ಕರ್ನಾಟಕ

karnataka

ETV Bharat / entertainment

ಹುಟ್ಟು ಹಬ್ಬದಂದು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಕಿಚ್ಚ ಸುದೀಪ್​ - ಕಾರಣ? - Sudeep post to fans

Kiccha Sudeep special post: ನಟ ಸುದೀಪ್​​ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಶೇರ್ ಮಾಡಿದ್ದಾರೆ.

Kiccha Sudeep
ಕಿಚ್ಚ ಸುದೀಪ್​

By ETV Bharat Karnataka Team

Published : Sep 2, 2023, 6:19 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್​ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 50 ನೇ ವಸಂತಕ್ಕೆ ಕಾಲಿಟ್ಟಿರುವ ನಟನನಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ನಿನ್ನೆ ರಾತ್ರಿಯಿಂದಲೇ ಭರ್ಜರಿಯಾಗಿ ಬರ್ತಡೇ ಸೆಲೆಬ್ರೇಟ್​ ಮಾಡಿಕೊಳ್ಳುತ್ತಿರುವ ನಟ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಫ್ಯಾನ್ಸ್​ ಬಳಿ ಕ್ಷಮೆ ಕೂಡ ಕೋರಿದ್ದಾರೆ.

ಸ್ವತಃ ನಟ ಕಿಚ್ಚ ಸುದೀಪ್​ ಮಾತನಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ x (ಹಿಂದಿನ ಟ್ವಿಟರ್​) ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್​ಗೆ, ''ಪ್ರತಿಯೊಬ್ಬರನ್ನು ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ಬ್ಯಾರಿಕೇಡ್​​ಗಳು ಮುರಿದುಹೋದ ಹಿನ್ನೆಲೆ, ಜನರು ವಿಶೇಷವಾಗಿ ಮಕ್ಕಳಿಗೆ ತೊಂದರೆಯಾದ ಹಿನ್ನೆಲೆ ಆ ಭೇಟಿಯನ್ನು ಅಲ್ಲೇ ನಿಲ್ಲಿಸಲಾಯಿತು'' ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲಿ ''ಮನೆ ಬಳಿ ಬರುವ ಪ್ರತಿಯೊಬ್ಬರನ್ನು ಭೇಟಿ ಮಾಡುವ ಆಸೆ ಇತ್ತು. ನಾನು ಕೂಡ ಮನೆ ಬಳಿ ಬೆಳಗ್ಗಿನಿಂದಲೇ ನಿಂತಿದ್ದೆ. ಎಂದಿನಂತೆ ಬಿಗಿ ಭದ್ರತೆ ಇತ್ತು. ಆದ್ರೆ ನೂಕು ನುಗ್ಗಲು ಹೆಚ್ಚಾಯ್ತು. ಬ್ಯಾರಿಕೇಡ್​ ದಾಟಿ ಹಲವರು ಮುಂದೆ ಬಂದರು. ಸೆಕ್ಯೂರಿಟಿ ವಿಚಾರವಾಗಿ ಆ ಭೇಟಿಯನ್ನು ಅಲ್ಲಿಗೆ ನಿಲ್ಲಿಸಲಾಯಿತು. ಹಾಗಾಗಿ ನಿಮ್ಮಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದ ಅರ್ಪಿಸಲು ಇಚ್ಛಿಸುತ್ತೇನೆ. ಮನೆ ಬಳಿ ಬಂದಿದ್ದಕ್ಕೆ, ಪ್ರೀತಿ ತೋರಿದ್ದಕ್ಕೆ, ಶುಭಾಶಯ ಕೋರಿದ್ದಕ್ಕೆ ಧನ್ಯವಾದಗಳು. ಮುಂದಿನ ವರ್ಷ ಇನ್ನೂ ಉತ್ತಮ ವ್ಯವಸ್ಥೆಯೊಂದಿಗೆ ನಿಮ್ಮನ್ನು ಭೇಟಿ ಆಗುತ್ತೇನೆ. ಮತ್ತೊಮ್ಮೆ ಎಲ್ಲರಿಗೂ ಥ್ಯಾಂಕ್ಸ್​ ಆ್ಯಂಡ್ ಸ್ವಾರಿ. ಮನೆ ಬಳಿ ಬಂದ ಹಲವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ, ಕ್ಷಮೆ ಇರಲಿ'' ಎಂದು ಕೇಳಿಕೊಂಡಿದ್ದಾರೆ. ನಟನ ಈ ವಿಡಿಯೋ ಹೆಚ್ಚು ವೀವ್ಸ್ ಆಗುತ್ತಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ನಟನ ಈ ಗುಣಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ:Kichcha 46: ಅಭಿನಯ ಚಕ್ರವರ್ತಿಯ ಚಿತ್ರಕ್ಕೆ ಮ್ಯಾಕ್ಸ್​ ಶೀರ್ಷಿಕೆ - ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ ಟೀಸರ್​

ನಿನ್ನೆ ಮಧ್ಯರಾತ್ರಿ 12 ಗಂಟೆ ಹೊತ್ತಿಗೆ ನಟನ ಹುಟ್ಟುಹಬ್ಬವನ್ನು ನಂದಿ ಲಿಂಕ್​ ಗ್ರೌಂಡ್ಸ್​ನಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಬೆಂಗಳೂರಿನ ನಂದಿ ಲಿಂಕ್​​ ಗ್ರೌಂಡ್​​ಗೆ 11 ಗಂಟೆ ಹೊತ್ತಿಗೆ ಸುದೀಪ್​ ಕುಟುಂಬ ಮತ್ತು ಗೆಳೆಯರು ಆಗಮಿಸಿದರು. ವೇದಿಕೆ ಅದ್ಧೂರಿಯಾಗಿ ರೆಡಿಯಾಗಿತ್ತು. 12 ಗಂಟೆಗೆ ನಟ ಸುದೀಪ್​ ಕೇಕ್​ ಕತ್ತರಿಸಿದರು. ಸಾವಿರಾರು ಅಭಿಮಾನಿಗಳು ಮೆಚ್ಚಿನ ನಟನ ಬರ್ತ್​ ಡೇ ಪಾರ್ಟಿಯಲ್ಲಿ ಭಾಗಿಯಾದರು. ಡ್ರೋಣ್​ ಮೂಲಕ ಅಭಿನಯ ಚಕ್ರವರ್ತಿಯ ಭಾವಚಿತ್ರಗಳನ್ನು ಪ್ರದರ್ಶಿಸಿ ಪತ್ನಿ ಪ್ರಿಯಾ ಅವರು ವಿಶೇಷವಾಗಿ ಶುಭ ಕೋರಿದರು. ಹೀಗೆ ನಟ ತಮ್ಮ 50ನೇ ವರ್ಷದ ಜನ್ಮದಿನವನ್ನು ಅಭಿಮಾನಿಗಳು ಮತ್ತು ಚಿತ್ರ ತಂಡದವರೊಂದಿಗೆ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ:'ದರ್ಶನ್ ಮೇಲೆ ಸಿಟ್ಟಿಲ್ಲ, ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ, ಸಮಯ ಕೊಡಿ': ಕಿಚ್ಚ ಸುದೀಪ್​

ABOUT THE AUTHOR

...view details