ಕರ್ನಾಟಕ

karnataka

ETV Bharat / entertainment

ಬ್ಲಾಕ್​ಬಸ್ಟರ್​ 'ಕೌಸಲ್ಯಾ ಸುಪ್ರಜಾ ರಾಮ' ನೋಡಿಲ್ವಾ? ಹಾಗಿದ್ರೆ ಈ OTTಯಲ್ಲಿ ವೀಕ್ಷಿಸಿ​ - ರಂಗಾಯಣ ರಘು

'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಇಂದಿನಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್​ ಆಗಲಿದೆ.

Kousalya Supraja Rama movie streaming now on amazon prime
'ಕೌಸಲ್ಯಾ ಸುಪ್ರಜಾ ರಾಮ'

By ETV Bharat Karnataka Team

Published : Sep 15, 2023, 8:48 PM IST

2023ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ 'ಕೌಸಲ್ಯಾ ಸುಪ್ರಜಾ ರಾಮ' ಜುಲೈ 28ರಂದು ತೆರೆಕಂಡು ಬ್ಲಾಕ್​ಬಸ್ಟರ್​ ಹಿಟ್​ ಪಡೆದುಕೊಂಡಿದೆ. 'ಲವ್​ ಮಾಕ್ಟೇಲ್​' ಖ್ಯಾತಿಯ ನಟ ಡಾರ್ಲಿಂಗ್​ ಕೃಷ್ಣ ಮತ್ತು ಮೊಗ್ಗಿನ ಮನಸ್ಸು, ಬಚ್ಚನ್​, ಮುಂಗಾರು ಮಳೆ 2 ಮುಂತಾದ ಹಿಟ್​ ಚಿತ್ರಗಳನ್ನು ನೀಡಿರುವ ಸ್ಯಾಂಡಲ್​ವುಡ್​ ಸ್ವ-ಮೇಕ್​ ನಿರ್ದೇಶಕ ಶಶಾಂಕ್​ ಕಾಂಬೋದಲ್ಲಿ ಮೂಡಿಬಂದ ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್​ ಸಿಕ್ಕಿದೆ. 50 ದಿನ ಥಿಯೇಟರ್​ಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟಿದೆ.

ಹೌದು. 'ಕೌಸಲ್ಯಾ ಸುಪ್ರಜಾ ರಾಮ' ಯಾವಾಗ ಓಟಿಟಿಗೆ ಬರಲಿದೆ? ಎಂಬ ಪ್ರಶ್ನೆ ಬಹುತೇಕ ಸಿನಿ ಪ್ರೇಮಿಗಳಿತ್ತು. ಅದಕ್ಕೆ ಉತ್ತರವಾಗಿ ಇಂದಿನಿಂದ (ಸೆಪ್ಟೆಂಬರ್​ 15) ಚಿತ್ರವು ಓಟಿಟಿ ಫ್ಲಾಟ್​ಫಾರ್ಮ್​ ಅಮೆಜಾನ್​ ಪ್ರೈಮ್​ನಲ್ಲಿ ಸ್ಟ್ರೀಮಿಂಗ್​ ಆಗಲಿದೆ. ಈ ಬಗ್ಗೆ ಚಿತ್ರತಂಡ ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದೆ. ಥಿಯೇಟರ್​ಗಳಲ್ಲಿ ಚಿತ್ರ ವೀಕ್ಷಿಸದ ಜನರು ಇಂದಿನಿಂದ ಮನೆಯಲ್ಲಿ ಕುಳಿತು ನೋಡಬಹುದು.

ಚಿತ್ರಕಥೆ: 'ಕೌಸಲ್ಯಾ ಸುಪ್ರಜಾ ರಾಮ' ಒಂದು ರೀತಿಯಲ್ಲಿ ಎಲ್ಲರ ಮನೆಯ ಕಥೆಯಂತಿದೆ. ಸಿನಿಮಾ ನೋಡದೇ ಟ್ರೇಲರ್​ ಮಾತ್ರ ನೋಡಿರುವವರಿಗೆ ಇದು ಪುರುಷ ಪ್ರಧಾನ ಸಮಾಜದ ಕಥೆ ಎನಿಸುತ್ತದೆ. ಆದರೆ ಪುರುಷ ಪ್ರಧಾನ ಸಮಾಜದ ಪ್ರತೀಕದಂತಿರುವ ನಾಯಕ ನಟ ನಂತರದಲ್ಲಿ ಏನಾಗುತ್ತಾನೆ? ಅನ್ನೋದೇ ಕಥಾಹಂದರ. ಪುರುಷರ ಅಹಂ ಎಂಬುದು ಸಮಾಜವನ್ನು ಎಷ್ಟು ಆವರಿಸಿಕೊಂಡಿದೆ. ಅದರ ಪರಿಣಾಮ ಏನು ಎಂಬುದನ್ನು ಈ ಸಿನಿಮಾ ಹೇಳುತ್ತದೆ. ಇದು ತಾಯಿ ಮತ್ತು ಮಗನ ಬಾಂಧವ್ಯದ ಕಥೆಯ ಜೊತೆಗೆ ವಿಭಿನ್ನವಾಗಿದೆ.

ಇದನ್ನೂ ಓದಿ:Kausalya Supraja Rama: 'ಕೌಸಲ್ಯ ಸುಪ್ರಜಾ ರಾಮ' ಚಿತ್ರದ ಟ್ರೇಲರ್​ನಲ್ಲಿ‌ ನಂಬಿಕೆ, ಸಂಬಂಧಗಳ ಸಂಘರ್ಷವಿದೆ- ಕಿಚ್ಚ ಸುದೀಪ್‌

ಇಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ವಿಶೇಷ ಮಹತ್ವ ನೀಡಲಾಗಿದೆ. ರಂಗಾಯಣ ರಘು ಅವರ ಆಕ್ಟಿಂಗ್​ ಅಂತೂ ಸೂಪರ್​ ಆಗಿದೆ. ಸ್ಟ್ರಿಕ್ಟ್​ ಅಪ್ಪನಾಗಿ ಕಂಡಿದ್ದಾರೆ. ನಾಗಭೂಷಣ್​ ಅವರ ಪಾತ್ರವೂ ಉತ್ತಮವಾಗಿದೆ. ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದ್ದು, ಕೃಷ್ಣನನ್ನು ಪ್ರೀತಿಯ ಬಲೆಗೆ ಬೀಳಿಸುವ ಪರಿ ಚೆನ್ನಾಗಿದೆ. ಮಿಲನಾ ನಾಗರಾಜ್​ ಅವರು ಚಿತ್ರದಲ್ಲಿ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಾ ಬೆಳವಾಡಿ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರತಂಡ ಹೀಗಿದೆ.. ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್​, ಬೃಂದಾ ಆಚಾರ್ಯ, ಸುಧಾ ಬೆಳವಾಡಿ, ರಂಗಾಯಣ ರಘು, ಅಚ್ಯುತ್​ ಕುಮಾರ್​, ಗಿರಿರಾಜ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ, ಸುಜ್ಞಾನ್​ ಛಾಯಾಗ್ರಹಣವಿದೆ. ಶಶಾಂಕ್​ ಸಿನಿಮಾಸ್​ ಮತ್ತು ಬಿ. ಸಿ. ಪಾಟೀಲ್​ ಅವರ ಕೌರವ ಪ್ರೊಡಕ್ಷನ್​ ಹೌಸ್​ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ:ನನ್ನ ಸಿನಿ ಜರ್ನಿಯಲ್ಲೇ ನಾನು ಕೇಳಿರುವ ಉತ್ತಮ ಕಥೆ 'ಕೌಸಲ್ಯ ಸುಪ್ರಜಾ ರಾಮ': ಡಾರ್ಲಿಂಗ್ ಕೃಷ್ಣ

ABOUT THE AUTHOR

...view details