ಹೈದರಾಬಾದ್ (ತೆಲಂಗಾಣ): ಅತ್ಯಂತ ಜನಪ್ರಿಯ ಚಾಟ್ ಶೋನ ಏಳನೇ ಸೀಸನ್ ಈ ಬಾರಿ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಹೋಸ್ಟ್ ಕರಣ್ ಜೋಹರ್ ಹೇಳಿಕೆ ನೀಡಿದ ನಂತರ ಕಾಫಿ ವಿತ್ ಕರಣ್ ಸುತ್ತಲಿನ ಬಝ್ ವೇಗ ಪಡೆಯುತ್ತಿದೆ. ಈ ಬಾರಿ ಬಾಲಿವುಡ್ ಗಡಿ ಮೀರಿ ಟಾಲಿವುಡ್ನ ಪುಷ್ಪಾ ಸ್ಟಾರ್‌ಗಳಾದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕರಣ್ ಜೊತೆ ಕಾಫಿ ಶೇರ್ ಮಾಡಿಕೊಳ್ಳಲಿದ್ದಾರೆ ಎಂಬ ವರದಿಗಳು ಸುದ್ದಿಯಲ್ಲಿವೆ.
ಪ್ಯಾನ್ - ಇಂಡಿಯಾದಲ್ಲಿ ಅಭಿಮಾನಿಗಳನ್ನು ಗಳಿಸಿರುವ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಜೋಡಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ತಮ್ಮ ಚೊಚ್ಚಲ ಶೋಗೆ ಪ್ರವೇಶಿಸಲು ಸಿದ್ದರಾಗಿದ್ದಾರೆ ಎಂದು ವಿವಿಧ ವರದಿಗಳು ಹೇಳುತ್ತವೆ. ಕಾಫಿ ವಿತ್ ಕರಣ್ ನಿರ್ಮಾಪಕರು ಪುಪ್ಪ ತಾರೆಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ, ಇನ್ನೂ ಇಬ್ಬರಿಂದ ಒಪ್ಪಿಗೆ ಸಿಕ್ಕಿಲ್ಲ. ರಶ್ಮಿಕಾ ಈಗಾಗಲೇ ಒಂದೆರಡು ಹಿಂದಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರೆ, ಅಲ್ಲು ಅರ್ಜುನ್ ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಗೆ ಭೇಟಿ ನೀಡಿರುವುದು ಏಸ್ ಚಲನಚಿತ್ರ ನಿರ್ಮಾಪಕರೊಂದಿಗಿನ ಅವರ ಸಹಯೋಗದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.