ಬಾಲಿವುಡ್ ಸೂಪರ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಇಂದು, ಈದ್ ಶುಭ ದಿನದಂದು 100ಕ್ಕೂ ಹೆಚ್ಚು ದೇಶಗಳಲ್ಲಿ ಅದ್ಧೂರಿಯಾಗಿ ತೆರೆ ಕಂಡಿದೆ. ಅಪಾರ ಸಂಖ್ಯೆಯ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ. 'KKBKKJ' ಉತ್ತಮ ಪ್ರದರ್ಶನ ಕಾಣುತ್ತಿದ್ದು, ಗೆಲ್ಲುವ ವಿಶ್ವಾಸದಲ್ಲಿ ಚಿತ್ರ ತಂಡವಿದೆ.
2019ರಲ್ಲಿ ಬಿಡುಗಡೆ ಆದ ಭಾರತ್, ದಬಾಂಗ್ 3 ಸಲ್ಮಾನ್ ಖಾನ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದ ಚಿತ್ರ. ಬಳಿಕ ಕೆಲ ಚಿತ್ರಗಳಲ್ಲಿ ಅತಿಥಿ ಪಾತ್ರ ವಹಿಸಿದ್ದು, 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿರುವ ಸಿನಿಮಾ. ಟೀಸರ್, ಟ್ರೇಲರ್, ಪೋಸ್ಟರ್, ಹಾಡು ಸೇರಿದಂತೆ ಭರ್ಜರಿ ಪ್ರಚಾರದಿಂದ ಸದ್ದು ಮಾಡಿದ್ದ ಈ ಸಿನಿಮಾ ಇಂದು ಬಿಡುಗಡೆ ಆಗಿದೆ.
ಚಿತ್ರದಲ್ಲಿ ಸೌತ್ ಬ್ಯೂಟಿ ಪೂಜಾ ಹೆಗ್ಡೆ ಜೊತೆಗೆ ವೆಂಕಟೇಶ್ ದಗ್ಗುಬಾಟಿ, ಶೆಹನಾಜ್ ಗಿಲ್, ಪಲಕ್ ತಿವಾರಿ, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್ ಮತ್ತು ಜಗಪತಿ ಬಾಬು ಅವರಂತಹ ನಟರು ಸಹ ಕಾಣಿಸಿಕೊಂಡಿದ್ದಾರೆ. ಶೆಹನಾಜ್ ಗಿಲ್, ಪಲಕ್ ತಿವಾರಿ ಅವರಿಗಿದು, ಚೊನ್ನಲ ಹಿಂದಿ ಚಿತ್ರ. ಚಲನಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಸೋಮವಾರ ಸಂಜೆ ಆರಂಭಗೊಂಡಿತ್ತು.
ಬಹು ತಾರಾಗಣದ ಚಿತ್ರವು 100ಕ್ಕೂ ಹೆಚ್ಚು ದೇಶಗಳಲ್ಲಿ ತೆರೆ ಕಂಡಿದೆ. ನಮ್ಮ ದೇಶದಲ್ಲಿ 4,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಮತ್ತು ವಿದೇಶಗಳಲ್ಲಿ 1,200ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪ್ರತಿ ದಿನ ಸುಮಾರು 16,000 ಪ್ರದರ್ಶನಗಳು ನಡೆಯಲಿವೆ. ಇದು ಭಾರತದಲ್ಲಿ 4,500ಕ್ಕೂ ಹೆಚ್ಚು ಪರದೆಗಳನ್ನು ಬಿಡುಗಡೆ ಆದ ಹಿಂದಿ ಚಲನಚಿತ್ರವಾಗಿದೆ. ಹಾಗಾಗಿ ದೊಡ್ಡ ಮಟ್ಟದ ಕಲೆಕ್ಷನ್ ಆಗಲಿದೆ ಅನ್ನೋದು ಸಿನಿ ಪಂಡಿತರ ಅಂದಾಜು.