ಕರ್ನಾಟಕ

karnataka

ETV Bharat / entertainment

Kiccha Sudeep 47: ಹೊಂಬಾಳೆ ಫಿಲ್ಮ್ಸ್ ಜೊತೆ ಅಭಿನಯ ಚಕ್ರವರ್ತಿ ಸುದೀಪ್​ ಸಿನಿಮಾ? - Sudeep next movie

Kiccha 47: ಬಹುಬೇಡಿಕೆ ನಟ ಸುದೀಪ್ ಮುಖ್ಯಭೂಮಿಕೆಯ 46ನೇ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲಿದೆ.

Sudeep movie with Hombale Films
ಹೊಂಬಾಳೆ ಫಿಲ್ಮ್ಸ್ ಜೊತೆ ಸುದೀಪ್​ ಸಿನಿಮಾ

By ETV Bharat Karnataka Team

Published : Aug 29, 2023, 6:37 PM IST

ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ತಮ್ಮದೇ ಆದ ಸ್ಟಾರ್ ಡಮ್ ಹೊಂದಿರುವ ಬಹುಬೇಡಿಕೆ ನಟ ಸುದೀಪ್. ಸದ್ಯ ಹೆಸರಿಡದ 46ನೇ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಕ್ಲೈಮಾಕ್ಸ್ ಸನ್ನಿವೇಶಕ್ಕಾಗಿ ಸಖತ್ತಾಗಿ ಬಾಡಿ ಬಿಲ್ಡ್ ಕೂಡ ಮಾಡಿದ್ದಾರೆ. ಇತ್ತೀಚೆಗೆ ಕಟ್ಟುಮಸ್ತಾದ ಮೈಕಟ್ಟಿನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದರು. ಈ ಪೈಲ್ವಾನ್​ನ ಫಿಟ್ನೆಸ್​ಗೆ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕಿಚ್ಚ 47... ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಿದ್ಧತೆ ನಡೆಸಿರೋ ಕಿಚ್ಚ ಸುದೀಪ್ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಹೊರ ಬಿದ್ದಿದೆ. ಅಭಿನಯ ಚಕ್ರವರ್ತಿಯ 47ನೇ ಸಿನಿಮಾ ಕುರಿತು ಅಭಿಮಾನಿಗಳಲ್ಲಿ ಕುತೂಹಲವಿತ್ತು. ಯಾವ ನಿರ್ಮಾಣ ಸಂಸ್ಥೆ ಜೊತೆ ಕಿಚ್ಚ ಕೈ ಜೋಡಿಸಲಿದ್ದಾರೆ?, ನಿರ್ದೇಶಕ ಯಾರು? ಕಥೆ ಹೇಗಿರಬಹುದು ಎಂಬ ಚರ್ಚೆ ಗಾಂಧಿನಗರ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಆಗುತ್ತಿದೆ. ಇದೀಗ ಕಿಚ್ಚನ 47ನೇ ಚಿತ್ರಕ್ಕೆ ಯಾವ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಲಿದೆ ಅನ್ನೋದು ರಿವೀಲ್ ಆಗಿದೆ.

ಹೊಂಬಾಳೆ ಫಿಲ್ಮ್ಸ್ ಜೊತೆ ಸುದೀಪ್​ ಸಿನಿಮಾ?!

ನಿರ್ಮಾಪಕ ಕಾರ್ತಿಕ್ ಗೌಡ ಜೊತೆ ಕಿಚ್ಚ: ಕೆಲ ತಿಂಗಳುಗಳ ಹಿಂದೆ ಕೆಆರ್​ಜಿ ಸ್ಟುಡಿಯೋ ಹಾಗೂ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಮತ್ತು ಕಿಚ್ಚ ಸುದೀಪ್ ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಆವಾಗ್ಲೇ ಹೊಂಬಾಳೆ ಫಿಲ್ಮ್ಸ್ ಜೊತೆ ಕಿಚ್ಚನ ಮುಂದಿನ ಸಿನಿಮಾದ ಮಾತುಕತೆ ಆಗಿದೆ ಎಂದು ಹೇಳಲಾಗಿತ್ತು.

ಹೊಂಬಾಳೆ ಫಿಲ್ಸ್ಮ್ ಜೊತೆ ಸುದೀಪ್ ಸಿನಿಮಾ: ರಾಜಕುಮಾರ, ಕೆಜಿಎಫ್, ಕೆಜಿಎಫ್ ಚಾಪ್ಟರ್ 2, ಕಾಂತಾರ ಹಾಗೂ ಬಿಡುಗಡೆಗೆ ಸಜ್ಜಾಗುತ್ತಿರುವ ಸಲಾರ್ ಸಿನಿಮಾ ಅಲ್ಲದೇ ಪರಭಾಷೆಯ ಸ್ಟಾರ್​ಗಳ ಜೊತೆ ಸಿನಿಮಾ ಮಾಡುವ ಮೂಲಕ ಹೆಸರು ಮಾಡಿರುವ ಹೊಂಬಾಳೆ ಫಿಲ್ಸ್ಮ್ ಜೊತೆ ಕಿಚ್ಚನ ಮುಂದಿನ ಸಿನಿಮಾ ಮಾಡೋದು ಬಹುತೇಕ ಪಕ್ಕಾ ಆಗಿದೆ. ಅದ್ಧೂರಿ ಮೇಕಿಂಗ್ ಹಾಗೂ ಬಿಗ್ ಬಜೆಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿರೋ ಹೊಂಬಾಳೆ ಫಿಲ್ಸ್ಮ್ ಅಡಿ ಅಭಿನಯ ಚಕ್ರವರ್ತಿಯ ಸಿನಿಮಾ ಬರಲಿದೆ ಎಂದು ಹೇಳಲಾಗುತ್ತಿದೆ.

ಈ ಮಾತಿಗೆ ಪುಷ್ಠಿ ನೀಡುವಂತೆ ಹೊಂಬಾಳೆ ಫಿಲ್ಮ್ಸ್​ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹಂಚಿಕೊಂಡಿರುವ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಟ್ರೆಂಡಿಂಗ್​ನಲ್ಲಿದೆ. ಮತ್ತೊಂದೆಡೆ ಕಿಚ್ಚನ ಆಪ್ತರು ಕೂಡ ಹೊಂಬಾಳೆ ಫಿಲ್ಸ್ಮ್ ಜೊತೆ ಸುದೀಪ್ 47 ಸಿನಿಮಾ ಮಾಡೋದು ಪಕ್ಕಾ ಆಗಿದೆ ಎಂದು ತಿಳಿಸಿದದ್ದಾರೆ.

ಇದನ್ನೂ ಓದಿ:ಅಮೀರ್​ ಖಾನ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್.. ನಟನ ಸಿನಿಮಾ ಜೊತೆ ರಿಲೀಸ್​ ಡೇಟ್​ ಅನೌನ್ಸ್

ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಬರ್ತ್ ಡೇ ಗಿಫ್ಟ್ ಆಗಿ ಸುದೀಪ್ ನಟನೆಯ 47ನೇ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಲಿದೆ ಅಂತಾ ಹೇಳಲಾಗುತ್ತಿದೆ. ಸಿನಿಮಾವನ್ನು ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶಿಸಲಿದ್ದಾರೆ ಎಂದು ಕೂಡ ಹೇಳಲಾಗಿದೆ. ಆದರೆ ಸುದೀಪ್ 47 ಚಿತ್ರವನ್ನು ಯಾರು ನಿರ್ದೇಶನ ಮಾಡ್ತಾರೆ? ಇದು ಪ್ಯಾನ್ ಇಂಡಿಯಾ ಸಿನಿಮಾನ? ಅನ್ನೋದನ್ನು ಹೊಂಬಾಳೆ ಫಿಲ್ಸ್ಮ್ ಸಂಸ್ಥೆ ಅಧಿಕೃತವಾಗಿ ಸುದೀಪ್ ಹುಟ್ಟುಹಬ್ಬದಂದು ಅನೌನ್ಸ್ ಮಾಡಲಿದೆ ಎಂದು ನಂಬಲಾಗಿದೆ.

ಇದನ್ನೂ ಓದಿ:Onam 2023: ಫೋಟೋಗಳಲ್ಲಿ ಚಲನಚಿತ್ರ ಚೆಲುವೆಯರ ಓಣಂ ಸಡಗರ

ಸದ್ಯ ಸುದೀಪ್ 46ನೇ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಹೆಸರಿಡದ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿ ಪಂಚಭಾಷೆಗಳಲ್ಲಿ ಮೂಡಿಬರಲಿದೆ. ಈ ಪ್ಯಾನ್​ ಇಂಡಿಯಾ ಚಿತ್ರದ ಸಣ್ಣ ತುಣುಕನ್ನು ಈಗಾಗಲೇ ಚಿತ್ರತಂಡ ಬಿಡುಗಡೆಗೊಳಿಸಿದೆ. K46 Demon War Begins ಎಂದು ಸದ್ಯಕ್ಕೆ ಟೈಟಲ್​ ಇಡಲಾಗಿದೆ. ಈಗಾಗಲೇ ರಿಲೀಸ್​ ಆಗಿರುವ ಗ್ಲಿಂಪ್ಸ್​ನಲ್ಲಿ ರಕ್ತಸಿಕ್ತ ದೃಶ್ಯದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. 'ನಾನು ಮನುಷ್ಯ ಅಲ್ಲ, ರಾಕ್ಷಸ' ಎಂದು ಅವರು ಹೇಳುವ ಡೈಲಾಗ್​ ಗಮನ ಸೆಳೆದಿದೆ. ವಿ ಕ್ರಿಯೇಶನ್ಸ್​​ ಆ್ಯಂಡ್​​ ಕಿಚ್ಚ ಕ್ರಿಯೇಶನ್ಸ್​​ ಬ್ಯಾನರ್​​ ಅಡಿ ಮೂಡಿ ಬರಲಿರುವ ಸಿನಿಮಾಗೆ ವಿಜಯ್​ ಕಾರ್ತಿಕೇಯ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಕಲೈಪುಲಿ ಎಸ್​ ತನು ನಿರ್ಮಾಣದ ಚಿತ್ರಕ್ಕೆ ಬಿ. ಅಜನೀಶ್​ ಲೋಕನಾಥ್ ಸಂಗೀತ ಇರಲಿದೆ. ಎಸ್​.ಆರ್.​ ಗಣೇಶ್​ ಬಾಬು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ABOUT THE AUTHOR

...view details