ಕರ್ನಾಟಕ

karnataka

ETV Bharat / entertainment

'ಕ್ಲಾಂತ' ಟೀಸರ್​ ರಿಲೀಸ್​: ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಸಂಗೀತಾ ಭಟ್​ - ಈಟಿವಿ ಭಾರತ ಕನ್ನಡ

ಸಂಗೀತಾ ಭಟ್ ನಟನೆಯ ಕ್ಲಾಂತ' ಚಿತ್ರದ ಟೀಸರ್ A2 ಮ್ಯೂಸಿಕ್ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ.

Klanta movie teaser released
'ಕ್ಲಾಂತ' ಟೀಸರ್​ ರಿಲೀಸ್​: ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಸಂಗೀತಾ ಭಟ್​

By ETV Bharat Karnataka Team

Published : Oct 8, 2023, 2:01 PM IST

ಸಂಗೀತಾ ಭಟ್ ಬಹಳ ದಿನಗಳ ಬಳಿಕ ಕನ್ನಡ ಚಿತ್ರರಂಗಕ್ಕೆ 'ಕ್ಲಾಂತ' ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ವಿಭಿನ್ನ ಹೆಸರಿನ ಮೂಲಕ ಗಮನ ಸೆಳೆಯುತ್ತಿರುವ ಈ ಚಿತ್ರದ ಟೀಸರ್ A2 ಮ್ಯೂಸಿಕ್ ಚಾನೆಲ್​ನಲ್ಲಿ ಬಿಡುಗಡೆಯಾಗಿದೆ. ಪ್ರೇಕ್ಷಕರ ನಿರೀಕ್ಷೆಯನ್ನು ದ್ವಿಗುಣಗೊಳಿಸುವ ರೀತಿಯಲ್ಲಿ ಸಿನಿಮಾದ ಮೊದಲ ನೋಟ ಮೂಡಿಬಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಟೀಸರ್ ಇದ್ದು, ಸಂಗೀತಾ ಅವರ ನಟನೆ ಎಲ್ಲರ ಗಮನ ಸೆಳೆದಿದೆ.

ಚಿತ್ರಕಥೆ: 'ರಂಗನ್ ಸ್ಟೈಲ್', 'ದಗಲು ಬಾಜಿಲು' ಸೇರಿದಂತೆ ವಿಭಿನ್ನ ಕಥೆಗಳಿಗೆ ಆಕ್ಷನ್​ ಕಟ್​ ಹೇಳಿರುವ ವೈಭವ್​ ಪ್ರಶಾಂತ್​ ಅವರು ಕ್ಲಾಂತ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ದಟ್ಟ ಅರಣ್ಯಕ್ಕೆ ತೆರಳುವ ಇಬ್ಬರು ಪ್ರೇಮಪಕ್ಷಿಗಳನ್ನು ಗ್ಯಾಂಗ್ ಒಂದು ಅಟ್ಯಾಕ್ ಮಾಡುತ್ತದೆ. ಆ ಗ್ಯಾಂಗ್​ನಿಂದ ಈ ಜೋಡಿ ಹೇಗೆ ತಪ್ಪಿಕೊಂಡು ಬರ್ತಾರೆ ಮತ್ತು ಅವರ ವಿರುದ್ಧ ಹೇಗೆ ಹೋರಾಡ್ತಾರೆ ಅನ್ನೋದು ಕಥೆ. ಅನ್ನೋದು ಚಿಕ್ಕದಾಗಿ ಟೀಸರ್​ನಲ್ಲೂ ತೋರಿಸಲಾಗಿದೆ.

'ಕ್ಲಾಂತ' ಟೀಂ: 'ಕ್ಲಾಂತ' ಚಿತ್ರದಲ್ಲಿ ಎಂ.ವಿಘ್ನೇಶ್​ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಸಂಗೀತಾ ಭಟ್​ ಇದ್ದಾರೆ. ಉಳಿದಂತೆ ಶೋಭರಾಜ್, ವೀಣಾ ಸುಂದರ್, ಕಾಮಿಡಿ ಕಿಲಾಡಿ ದೀಪಿಕಾ, ಪ್ರವೀಣ್ ಜೈನ್, ಯುವ, ತಿಮ್ಮಪ್ಪ ಕುಲಾಲ್, ಸ್ವಪ್ನ, ರಾಘವೇಂದ್ರ ಕಾರಂತ್, ಪಂಚಮಿ ವಾಮಂಜೂರ್, ವಾಮದೇವ ಪುಣಿಂಚತ್ತಾಯ ಮುಂತಾದ ಕಲಾವಿದರಿದ್ದಾರೆ.

'ಕ್ಲಾಂತ' ಟೀಸರ್​ ರಿಲೀಸ್​: ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಸಂಗೀತಾ ಭಟ್​

ಸಿನಿಮಾ ಚಿತ್ರೀಕರಣವನ್ನು ಕುಕ್ಕೆ ಸುಬ್ರಹ್ಮಣ್ಯ , ಗುಂಡ್ಯ, ಕಳಸ ಸುತ್ತಮುತ್ತ ಕಾಡು ಪ್ರದೇಶಗಳಲ್ಲಿ ಮಾಡಲಾಗಿದೆ. ಪಕ್ಕಾ ಆಕ್ಷನ್​, ಸಸ್ಪೆನ್ಸ್​ ಥ್ರಿಲ್ಲರ್​ ಚಿತ್ರ ಇದಾಗಿದೆ. ಸಿನಿಮಾಗೆ ಎಸ್.ಪಿ.ಚಂದ್ರಕಾಂತ್ ಸಂಗೀತ, ಪಿ.ಆರ್.ಸೌಂದರ್ ರಾಜ್ ಸಂಕಲನ, ಮೋಹನ್ ಲೋಕನಾಥ್ ಛಾಯಾಗ್ರಹಣವಿದೆ. ವಿನೋದ್​ ಸಾಹಸ ನಿರ್ದೇಶನ, ಸಂತೋಷ್ ನಾಯ್ಕ್, ವರಾಹ ರೂಪಂ ಖ್ಯಾತಿಯ ಶಶಿರಾಜ್ ಕಾವೂರ್, ವೈಭವ್ ಪ್ರಶಾಂತ್ ಸಾಹಿತ್ಯ ಹಾಡುಗಳಿಗಿದ್ದು, ಮಹೇಶ್ ದೇವ್.ಡಿ.ಎನ್.ಪುರ ಸಂಭಾಷಣೆ ಇದೆ.

ಇದನ್ನೂ ಓದಿ:'ನಾ ಕೋಳಿಕ್ಕೆ‌ ರಂಗ'ನಾಗಿ ಮಾಸ್ಟರ್​ ಆನಂದ್;​ ನವೆಂಬರ್​ 10ರಿಂದ ಆಟ ಶುರು

ಎರಡು ಹಾಡುಗಳಿಗೆ ರಘು ಅವರ ನೃತ್ಯ ಸಂಯೋಜನೆ ಇದೆ. ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ಅಡಿ ಉದಯ್ ಅಮ್ಮಣ್ಣಾಯ ಬಂಡವಾಳ ಹೂಡಿದ್ದಾರೆ. ಅರುಣ್ ಗೌಡ, ಪ್ರದೀಪ್ ಗೌಡ, ಹೇಮಂತ್ ರೈ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಚಿತ್ರವನ್ನು ಶೀಘ್ರದಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದೆ.

ಈ ಹಿಂದೆ ನಟಿ ಸಂಗೀತಾ ಭಟ್ ಮಾತನಾಡಿ, "ನನಗೆ ಈ ಸಿನಿಮಾ ತುಂಬಾನೇ ವಿಶೇಷ. ಕೆಲ ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿದ್ದೆ. ನಾನು ಕಂಬ್ಯಾಕ್ ಮಾಡಿದಾಗ ಸೈನ್ ಮಾಡಿದ ಮೊದಲ ಚಿತ್ರವಿದು. ಟೀನೇಜ್ ದಾಟಿ ಈಗ ತಾನೇ ಕೆಲಸ ಮಾಡುವ ಪಾತ್ರ ನನ್ನದು. ಹೆಚ್ಚಾಗಿ ಕಾಡಿನಲ್ಲಿ ಶೂಟ್ ಮಾಡಲಾಗಿದ್ದು, ಒಂದೊಳ್ಳೆ ಅನುಭವ. ಇಲ್ಲಿ ನನ್ನ ಪಾತ್ರಕ್ಕೆ ಬೇಕಾದ ಫಿಟ್ನೆಸ್, ಭಾವನೆಗಳನ್ನು ಬದಲಾಯಿಸಿದ್ದೇನೆ. ಫೈಟ್ ಸೀಕ್ವೆನ್ಸ್ ಮಾಡಿದ್ದು, ಖುಷಿ ಕೊಟ್ಟಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಇದನ್ನೂ ಓದಿ:'ಕ್ಲಾಂತ' ಮೂಲಕ ಚಿತ್ರರಂಗಕ್ಕೆ ಮರಳಿದ ಸಂಗೀತಾ ಭಟ್

ABOUT THE AUTHOR

...view details