ಮುಂಬೈ:ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಚಾಟ್ ಶೋ ಕಾಫಿ ವಿತ್ ಕರಣ್ನಲ್ಲಿ ನಟಿ ಕತ್ರಿನಾ ಕೈಪ್ ಭಾಗವಹಿಸಿದ್ದಾರೆ. ಈ ವೇಳೆ ಮದುವೆಯ ಮೊದಲ ರಾತ್ರಿಯ ಬಗ್ಗೆ ಶೋನಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಈ ಹಿಂದೆ ಇನ್ನೊಬ್ಬ ನಟಿ ಆಲಿಯಾ ಭಟ್ ಕೂಡ ಮೊದಲ ರಾತ್ರಿ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು.
ನಟಿ ಕತ್ರಿನಾ ಕೈಫ್ ಅವರು ಸಹ ನಟರಾದ ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಸುಹಾಗ್ ರಾತ್ ಪರಿಕಲ್ಪನೆಯ ಬಗ್ಗೆ ಮಾತನಾಡಿರುವ ಪ್ರೋಮೋವನ್ನು ತಂಡ ಬಿಡುಗಡೆ ಮಾಡಿದೆ.
ಫಸ್ಟ್ನೈಟ್ ಬಗ್ಗೆ ಕರಣ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕತ್ರಿನಾ "ಅದು ಮೊದಲ ರಾತ್ರಿಯಾಗಿರದೇ ಮೊದಲ ದಿನವಾಗಿರುತ್ತದೆ. ದಣಿದವರಿಗೆ ಇದೊಂದು ಉತ್ತಮ ಅವಕಾಶ" ಎಂಬ ರೀತಿ ಹೇಳಿಕೆ ನೀಡಿದ್ದಾರೆ.
ಕತ್ರಿನಾ ಜೊತೆಗೆ ಬಂದಿದ್ದ ಯುವ ನಟ ಇಶಾನ್ ಖಟ್ಟರ್ ತಾವೀಗ ಸಿಂಗಲ್ ಎಂದು ಹೇಳಿಕೊಂಡಿದ್ದಾರೆ. ನಟಿ ಅನನ್ಯಾ ಪಾಂಡೆ ಅವರೊಂದಿಗೆ ಅವರು ಡೇಟಿಂಗ್ ನಡೆಸುತ್ತಿದ್ದರು ಎಂಬ ಗುಸುಗುಸು ಹಬ್ಬಿತ್ತು. ಇನ್ನೊಂದೆಡೆ ಅಮಿತಾಭ್ ಬಚ್ಚನ್ ಅವರ ಮೊಮ್ಮಗಳಾದ ನವ್ಯಾ ನವೇಲಿ ನಂದಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವ ನಟ ಸಿದ್ಧಾಂತ್ ಚತುರ್ವೇದಿ ತಾವೂ ಕೂಡ ಸಿಂಗಲ್ ಎಂದು ಹೇಳಿರುವುದು ಪ್ರೋಮೋದಲ್ಲಿದೆ.
ಇನ್ನು, ಸಿನಿಮಾ ವಿಚಾರಕ್ಕೆ ಬಂದರೆ ಕತ್ರಿನಾ ಕೈಫ್, ಇಶಾನ್ ಮತ್ತು ಸಿದ್ಧಾಂತ್ ಚತುರ್ವೇದಿ ಮತ್ತು ಫರ್ಹಾನ್ ಅಖ್ತರ್ ಅವರು "ಫೋನ್ ಭೂತ್" ಸಿನಿಮಾದಲ್ಲಿ ನಟಿಸಿದ್ದಾರೆ. ಇದೊಂದು ಹಾಸ್ಯಭರಿತ ಸಿನಿಮಾವಾಗಿದ್ದು, ಶೀಘ್ರದಲ್ಲೇ ತೆರೆ ಕಾಣಲಿದೆ.
ಕಾಫಿ ವಿತ್ ಕರಣ್ನ ಈ ಹಿಂದಿನ ಸಂಚಿಕೆಯಲ್ಲಿ ಆಲಿಯಾ ಭಟ್ "ಮೊದಲ ರಾತ್ರಿ ಎಂಬುದು ಇರುವುದಿಲ್ಲ. ಅಂದು ನೀವು ಸುಸ್ತಾಗಿರುತ್ತೀರಿ" ಎಂದು ಹೇಳಿದಾಗ ಜೊತೆಗಿದ್ದ ರಣವೀರ್ ಸಿಂಗ್ ಮತ್ತು ಕರಣ್ ಜೋರಾಗಿ ನಕ್ಕಿದ್ದರು.
ಓದಿ:ಅಮಿತಾಭ್ ಬಚ್ಚನ್ ರಶ್ಮಿಕ ಅಭಿನಯದ ಗುಡ್ ಬೈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ