ಮುಂಬೈ (ಮಹಾರಾಷ್ಟ್ರ:ಬಾಲಿವುಡ್‌ನ ಬಹುಬೇಡಿಕೆಯ ನಟಿ ಕಿಯಾರಾ ಅಡ್ವಾಣಿ ದುಬಾರಿ ಬೆಲೆಯ ಕಾರು ಖರೀದಿ ಮಾಡಿದ್ದಾರೆ. ಮುಂಬೈನ ಡಬ್ಬಿಂಗ್ ಸ್ಟುಡಿಯೋಗೆ ಅದೇ ಕಾರಿನಲ್ಲಿ ಬರುವ ಮೂಲಕ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡರು. ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮದುವೆಯಾದ ಬಳಿಕ ಕಿಯಾರಾ ಖರೀದಿ ಮಾಡಿದ ಮೊದಲ ದುಬಾರಿ ವಸ್ತು ಇದಾಗಿದೆ.
ಕಾರಿನ ಬೆಲೆ:ಈ ಕಾರಿನ ಬೆಲೆ 2.69 ಕೋಟಿ ಎಂದು ಹೇಳಲಾಗುತ್ತಿದೆ. ಕಾರಿನಿಂದ ಇಳಿದು ಸ್ಟುಡಿಯೋದತ್ತ ತೆರಳುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಪ್ಪು ಬಣ್ಣದ ಮರ್ಸಿಡಿಸ್ ಕಾರು ಇದಾಗಿದ್ದು ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಪಟ್ಟಿ ಆಕಾರದ ಸ್ಟೈಲೀಶ್ ಬಟ್ಟೆ ಧರಿಸಿದ್ದ ಕಿಯಾರಾ, ತನ್ನ ಹೊಸ ಕಾರಿನಿಂದ ಇಳಿದು ಡಬ್ಬಿಂಗ್ ಸ್ಟುಡಿಯೋಗೆ ಹೋಗುವುದಕ್ಕೂ ಮುನ್ನ ಅಭಿಮಾನಿಗಳತ್ತ ಕೈಬೀಸುತ್ತಾ ಕ್ಯಾಮರಾಗಳಿಗೆ ಪೋಸ್ ನೀಡಿದರು.
ಭೂಲ್ ಭುಲೈಯಾ 2 ಚಿತ್ರದ ಯಶಸ್ವಿ: ನಟಿಯು ಸದ್ಯ ಸಮೀರ್ ವಿದ್ವಾನ್ಸ್ ನಿರ್ದೇಶನ ಸತ್ಯಪ್ರೇಮ್ ಕಿ ಕಥಾ ಚಿತ್ರದಲ್ಲಿ ಬ್ಯುಸಿಯಾಗಿದ್ದು ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಕಿಯಾರಾ ಜೊತೆ ಕಾರ್ತಿಕ್ ಆರ್ಯನ್ ನಾಯಕ ನಟರಾಗಿ ಕಾಣಿಸಿಕೊಳ್ಳಲಿದ್ದಾರೆ. ಭೂಲ್ ಭುಲೈಯಾ 2 ಚಿತ್ರದ ಯಶಸ್ವಿ ಬಳಿಕ ಕಾರ್ತಿಕ್ ಆರ್ಯನ್ ಜೊತೆ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು ನೆಟಿಜನ್ಗಳ ಮನ ಗೆದ್ದಿದೆ.
ಕಿಯಾರಾ ಮತ್ತು ಕಾರ್ತಿಕ್ ಜೊತೆಗೆ, ಚಿತ್ರದಲ್ಲಿ ಸುಪ್ರಿಯಾ ಪಾಠಕ್ ಕಪೂರ್, ಗಜರಾಜ್ ರಾವ್, ಸಿದ್ಧಾರ್ಥ್ ರಂಧೇರಿಯಾ, ಅನುರಾಧಾ ಪಟೇಲ್, ರಾಜ್ಪಾಲ್ ಯಾದವ್, ನಿರ್ಮಿತೆ ಸಾವಂತ್ ಮತ್ತು ಶಿಖಾ ತಲ್ಸಾನಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಜೂನ್ 29ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
30M ಫಾಲೋವರ್ಸ್: ಕಿಯಾರಾ ಅಡ್ವಾಣಿ ಬಾಲಿವುಡ್‌ನ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹೊಸತನವನ್ನು ಹಂಚಿಕೊಳ್ಳುವ ಕಿಯಾರಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 30M ಫಾಲೋವರ್ಸ್ ಹೊಂದಿದ್ದಾರೆ. ಚಿತ್ರೀಕರಣದಿಂದ ಬಿಡುವು ಮಾಡಿಕೊಂಡಿದ್ದ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗೆ ಜಪಾನ್‌ಗೆ ತೆರಳಿದ್ದರು. ಅಲ್ಲಿಂದ ಆಗಮಿಸುತ್ತಿದ್ದಂತೆ ಕೆಲಸದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ ಕೊನೆಯದಾಗಿ 'ಮಿಷನ್ ಮಜ್ನು' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಸಿದ್ಧಾರ್ಥ್ ತಮ್ಮ ಮುಂದಿನ ಚಿತ್ರ ಯೋದ್ಧ ತಯಾರಿಯಲ್ಲಿ ನಿರತರಾಗಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 15 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಮದುವೆಗೇಕೆ ಆಹ್ವಾನಿಸಲಿಲ್ಲ? ಕರಣ್ ಜೋಹರ್ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ಉತ್ತರ ಹೀಗಿತ್ತು!
ಡೇಟಿಂಗ್ನಲ್ಲಿದ್ದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಫೆಬ್ರವರಿ 7ರಂದು ರಾಜಸ್ಥಾನದ ಪ್ಯಾಲೇಸ್ನಲ್ಲಿ ನಡೆದ ಅದ್ಧೂರಿ ವಿವಾಹ ಸಮಾರಂಭದಲ್ಲಿ ಹಸೆಮಣೆ ಏರಿದರು. ಇವರ ಮದುವೆ ಕುಟುಂಬಸ್ಥರು ಮತ್ತು ಆತ್ಮೀಯರು ಹಾಜರಾಗಿದ್ದರು. ಮದುವೆಗೂ ಮುನ್ನ ಈ ಜೋಡಿ 2021ರಲ್ಲಿ ಬಿಡುಗಡೆಯಾದ 'ಶೆರ್ಷಾ' ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಇದೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರು ಡೇಟಿಂಗ್ ಆರಂಭಿಸಿದ್ದರು.