ಸಂದೀಪ್ ರೆಡ್ಡಿ ವಂಗಾ ಅವರ 'ಅನಿಮಲ್' ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಪ್ರಮುಖ ಪಾತ್ರ ನಿರ್ವಹಿಸಿರುವ ಬಾಬಿ ಡಿಯೋಲ್ ಕೆಲ ಆಶ್ಚರ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್ ಒಂದರಲ್ಲಿ ಬಾಬಿ ಡಿಯೋಲ್ ಪಾತ್ರವಾದ ಅಬ್ರಾರ್ ಮತ್ತು ರಣ್ಬೀರ್ ಕಪೂರ್ ಪಾತ್ರವಾದ ರಣ್ವಿಜಯ್ ಮುಖಾಮುಖಿಯಾಗುತ್ತಾರೆ. ಇಬ್ಬರೂ ಶರ್ಟ್‌ಲೆಸ್ ಆಗಿದ್ದು, ಫೈಟ್‌ನಲ್ಲಿ ತೊಡಗುತ್ತಾರೆ. ಇತ್ತೀಚೆಗೆ ಈ ಸೀನ್ ಬಗ್ಗೆ ಸಂದರ್ಶನವೊಂದರಲ್ಲಿ ಬಾಬಿ ಡಿಯೋಲ್ ಮಾತನಾಡಿದ್ದಾರೆ. ಎರಡು ಪಾತ್ರಗಳ ನಡುವೆ ಪ್ರೀತಿ - ದ್ವೇಷ ಇತ್ತು. ಇದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ನಿರ್ದೇಶನ ಶೈಲಿಯ ಪ್ರತಿಫಲ ಎಂದು ತಿಳಿಸಿದ್ದಾರೆ.
ನಿರ್ದೇಶಕರು ಥಿಯೇಟ್ರಿಕಲ್ ಆವೃತ್ತಿಯಿಂದ ಪ್ರಮುಖ ಸೀನ್ ಒಂದನ್ನು ತೆಗೆದುಹಾಕಿದ್ದಾರೆ. ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾದಾಗ ಆ ಸೀನ್ ಸಿಗಬಹುದು ಎಂದು ಬಾಬಿ ಡಿಯೋಲ್ ಚಿತ್ರದಲ್ಲಿನ ಪ್ರಮುಖ ಕ್ಷಣವೊಂದನ್ನು ಬಹಿರಂಗಪಡಿಸಿದ್ದಾರೆ. ಅಬ್ರಾರ್ ಪಾತ್ರವನ್ನು ನಿರ್ದೇಶಕರು ವಿವರಿಸಿದ ರೀತಿಯನ್ನು ಬಾಬಿ ಡಿಯೋಲ್ ಸಂದರ್ಶನದಲ್ಲಿ ನೆನಪಿಸಿಕೊಂಡರು. ''ಇಬ್ಬರು ಸಹೋದರರು ಒಬ್ಬರನ್ನೊಬ್ಬರು ಕೊಲ್ಲಲು ಬಯಸುತ್ತಾರೆ, ಆದರೂ ಅವರನ್ನು ಬಂಧಿಸುವ ಪ್ರೀತಿ ಅಲ್ಲಿರುತ್ತದೆ. ನಾನು (ಸಂದೀಪ್ ರೆಡ್ಡಿ ವಂಗಾ) ಕ್ಲೈಮ್ಯಾಕ್ಸ್ ಸೀಕ್ವೆನ್ಸ್ ಅನ್ನು ಈ ಪ್ರೀತಿ ತಿಳಿಸುವ ಹಿನ್ನೆಲೆ ಹಾಡಿನೊಂದಿಗೆ ಚಿತ್ರೀಕರಿಸಲಿದ್ದೇನೆ" ಎಂದು ನಿರ್ದೇಶಕರು ವಿವರಿಸಿದ್ದರು ಎಂದು ಬಾಬಿ ಡಿಯೋಲ್ ತಿಳಿಸಿದರು.
ಈ ಎರಡೂ ಪಾತ್ರಗಳ ಚುಂಬನದ ದೃಶ್ಯವೂ ಚಿತ್ರದಲ್ಲಿತ್ತು ಎಂಬುದನ್ನು ನಟ ಬಹಿರಂಗಪಡಿಸಿದರು. ಮಾತು ಮುಂದುವರಿಸಿದ ಬಾಬಿ ಡಿಯೋಲ್, "ನಿರ್ದೇಶಕರು ನನ್ನಲ್ಲಿ ಹೀಗೆ ತಿಳಿಸಿದ್ದರು - ನೀವು ಜಗಳವಾಡುತ್ತೀರಾ, ಇದ್ದಕ್ಕಿದ್ದಂತೆ ಅವರಿಗೆ (ರಣ್ಬೀರ್)ಗೆ ಕಿಸ್ ಕೊಡುತ್ತೀರಾ. ನೀವು ಗಿವ್ ಅಪ್ ಮಾಡುವುದಿಲ್ಲ, ಕೊನೆಗೆ ಅವರು ನಿಮ್ಮನ್ನು ಕೊಲ್ಲುತ್ತಾರೆ' ಎಂದು ದೃಶ್ಯವನ್ನು ವಿವರಿಸಿದ್ದರು. ಅದಾಗ್ಯೂ, ಕಿಸ್ ಸೀನ್ ಅನ್ನು ತೆಗೆದುಹಾಕಲಾಗಿದೆ. ನೆಟ್‌ಫ್ಲಿಕ್ಸ್ ಆವೃತ್ತಿಯಲ್ಲಿ ಲಭ್ಯವಾಗಬಹುದೆಂದು ನನಗನಿಸುತ್ತಿದೆ'' ಎಂದು ಬಾಬಿ ಡಿಯೋಲ್ ಮಾಹಿತಿ ಹಂಚಿಕೊಂಡಿದ್ದಾರೆ .