ಕರ್ನಾಟಕ

karnataka

ETV Bharat / entertainment

31ನೇ ವಸಂತಕ್ಕೆ ಕಾಲಿರಿಸಿದ ಕಿಯಾರಾ ಅಡ್ವಾಣಿ: ಕೇಕ್​ ಕತ್ತರಿಸಿ ಸಂಭ್ರಮಿಸಿದ ತಾರೆ - ಈಟಿವಿ ಭಾರತ ಕನ್ನಡ

Kiara Advani birthday: ಇಂದು ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ 31ನೇ ವರ್ಷದ ಹುಟ್ಟುಹಬ್ಬ.

Kiara Advani
ಕಿಯಾರಾ ಅಡ್ವಾಣಿ

By

Published : Jul 31, 2023, 6:46 PM IST

ಬಾಲಿವುಡ್​ ಬಹುಬೇಡಿಕೆಯ ನಟಿ ಕಿಯಾರಾ ಅಡ್ವಾಣಿ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪತಿ ಸಿದ್ದಾರ್ಥ್​ ಮಲ್ಹೋತ್ರಾ ಜೊತೆಯಲ್ಲಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸೇರಿ ಕೇಕ್​ ಕತ್ತರಿಸಿದ್ದಾರೆ. ಕಿಯಾರಾ ಅವರ ಸ್ನೇಹಿತರೊಬ್ಬರು ಬರ್ತ್​ಡೇ ಆಚರಣೆಯ ಫೋಟೋಗಳನ್ನು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಕಿಯಾರಾ ಅಡ್ವಾಣಿ ಕೇಕ್​ ಕತ್ತರಿಸಲು ಕುಳಿತಿರುವುದನ್ನು ಕಾಣಬಹುದು. ತೆರೆದ ಕೇಶವಿನ್ಯಾಸ ಮತ್ತು ಮೇಕಪ್​ ಇಲ್ಲದ ನೋಟದಲ್ಲೂ ಸುಂದರವಾಗಿ ಕಾಣುತ್ತಿದ್ದಾರೆ. ಅವರು ಕುಳಿತಿರುವ ಡೈನಿಂಗ್​ ಟೇಬಲ್​ ಹಿಂಬದಿಯ ಕನ್ನಡಿಯಲ್ಲಿ ಸಿದ್ದಾರ್ಥ್​ ಮಲ್ಹೋತ್ರಾ ಅವರನ್ನು ಕಾಣಬಹುದು. ಪಾರ್ಟಿಗೆ ಕ್ಯಾಂಡಲ್ಸ್​ ಮತ್ತು ಬಣ್ಣ ಬಣ್ಣದ ಬಲೂನುಗಳು ಮೆರುಗು ನೀಡಿದ್ದವು. ಅವುಗಳ ಮೇಲೆ "ನಾವು ನಿಮ್ಮನ್ನು ಪ್ರೀತಿಸುತ್ತೇವೆ" ಎಂದು ಬರೆಯಲಾಗಿದೆ.

ಕಿಯಾರಾ ಅಡ್ವಾಣಿ ಬರ್ತ್​ಡೇ ಕೇಕ್​ ನೋಡಲು ತುಂಬಾ ಸುಂದರವಾಗಿದೆ. ಮೂರು ಹಂತದಲ್ಲಿ ಇರುವ ಈ ಕೇಕ್​ ಮೇಲೆ 'ಬಾರ್ನ್ ಟು ಶಾಪಿಂಗ್' ಮತ್ತು 'ಹ್ಯಾಪಿ ಬರ್ತ್ ಡೇ ಕಿ' ಎಂದು ಬರೆಯಲಾಗಿದೆ. ಪೋಟೋಗಳನ್ನು ನೋಡುವಾಗ ಬರ್ತ್​ಡೇ ಸೆಲೆಬ್ರೇಷನ್​ ತಡರಾತ್ರಿ ಮಾಡಿದಂತಿದೆ. ಕಿಯಾರಾ ಕಣ್ಣು ಮುಚ್ಚಿ, ಕೈಯಲ್ಲಿ ಚಾಕು ಹಿಡಿದು ಕೇಕ್​ ಕತ್ತರಿಸಿದಂತೆ ಫೋಟೋದಲ್ಲಿ ಕಾಣುತ್ತಿದೆ.

ಇದನ್ನೂ ಓದಿ:ಥಿಯೇಟರ್‌ಗಳಲ್ಲಿ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಹವಾ; 3ನೇ ದಿನದ ಕಲೆಕ್ಷನ್​ನಲ್ಲಿ ಏರಿಕೆ​

ಪತಿಯೊಂದಿಗೆ ವಿದೇಶದಲ್ಲಿ ಕಿಯಾರಾ: ಕಳೆದ 2 ದಿನಗಳ ಹಿಂದೆ ಕಿಯಾರಾ ಅಡ್ವಾಣಿ ತಮ್ಮ ಜನ್ಮದಿನದ ಸಲುವಾಗಿ ಪತಿ ಸಿದ್ದಾರ್ಥ್​ ಮಲ್ಹೋತ್ರಾ ಜೊತೆ ವಿದೇಶಕ್ಕೆ ತೆರಳಿದ್ದಾರೆ. ಗುರುವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್​ ಸೆಲೆಬ್ರಿಟಿ ಕಪಲ್​ ಪಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದರು. ಆ ವೇಳೆ ಸಿದ್​ ಕಿಯಾರಾ ಕ್ಯಾಶುವಲ್​​ ಲುಕ್​ನಲ್ಲಿದ್ದರು.

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರವರಿಯಲ್ಲಿ ಹಸೆಮಣೆ ಏರುವ ಮೂಲಕ ಅಭಿಮಾನಿಗಳ ಸಂತಸಕ್ಕೆ ಕಾರಣರಾದರು. ವಿವಾಹಕ್ಕೂ ಮುನ್ನ ಈ ಬಾಲಿವುಡ್​ ಲವ್​ ಬರ್ಡ್ಸ್ ಎಲ್ಲಿಯೂ ತಮ್ಮ ಪ್ರೀತಿಯ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಈ ಜೋಡಿ ಡೇಟಿಂಗ್​​ನಲ್ಲಿರಬಹುದು ಎಂಬ ಗುಸುಗುಸು ಹರಡಿತ್ತು. ಸಿನಿಮಾ ಈವೆಂಟ್​ಗಳು, ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್​​ ವದಂತಿಗಳಿಗೆ ತುಪ್ಪ ಸುರಿದಿದ್ದರು.

ಕಿಯಾರಾ ಅಡ್ವಾಣಿ ಸಿನಿಮಾ: ಕಿಯಾರಾ ಅಡ್ವಾಣಿ ನಟಿಸುತ್ತಿರುವ ಮುಂಬರುವ ಬಹು ನಿರೀಕ್ಷಿತ ಸಿನಿಮಾ 'ಗೇಮ್ ಚೇಂಜರ್‌'. ಆರ್​ಆರ್​ಆರ್​ ಸ್ಟಾರ್​ ರಾಮ್​ಚರಣ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಶಂಕರ್​ ಆಕ್ಷನ್​ ಕಟ್​ ಹೇಳಿದ್ದಾರೆ. ನಟಿಯ ಕೊನೆಯ ಸಿನಿಮಾ 'ಸತ್ಯಪ್ರೇಮ್ ಕಿ ಕಥಾ' ಮೆಚ್ಚುಗೆಯನ್ನು ಸ್ವೀಕರಿಸಿದೆ. ಬಹು ಬೇಡಿಕೆಯಿರುವ ನಟಿಯರ ಪೈಕಿ ಕಿಯಾರಾ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಜೊತೆಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ.

ಇದನ್ನೂ ಓದಿ:Jaggesh: ರಜನಿ 'ಜೈಲರ್​' ಜೊತೆ ಜಗ್ಗೇಶ್​ 'ತೋತಾಪುರಿ 2' ಸಿನಿಮಾ ಬಿಡುಗಡೆ; ಯಾವಾಗ ಗೊತ್ತೇ?

ABOUT THE AUTHOR

...view details