ಕರ್ನಾಟಕ

karnataka

ETV Bharat / entertainment

'ರಾನಿ' ಶೂಟಿಂಗ್​ ಮುಕ್ತಾಯ​: ವಿಷ್ಣು ಸ್ಮಾರಕದ ಮುಂದೆ ಕುಂಬಳಕಾಯಿ ಹೊಡೆದ ಚಿತ್ರತಂಡ - ಈಟಿವಿ ಭಾರತ ಕನ್ನಡ

ಕಿರಣ್​ ರಾಜ್​ ನಟನೆಯ 'ರಾನಿ' ಸಿನಿಮಾದ ಶೂಟಿಂಗ್​ ಮುಗಿದಿದ್ದು, ಚಿತ್ರತಂಡ ಮೈಸೂರಿನ ವಿಷ್ಣುವರ್ಧನ್​ ಸ್ಮಾರಕದ ಬಳಿ ಕುಂಬಳಕಾಯಿ ಹೊಡೆದಿದೆ.

Kiran Raj starrer Ronny movie shooting completed
'ರಾನಿ' ಶೂಟಿಂಗ್​ ಕಂಪ್ಲೀಟ್​: ವಿಷ್ಣು ಸ್ಮಾರಕದ ಮುಂದೆ ಕುಂಬಳಕಾಯಿ ಹೊಡೆದ ಚಿತ್ರತಂಡ

By ETV Bharat Karnataka Team

Published : Dec 21, 2023, 10:41 PM IST

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತನ್ನದೇ ಅಭಿನಯ ಶೈಲಿಯಿಂದ ಕನ್ನಡಿಗರ ಮನ ಗೆದ್ದಿರುವ ನಟ‌ ಕಿರಣ್ ರಾಜ್. ಸದ್ಯ 'ರಾನಿ' ಸಿನಿಮಾ‌ ಜಪ ಮಾಡುತ್ತಿರುವ ಸ್ಟಾರ್​ ಹೀರೋನ ಚಿತ್ರದ ಶೂಟಿಂಗ್​ ಮುಕ್ತಾಯಗೊಂಡಿದೆ. ಇದರ ಸಲುವಾಗಿ ಚಿತ್ರತಂಡ ಮೈಸೂರಿನ ವಿಷ್ಣುವರ್ಧನ್​ ಸ್ಮಾರಕದ ಬಳಿ ಕುಂಬಳಕಾಯಿ ಹೊಡೆದಿದೆ. ಕಿರಣ್​ ರಾಜ್​ ಜೊತೆಗೆ ರವಿಶಂಕರ್, ಮಠ ಗುರುಪ್ರಸಾದ್, ಯಶ್ ಶೆಟ್ಟಿ, ಸೂರ್ಯ ಕುಂದಾಪುರ, ಧರ್ಮಣ್ಣ ಕಡೂರ್ ಶೂಟಿಂಗ್​ನಲ್ಲಿ ಭಾಗವಹಿಸಿದ್ದರು.

ಗುರುತೇಜ್ ಶೆಟ್ಟಿ ನಿರ್ದೇಶನದ 'ರಾನಿ' ಚಿತ್ರದಲ್ಲಿ ಕಿರಣ್ ರಾಜ್ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಹಾಗೂ ಪೋಸ್ಟರ್​ನಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ ರಾನಿ ಚಿತ್ರಕ್ಕೆ ಇದೀಗ ಟಿ- ಸೀರಿಸ್ ಜೊತೆಯಾಗಿರೋದು ಚಿತ್ರತಂಡಕ್ಕೆ ಇನ್ನಷ್ಟು ಹುಮ್ಮಸು ತಂದಿದೆ. ಮಣಿಕಾಂತ್ ಕದ್ರಿ 5 ಹಾಡುಗಳನ್ನು ಸಂಯೋಜಿಸಿದ್ದು, 'ಕಾಂತಾರ' ಖ್ಯಾತಿಯ ಪ್ರಮೋದ್ ಮರವಂತೆ 5 ಹಾಡುಗಳನ್ನು ಬರೆದಿದ್ದಾರೆ. ಕುನಾಲ್ ಗಾಂಜಾವಾಲ, ಹಂಸಿಕ ಐಯ್ಯರ್, ಶ್ವೇತಾ ಮೋಹನ್ ಇವರಂತಹ ಹೆಸರಾಂತ ಗಾಯಕರು ರಾನಿ ಹಾಡುಗಳನ್ನು ಹಾಡಿದ್ದಾರೆ.

'ರಾನಿ'

ಗುರುತೇಜ್ ಶೆಟ್ಟಿ ನಿರ್ದೇಶನದ ರಾನಿ ಚಿತ್ರದಲ್ಲಿ ಕಿರಣ್ ರಾಜ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡದ್ದಾರೆ, ಟೀಸರ್ ಪೋಸ್ಟರ್‌ನಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ Ronny ಚಿತ್ರಕ್ಕೆ ಈಗ T-ಸೀರಿಸ್ ಜೊತೆಯಾಗಿರೋದು ಚಿತ್ರ ತಂಡಕ್ಕೆ ಇನ್ನಷ್ಟು ಹುಮ್ಮಸು ತಂದಿದೆ. ಮಣಿಕಾಂತ್ ಕದ್ರಿ ಚಿತ್ರಕ್ಕೆ 5 ಹಾಡುಗಳನ್ನು ಸಂಯೋಜಿಸಿದ್ದು, 'ಕಾಂತರ' ಖ್ಯಾತಿಯ ಪ್ರಮೋದ್ ಮರವಂತೆ 5 ಹಾಡುಗಳನ್ನು ಬರೆದಿದ್ದಾರೆ, ಕುನಾಲ್ ಗಾಂಜಾವಾಲ, ಹಂಸಿಕ ಐಯ್ಯರ್, ಶ್ವೇತಾ ಮೋಹನ್ ಅವರಂತಹ ಹೆಸರಾಂತ ಗಾಯಕರು ರಾನಿ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

"ಗ್ಯಾಂಗ್‌ಸ್ಟರ್ ಕಥೆಯಾದರೂ ಮಾಸ್ ಎಲಿವೆಷನ್ ಇದ್ದರೂ, ಕಿರಣ್ ರಾಜ್​ರವರ ಫ್ಯಾಮಿಲಿ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೇನೆ. ಇದು ಫ್ಯಾಮಿಲಿ ಆ್ಯಕ್ಷನ್ ಸಿನಿಮಾ" ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ.

ರಾನಿ ಚಿತ್ರತಂಡ:ಸಮೀಕ್ಷ, ಅಪೂರ್ವ ಹಾಗೂ ರಾಧ್ಯಾ ಮೂವರು ನಾಯಕಿಯರಿದ್ದಾರೆ. ಪೋಷಕ ಪಾತ್ರದಲ್ಲಿ ರವಿಶಂಕರ್, ಮಂಜು, ಉಗ್ರಂ ರವಿ, ಗಿರೀಶ್ ಹೆಗಡೆ, ಬೇಡ ಸುರೇಶ, ಮೈಕೋ ನಾಗರಾಜ್, ಸುಜಯ್ ಶಾಸ್ತ್ರಿ, ಲಕ್ಷ್ಮೀ ಸಿದ್ದಯ್ಯ, ಅನಿಲ್ ಯಾದವ್, ಶ್ರೀಧರ್, ಮಂಡ್ಯ ರಮೇಶ್ ಹೀಗೆ ದೊಡ್ಡ ತಾರಬಳಗವಿದೆ.

'ರಾನಿ'

ರಾಘವೇಂದ್ರ ಬೇಡ ಕೋಲಾರ ಛಾಯಾಗ್ರಾಹಣ, ಉಮೇಶ್ ಸಂಕಲನ, ಸತೀಶ್ ಕಲಾ ನಿರ್ದೇಶನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿದೆ. ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್​ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಚಂದ್ರಕಾಂತ್ ಮತ್ತು ಉಮೇಶ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ. ‌ರಾನಿ ಚಿತ್ರವನ್ನು ಮುಂದಿನ ವರ್ಷ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಇದನ್ನೂ ಓದಿ:'ರಾನಿ'ಯಲ್ಲಿ ಕಿರಣ್ ರಾಜ್ ಬ್ಯುಸಿ: ಹ್ಯಾಂಡ್ಸಮ್​ ಹರ್ಷನ ಅಪ್​ಡೇಟ್​ ಇಲ್ಲಿದೆ ನೋಡಿ...

ABOUT THE AUTHOR

...view details