ಕರ್ನಾಟಕ

karnataka

ETV Bharat / entertainment

ಹೆಂಡತಿ ಬಗ್ಗೆ ಬಹಿರಂಗವಾಗಿ ದೂರಿದ ಕಿಂಗ್​ ಖಾನ್: ಖ್ಯಾತ ವಿನ್ಯಾಸಕಿಯಾದ್ರೂ ತನ್ನ ಕೋಣೆ ವಿನ್ಯಾಸ ಮಾಡಿಲ್ಲ ಎಂದ ಶಾರುಖ್​​ - ಖ್ಯಾತ ವಿನ್ಯಾಸಕಿಯಾಗಿ ಹೆಸರು ಮಾಡಿರುವ ಹೆಂಡತಿ

ಶಾರುಖ್​ ಖಾನ್ ನಟನೆ ಮಾತ್ರವಲ್ಲದೇ, ಅವರ ಮಾತಿನ ಚಾತುರ್ಯದ ಬಗ್ಗೆಯೂ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದೀಗ ಹೆಂಡತಿ ಬಗ್ಗೆ ಸಿಹಿ ದೂರೊಂದನ್ನು ಅವರು ಬಹಿರಂಗವಾಗಿ ತಿಳಿಸಿದ್ದಾರೆ.

Shah Rukh Khan complains about wife
ಹೆಂಡತಿ ಬಗ್ಗೆ ಬಹಿರಂಗವಾಗಿ ದೂರಿದ ಕಿಂಗ್​ ಖಾನ್

By

Published : May 16, 2023, 11:29 AM IST

ಮುಂಬೈ: ನಟ ಶಾರುಖ್​ ಖಾನ್​ ಹೆಂಡತಿ ಗೌರಿ ಖಾನ್​ ವಿನ್ಯಾಸದಲ್ಲಿ ಅತ್ಯಾಸಕ್ತಿಯನ್ನು ಹೊಂದಿದ್ದು, ಸಾಕಷ್ಟು ಬೇಡಿಕೆ ಪಡೆದಿದ್ದಾರೆ. ಖ್ಯಾತ ವಿನ್ಯಾಸಕಿಯಾಗಿ ಹೆಸರು ಮಾಡಿರುವ ಹೆಂಡತಿ ಗೌರಿ ಖಾನ್​ ಬಗ್ಗೆ ನಟ ಶಾರುಖ್​ ಖಾನ್​ ದೂರಿದ್ದಾರೆ. ಜಗತನ್ನು ನೀರಿಕ್ಷಿಸಿದಂತೆ ಅದ್ಬುತವಾಗಿ ಮರು ವಿನ್ಯಾಸ ಮತ್ತು ಡಿಸೈನ್​ ಮಾಡುವ ಗೌರಿ ತಮ್ಮ ಕೋಣೆಯನ್ನು ಮಾತ್ರ ವಿನ್ಯಾಸ ಮಾಡಿಲ್ಲ ಎಂದಿದ್ದಾರೆ. ಗೌರಿ ಖಾನ್​ ಅವರ ಮೈ ಲೈಫ್​ ಇನ್​ ಡಿಸೈನ್​ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿರುವ ನಟ ಶಾರುಖ್​ ಹೆಂಡತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಈ ರೀತಿಯಾಗಿ ಕಾಲೆಳೆದಿದ್ದಾರೆ.

ಪುಸ್ತಕದ ಕುರಿತು ಮಾತನಾಡಿದ ಅವರು, ಆಕೆ ಪುಸ್ತಕದಲ್ಲಿ ಏನನ್ನು ಬರೆದಿದ್ದಾರೆ. ಯಾವ ಅಂಶ ಸೇರಿಸಿದ್ದಾರೆ ಎಂಬುದನ್ನು ನೋಡಲು ತಾನು ಕೂಡ ಕಾತುರನಾಗಿದ್ದೇನೆ. ಒಂದು ವೇಳೆ ಆಕೆ ತನ್ನ ಕೋಣೆಯನ್ನು ನನಗಾಗಿ ವಿನ್ಯಾಸ ಮಾಡಲು ಮುಂದಾದರೆ, ರಿಯಾಯತಿ ದರದಲ್ಲಿ ಮಾಡುವಂತೆ ಅವಳನ್ನು ಕೇಳುತ್ತೇನೆ ಎಂದು ಕೂಡ ತಿಳಿಸಿದ್ದಾರೆ. ಸಿನಿಮಾ ನಿರ್ಮಾಣದ ಹೊರತಾಗಿ ಒಳಾಂಗಣ ವಿನ್ಯಾಸದಲ್ಲಿ ಗೌರಿ ವೃತ್ತಿಪರ ಯಶಸ್ಸು ಕಂಡಿದ್ದಾರೆ. ಆಕೆ ಪುಸ್ತಕದಲ್ಲಿ ತಮ್ಮ ವೃತ್ತಿಪರ ಪಯಣದ ಜೊತೆಗೆ ಕುಟುಂಬ ಮತ್ತು ಮಕ್ಕಳಾದ ಆರ್ಯನ್​, ಸುಹಾನ ಮತ್ತು ಅಬ್​ರಾಮ್​ ಕುರಿತು ಕೂಡ ಅವರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, ಶಾರಖ್​ ಅವರ ಮುಂಬೈ ನಿವಾಸ ಮನ್ನತ್​​, ಇದೊಂದು ಹೆರಿಟೇಜ್​ ವಿಲ್ಲಾ ಆಗಿದ್ದು, ಈ ಕಟ್ಟದ ವಿನ್ಯಾಸ ಸೇರಿದಂತೆ ಅವುಗಳ ಪ್ರಕ್ರಿಯೆ ಸೇರಿದಂತೆ ಕೆಲವು ಪ್ರಮುಖ ಪ್ರಾಜೆಕ್ಟ್​ ವಿವರಗಳನ್ನು ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಜೊತೆಗೆ ಶಾರುಖ್​​ ಖಾನ್​ ಹೆಚ್ಚು ಸಮಯ ಕಳೆಯುವ ಲೈಬ್ರರಿ ವಿನ್ಯಾಸ ಮತ್ತು ಕುಟುಂಬ ಇಷ್ಟವಾದ ಸ್ಥಳಗಳ ಕೆಲಸಗಳ ಕುರಿತು ತಿಳಿಸಲಾಗಿದ್ದು, ಮನ್ನತ್​ ನ ಸೌಂದರ್ಯವೂ ಈ ಪುಸ್ತಕದಲ್ಲಿ ದಾಖಲಾಗಿದೆ.

ಇನ್ನು ಇಂಟಿರೀಯರ್​ ಡಿಸೈನರ್​ ಆಗಿರುವ ಸಿನಿಮಾ ನಿರ್ದೇಶಕಿ ಗೌರಿ, ಈ ಕ್ಷೇತ್ರವನ್ನು ಆರಿಸಿಕೊಂಡು ಕಾರ್ಯ ನಿರ್ವಹಿಸುವವರಿಗೆ ಕೆಲವು ಸಲಹೆಯನ್ನು ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಆಕರ್ಷಣೆ ಜೊತೆಗೆ ಜಗತ್ತನ್ನು ತಮ್ಮ ವಿನ್ಯಾಸದಿಂದ ಪ್ರೇರೇಪಿಸಬೇಕು ಎಂದಿದ್ದಾರೆ.

2013ರಲ್ಲಿ ತಮ್ಮ ಈ ಇಂಟಿರಿಯರ್​ ಡಿಸೈನ್​ ವೃತ್ತಿ ಆರಂಭಿಸಿದ ಗೌರಿ ತಮ್ಮದೇ ಆದ ರೆಡ್​ ಚಿಲ್ಲಿಸ್​ ಎಂಟರ್​ಟೈನ್​ಮೆಂಟ್​ ಪ್ರೊಡಕ್ಷನ್​ ಹೌಸ್​ಗೆ ಶಾರುಖ್​ ಜೊತೆ ಸೇರಿ ಒಳಂಗಾಣ ವಿನ್ಯಾಸ ಮಾಡಿದರು. ಇತ್ತೀಚೆಗೆ ಅವರು ಶಾರುಖ್​ ಖಾನ್​ ಮ್ಯಾನೇಜರ್​ ಪೂಜಾ ಡದ್ಲಾನಿ ಅವರ ಮನೆ ವಿನ್ಯಾಸವನ್ನು ಮಾಡಿಕೊಟ್ಟಿದ್ದಾರೆ.

ಹೆಂಡತಿಯ ಕಾರ್ಯಕ್ಕೆ ಬೆಂಬಲವಾಗಿ ನಿಂತಿರುವ ಶಾರುಖ್​​ ಖಾನ್​ ವೃತ್ತಿ ಜೀವನದಲ್ಲೂ ಸಾಕಷ್ಟು ಬ್ಯುಸಿಯಾಗಿದ್ದಾರೆ. ನಾಲ್ಕು ವರ್ಷಗಳ ವಿರಾಮದ ಬಳಿಕ ಇತ್ತೀಚೆಗೆ ತೆರೆಗೆ ಬಂದ ಅವರ ಪಠಾಣ್​ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿದೆ. ಸದ್ಯ ಅವರು ರಾಜ್​ ಕುಮಾರ್​ ಹಿರಾನಿ ಜೊತೆಗಿನ ಡುಂಕಿ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಮಿಳು ನಿರ್ದೇಶಕ ಆಟ್ಲಿಯ ಜವಾನ್​ ಚಿತ್ರದಲ್ಲೂ ತೊಡಗಿದ್ದು, ಈ ಚಿತ್ರವನ್ನು ಗೌರಿ ಖಾನ್​ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ಸೋರಿಕೆಯಾದ 'ಜವಾನ್' ಚಿತ್ರದ ವಿಡಿಯೋ ಕ್ಲಿಪ್‌ ತೆಗೆದು ಹಾಕುವಂತೆ ಸಾಮಾಜಿಕ ಮಾಧ್ಯಮಗಳಿಗೆ ಕೋರ್ಟ್​ ಸೂಚನೆ

ABOUT THE AUTHOR

...view details