ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಚಾಟ್ ಶೋ 'ಕಾಫಿ ವಿತ್ ಕರಣ್' ಸೀಸನ್ 8 ಇದೇ ತಿಂಗಳಲ್ಲಿ ಪ್ರಸಾರ ಪ್ರಾರಂಭಿಸಲಿದೆ. ಸುಮಾರು 20 ವರ್ಷಗಳಿಂದ ಮೂಡಿಬರುತ್ತಿರುವ ಈ ಶೋಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಬಾಲಿವುಡ್ ಬ್ಯೂಟಿಫುಲ್ ಕಪಲ್ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕಾರ್ಯಕ್ರಮದ ಮೊದಲ ಅತಿಥಿಯಾಗಿದ್ದಾರೆ. 'ಕಾಫಿ ವಿತ್ ಕರಣ್' ತಂಡ ಮೊದಲ ಸಂಚಿಕೆಯ ಪ್ರೋಮೋವನ್ನು ಹಂಚಿಕೊಂಡಿದೆ.
'ಕಾಫಿ ವಿತ್ ಕರಣ್' ಟಾಕ್ ಶೋನಲ್ಲಿ ಹೆಸರಾಂತ ಸೆಲೆಬ್ರಿಟಿಗಳ ಇಡೀ ಜೀವನದ ಕಥೆಯನ್ನೇ ತೆರೆದಿಡಲಾಗುತ್ತದೆ. ಶೋ ಸಖತ್ ಮನರಂಜನೆಯನ್ನು ನೀಡುತ್ತದೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ರಣ್ವೀರ್ ಮತ್ತು ದೀಪಿಕಾ ತಮ್ಮ ಸಂಬಂಧದ ಬಗ್ಗೆ ತಮಾಷೆಯಾಗಿ ಮಾತನಾಡುತ್ತಿರುವುದನ್ನು ಕಾಣಬಹುದು. ದೀಪಿಕಾ ಅವರು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದಲ್ಲಿ ರಣವೀರ್ ಸಿಂಗ್ ಅವರ 'ರಾಕಿ ರಾಂಧವಾ' ಪಾತ್ರವನ್ನು ಮದುವೆಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. 2015ರಲ್ಲಿ ದೀಪಿಕಾಗೆ ರಣ್ವೀರ್ ಪ್ರಪೋಸ್ ಮಾಡಿದ ಕಥೆಯೂ ಇದರಲ್ಲಿ ಸೇರಿಕೊಂಡಿದೆ.
'ಕಾಫಿ ವಿತ್ ಕರಣ್' ಸೀಸನ್ 8ರ ಮೊದಲ ಅತಿಥಿಗಳಾಗಿ ಆಗಮಿಸಿದ ಡೈನಾಮಿಕ್ ಜೋಡಿ ದೀಪ್ವೀರ್ ಬ್ಲ್ಯಾಕ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಮ್ಯಾಚಿಂಗ್ ಸೆನ್ಸ್ಗೆ ಕರಣ್ ಜೋಹರ್ ಮೆಚ್ಚುಗೆ ಸೂಚಿಸಿದ್ದಾರೆ. ರಣ್ವೀರ್ ಹೊರತಾಗಿ ನಿಮ್ಮ ಅತ್ಯುತ್ತಮ ಆನ್ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಕೇಳಿದಾಗ ಹೃತಿಕ್ ರೋಷನ್ ಅವರ ಹೆಸರನ್ನು ದೀಪಿಕಾ ಪ್ರಸ್ತಾಪಿಸಿದ್ದಾರೆ. ಪ್ರೋಮೋದಲ್ಲಿ ದೀಪ್ವೀರ್ ಪ್ರೀತಿಯ ಕ್ಷಣಗಳು, ತಮಾಷೆಯ ನೋಟ, ಸಂತೋಷ ಎಲ್ಲವನ್ನೂ ಕಾಣಬಹುದು.