ಕರ್ನಾಟಕ

karnataka

ETV Bharat / entertainment

'ಕಿಚ್ಚ 46'ಗಾಗಿ ದೇಹ ದಂಡಿಸಿದ ಸುದೀಪ್​.. ಚಿತ್ರದ ಕ್ಲೈಮ್ಯಾಕ್ಸ್​ಗಾಗಿ ಅಭಿನಯ ಚಕ್ರವರ್ತಿ ​ತಯಾರಿ - etv bharat kannada

Kiccha Sudeep workout photos: 'ಕಿಚ್ಚ 46' ಚಿತ್ರಕ್ಕಾಗಿ ಸುದೀಪ್​ ದೇಹ ದಂಡಿಸಿದ್ದು, ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

kiccha sudeep workout photos
ಸುದೀಪ್

By ETV Bharat Karnataka Team

Published : Aug 27, 2023, 3:40 PM IST

Updated : Aug 27, 2023, 3:55 PM IST

'ಕಿಚ್ಚ 46' ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿರುವ ಹೆಸರು. ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರ 46ನೇ ಸಿನಿಮಾವಿದು. ಆದರೆ ಈ ಚಿತ್ರದ ಶೀರ್ಷಿಕೆ ಏನೆಂಬುದು ಇನ್ನೂ ಬಹಿರಂಗಗೊಂಡಿಲ್ಲ. ಕೇವಲ 'ಕಿಚ್ಚ 46' ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಚಿತ್ರತಂಡ ಸಿನಿಮಾದ ಚಿಕ್ಕ ಗ್ಲಿಂಪ್ಸ್​​ ಅನ್ನು ಬಿಡುಗಡೆಗೊಳಿಸಿತ್ತು. ರಗಡ್​ ಲುಕ್​ನಲ್ಲಿ ಸುದೀಪ್​ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಇದೀಗ ಸುದೀಪ್​ ಈ ಚಿತ್ರಕ್ಕಾಗಿ ದೇಹ ದಂಡಿಸಿದ್ದು, ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಕಿಚ್ಚ ಇನ್​ಸ್ಟಾ ಪೋಸ್ಟ್​: ದೇವಹನ್ನು ಹುರಿಗೊಳಿಸಿದ ಲುಕ್​ನೊಂದಿಗೆ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ. 'ಕಿಚ್ಚ 46'ಗಾಗಿ ಮತ್ತೆ ದೇಹ ದಂಡಿಸಿದ್ದಾರೆ. ಕಟ್ಟು ಮಸ್ತಾದ ದೇಹ ಪ್ರದರ್ಶಿಸಿ ಪೋಸ್ಟ್​ ಶೇರ್​ ಮಾಡಿದ್ದಾರೆ. "ವರ್ಕೌಟ್​ ನನ್ನ ಹೊಸ ಹ್ಯಾಪಿ ಸ್ಪೇಸ್​ ಆಗಿದೆ. ಈ ದಿನಚರಿ ನನ್ನನ್ನು ಶಾಂತವಾಗಿ ಮತ್ತು ಫೋಕಸ್ಡ್​ ಆಗಿ ಇಡುತ್ತದೆ. K 46 ಕ್ಲೈಮ್ಯಾಕ್ಸ್​ ಫೈಟ್ ಸೀಕ್ವೆನ್ಸ್​ಗೆ ಇನ್ನೊಂದು ತಿಂಗಳು ಬಾಕಿ ಇದೆ. ನನ್ನ ವರ್ಕೌಟ್​ ಸ್ಟೇಷನ್​ನಲ್ಲಿ ಮತ್ತಷ್ಟು ಸಾಧಿಸುವುದಿದೆ" ಎಂದು ಫೋಟೋ ಕ್ಯಾಪ್ಶನ್​ ನೀಡಿದ್ದಾರೆ. ಈ ಮೂಲಕ ಕಿಚ್ಚ ತಮ್ಮ ಸಿನಿಮಾ ಬಗ್ಗೆ ಅಪ್​ಡೇಟ್​ ನೀಡಿದ್ದಾರೆ.

ಇದನ್ನೂ ಓದಿ:Sudeep nephew Sanchith: ಸ್ಯಾಂಡಲ್​ವುಡ್​ಗೆ 'ಜೂನಿಯರ್​ ಕಿಚ್ಚ' ಎಂಟ್ರಿ; ಸಂಚಿತ್​ ಚೊಚ್ಚಲ ಸಿನಿಮಾಗೆ ಸ್ಟಾರ್​ ನಟರ ಬೆಂಬಲ

ಪಂಚಭಾಷೆಗಳಲ್ಲಿ 'ಕಿಚ್ಚ 46':ಸುದೀಪ್​ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿ 5 ಭಾಷೆಗಳಲ್ಲಿ ಮೂಡಿಬರಲಿದೆ. ಈ ಪ್ಯಾನ್​ ಇಂಡಿಯಾ ಚಿತ್ರದ ಸಣ್ಣ ತುಣುಕನ್ನು ಈಗಾಗಲೇ ಚಿತ್ರತಂಡ ಬಿಡುಗಡೆಗೊಳಿಸಿದೆ. K46 Demon War Begins ಎಂದು ಸದ್ಯಕ್ಕೆ ಟೈಟಲ್​ ಇಡಲಾಗಿದೆ. ಈಗಾಗಲೇ ರಿಲೀಸ್​ ಆಗಿರುವ ಗ್ಲಿಂಪ್ಸ್​ನಲ್ಲಿ ರಕ್ತಸಿಕ್ತ ದೃಶ್ಯದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. 'ನಾನು ಮನುಷ್ಯ ಅಲ್ಲ, ರಾಕ್ಷಸ' ಎಂದು ಅವರು ಹೇಳುವ ಡೈಲಾಗ್​ ಹೆಚ್ಚು ಗಮನ ಸೆಳೆದಿದೆ.

ವಿ ಕ್ರಿಯೇಶನ್ಸ್​​ ಆ್ಯಂಡ್​​ ಕಿಚ್ಚ ಕ್ರಿಯೇಶನ್ಸ್​​ ಬ್ಯಾನರ್​​ ಅಡಿ ಬರಲಿರುವ ಸಿನಿಮಾಗೆ ವಿಜಯ್​ ಕಾರ್ತಿಕೇಯ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಕಲೈಪುಲಿ ಎಸ್​. ತನು ನಿರ್ಮಾಣದ ಚಿತ್ರಕ್ಕೆ ಬಿ. ಅಜನೀಶ್​ ಲೋಕನಾಥ್ ಸಂಗೀತ ಇರಲಿದೆ. ಎಸ್​.ಆರ್.​ ಗಣೇಶ್​ ಬಾಬು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಶೀರ್ಷಿಕೆ, ಚಿತ್ರತಂಡ ಸೇರಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕು.

ಮೂರು ಸಿನಿಮಾಗೆ ಗ್ರೀನ್​​​ ಸಿಗ್ನಲ್:ಸುದೀಪ್ ಅವರು​ ಮೂರು ಚಿತ್ರಗಳಿಗೆ ಗ್ರೀನ್​​​ ಸಿಗ್ನಲ್​ ಕೊಟ್ಟಿದ್ದಾರೆ. ವಿ ಕ್ರಿಯೇಷನ್ಸ್‌ನ ಕಲೈಪುಲಿ ಎಸ್​. ತನು ನಿರ್ಮಾಣದ ಈ ಸಿನಿಮಾ ಈಗಾಗಲೇ ಸೆಟ್ಟೇರಿದೆ. ಈಗಾಗಲೇ ಚಿತ್ರದ ಪ್ರೋಮೋವನ್ನು ತಂಡ ಹಂಚಿಕೊಂಡಿದೆ. ಇನ್ನುಳಿದ ಎರಡು ಸಿನಿಮಾಗಳ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:ಕಿಚ್ಚ 46: ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟ ಅಭಿನಯ ಚಕ್ರವರ್ತಿ ಸುದೀಪ್​

Last Updated : Aug 27, 2023, 3:55 PM IST

ABOUT THE AUTHOR

...view details