ಬಂದಿದೆ. ಸನ್ನಿ ಲಿಯಾನ್ ಲೆಹೆಂಗಾ ಧರಿಸಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ಮದುವೆಯಲ್ಲಿ ಭಾಗವಹಿಸಿದ್ದರು. ಮದುವೆ ಸಮಾರಂಭದಲ್ಲಿ ವಧು ಕೃಷ್ಣ ಗೋಲ್ಡನ್ ವರ್ಕ್‌ನೊಂದಿಗೆ ಮರೂನ್ ಸಾಂಪ್ರದಾಯಿಕ ಲೆಹೆಂಗಾ ಧರಿಸಿದ್ದರೆ, ವರ ವೇದಾಂತ್ ಬಿಳಿ ಶೆರ್ವಾನಿ ಮತ್ತು ಶೂ ಧರಿಸಿ ಗಮನ ಸೆಳೆದರು.
ಮದುವೆಯ ಆರತಕ್ಷತೆಗೂ ಮುನ್ನ ಭಟ್ ವಂಶಸ್ಥರು ಕೃಷ್ಣ ಮತ್ತು ವೇದಾಂತ್ ಅವರಿಗಾಗಿ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದರು. ವಿಕ್ರಮ್ ಭಟ್ ಅವರು ತಮ್ಮ ಮಗಳ ಜೊತೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ವಿಡಿಯೋದಲ್ಲಿ, ಕೃಷ್ಣ ತನ್ನ ತಂದೆಯೊಂದಿಗೆ ನೃತ್ಯ ಮಾಡುವಾಗ ಸುಂದರವಾದ ನೀಲಿಬಣ್ಣದ ಲೆಹೆಂಗಾ ಧರಿಸಿರುವುದನ್ನು ಕಾಣಬಹುದು. ಕೃಷ್ಣ ಅವರು "ಹಾಂಟೆಡ್", "ಕ್ರಿಯೇಚರ್" ಮತ್ತು "ಮಿಸ್ಟರ್ ಎಕ್ಸ್" ನಂತಹ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.