ಕರ್ನಾಟಕ

karnataka

ETV Bharat / entertainment

ಸಲ್ಮಾನ್ ಖಾನ್ ಅಭಿನಯದ 'ನೈಯೋ ಲಗ್ದಾ' ಟೀಸರ್​ ರಿಲೀಸ್​ - ನೈಯೋ ಲಗ್ದಾ ಹಾಡು

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ನೈಯೋ ಲಗ್ದಾ ಹಾಡು ನಾಳೆ ಬಿಡುಗಡೆ ಆಗಲಿದ್ದು, ಇಂದು ಹಾಡಿನ ಟೀಸರ್​ ಅನಾವರಣಗೊಂಡಿದೆ.

Salman Khan
ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್ ಖಾನ್

By

Published : Feb 11, 2023, 5:21 PM IST

ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್ ಖಾನ್ ಅಭಿನಯದ ಮುಂಬರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi Ki Jaan) ಚಿತ್ರದ ನಿರ್ಮಾಪಕರು ಇಂದು ನೈಯೋ ಲಗ್ದಾ ಹಾಡಿನ (Naiyo Lagda teaser) ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ನೈಯೋ ಲಗ್ದಾ ಹಾಡನ್ನು ಲಡಾಖ್‌ನ ಸುಂದರ ಕಣಿವೆ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ. ನೈಯೋ ಲಗ್ದಾ ಟೀಸರ್ ಪ್ರಕಾರ, ಹಾಡು ಸಂಪೂರ್ಣ ಪ್ರೇಮಗೀತೆ ಆಗಿದ್ದು, ಈ ಸಾಲಿನ ಪ್ರೇಮಿಗಳ ದಿನದ ಆಚರಣೆಗೆ ಸೂಕ್ತವಾಗಿದೆ.

ಈ ಹಾಡಿನಲ್ಲಿ ನಟ ಸಲ್ಮಾನ್ ಖಾನ್​ ಮತ್ತು ನಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಈ ಜೋಡಿಯ ಕೆಮಿಸ್ಟ್ರಿ ಚೆನ್ನಾಗಿ ವರ್ಕ್​ ಔಟ್ ಆದಂತೆ ಕಾಣುತ್ತದೆ. ಹಾಡು ಪ್ರಕೃತಿಯ ಸೊಬಗಿನಲ್ಲಿ ರೊಮ್ಯಾಂಟಿಕ್​ ಆಗಿ ಮೂಡಿ ಬಂದಿರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಈ ರೊಮ್ಯಾಂಟಿಕ್​ ಸಾಂಗ್​ ಅನ್ನು ವೀಕ್ಷಿಸಲು ಸಲ್ಮಾನ್ ಖಾನ್​ ಮತ್ತು ಪೂಜಾ ಹೆಗ್ಡೆ ಅಭಿಮಾನಿಗಳು ಹೆಚ್ಚು ಕಾಯುವ ಅಗತ್ಯ ಬೀಳುವುದಿಲ್ಲ. ಏಕೆಂದರೆ ಈ ಹಾಡು ನಾಳೆ ಝೀ ಮ್ಯೂಸಿಕ್ ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಲಿದೆ.

ನೈಯೋ ಲಗ್ದಾ ಹಾಡು ನಟ ಸಲ್ಮಾನ್ ಖಾನ್ ಮತ್ತು ಸಂಗೀತ ಸಂಯೋಜಕ ಹಿಮೇಶ್ ರೇಶಮ್ಮಿಯಾ (Himesh Reshammiya) ಅವರನ್ನು ಮತ್ತೆ ಒಂದೇ ಸೂರಿನಡಿ ಬರುವಂತೆ ಮಾಡಿದೆ. ಸಂಗೀತ ಸಂಯೋಜಕ ಹಿಮೇಶ್ ರೇಶಮ್ಮಿಯಾ ಅವರು ಸಲ್ಮಾನ್​ ಖಾನ್​ಗಾಗಿ ಈ ಹಿಂದೆ ಸೂಪರ್​ ಹಿಟ್​ ಸಾಂಗ್​ ಆದ ತೇರಿ ಮೇರಿ, ತೇರೆ ನಾಮ್ ಶೀರ್ಷಿಕೆ ಗೀತೆ, ತು ಹಿ ತು ಹರ್ ಜಗ ಸೇರಿದಂತೆ ಮೊದಲಾದ ಬ್ಲಾಕ್‌ಬಸ್ಟರ್ ಹಾಡುಗಳನ್ನು ಸಂಯೋಜಿಸಿದ್ದಾರೆ. ಶಬ್ಬೀರ್ ಅಹ್ಮದ್, ಕಮಾಲ್ ಖಾನ್, ಪಲಕ್ ಮುಚ್ಚಲ್ ಅವರ ಸಾಹಿತ್ಯಕ್ಕೆ ಹಿಮೇಶ್ ರೇಶಮ್ಮಿಯಾ ಸಂಗೀತ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಭಾರೀ ಆಕ್ರೋಶದ ನಡುವೆ ಬಿಡುಗಡೆ ಆದ ಬಾಲಿವುಡ್​ ಕಿಂಗ್​ ಖಾನ್​ ಅಭಿನಯದ ಪಠಾಣ್​ ಚಿತ್ರ ಸೂಪರ್​ ಹಿಟ್​ ಆಗಿ 900 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವಲ್ಲಿ ಯಶಸ್ಸು ಕಂಡಿದೆ. ಪಠಾಣ್​ ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದ ಬಾಲಿವುಡ್​ನ ಮತ್ತೋರ್ವ ಸ್ಟಾರ್​ ಸಲ್ಮಾನ್​ ಖಾನ್ ನಟನೆಯ ಈ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರ ತನ್ನ ಚಿತ್ರೀಕರಣದ ಕೆಲಸವನ್ನು ಪೂರ್ಣಗೊಳಿಸಿದೆ. ಸಲ್ಮಾನ್​ ಖಾನ್​ ಸಿನಿಮಾ ಅಂದ ಮೇಲೆ ನಿರೀಕ್ಷೆ ಹೆಚ್ಚೇ ಅಲ್ವಾ?. ಅದರಂತೆ ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಸಿನಿಮಾ ಬುಧವಾರದಂದು ತನ್ನ ಶೂಟಿಂಗ್​ ಕಂಪ್ಲೀಟ್​ ಮಾಡಿ ಪೋಸ್ಟ್ ಪ್ರೊಡಕ್ಷನ್​ ಕೆಲಸದಲ್ಲಿ ಚಿತ್ರತಂಡ ಬ್ಯುಸಿ ಆಗಿದೆ.

ಇದನ್ನೂ ಓದಿ:ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಶೂಟಿಂಗ್​ ಕಂಪ್ಲೀಟ್: ಸಲ್ಲು ಲುಕ್​ಗೆ ಫ್ಯಾನ್ಸ್ ಫಿದಾ

ಈ ಸಿನಿಮಾಗೆ ಮೊದಲು ಕಭಿ ಈದ್ ಕಭಿ ದೀಪಾವಳಿ ಎಂದು ಶೀರ್ಷಿಕೆ ಫಿಕ್ಸ್ ಆಗಿತ್ತು.​ ಬಳಿಕ ಕಿಸಿ ಕಾ ಭಾಯ್​ ಕಿಸಿ ಕಾ ಜಾನ್​ ಎಂದು ಬದಲಾವಣೆ ಮಾಡಲಾಯಿತು. ಶೂಟಿಂಗ್​ ಫೂರ್ಣಗೊಳಿಸಿರುವ ಈ ಚಿತ್ರದಲ್ಲಿ ನಟ ಸಲ್ಮಾನ್​ ಖಾನ್​ ಜೊತೆಗೆ ನಟಿ ಪೂಜಾ ಹೆಗ್ಡೆ ಮತ್ತು ನಟ ವೆಂಕಟೇಶ್ ದಗ್ಗುಬಾಟಿ ಕೂಡ ಇದ್ದಾರೆ. ಸಲ್ಮಾನ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಸಲ್ಮಾನ್ ಖಾನ್ ಫಿಲ್ಮ್ಸ್ ಈ ಚಿತ್ರದ ನಿರ್ಮಾಣ ಹೊಣೆ ಹೊತ್ತಿದೆ. ಫರ್ಹಾದ್ ಸಾಮ್​ಜಿ ನಿರ್ದೇಶನದಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರೀಕರಣ ಮುಕ್ತಾಯವಾಗಿದೆ.

ABOUT THE AUTHOR

...view details