ಕೇವಲ ಎರಡು ಭಾಗಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡಗಡೆಯಾದ 'ಕೆಜಿಎಫ್' ಚಿತ್ರ ದಾಖಲೆಗಳನ್ನು ಬರೆದಿದ್ದು ಅಷ್ಟಿಷ್ಟಲ್ಲ. ಈ ಸಿನಿಮಾದಿಂದ ರಾಕಿಂಗ್ ಸ್ಟಾರ್ ಯಶ್ ಹೆಸರು ಚಿತ್ರರಂಗದಲ್ಲಿ ಬ್ರಾಂಡ್ ಆಗಿಬಿಟ್ಟಿದೆ. ಇದೀಗ ಅದರ ಸರಣಿ ಮುಂದಿವರೆಯುತ್ತದೆ ಎಂಬ ಮಾಹಿತಿ ತಿಳಿದು ಬಂದಿದ್ದು ಇನ್ನೆಷ್ಟು ದಾಖಲೆ ಬರೆಯಲಿದೆ ಎಂಬ ಕುತೂಹಲ ಕಾಡತೊಡಗಿದೆ. ಇಂತಹ ಕುತೂಹಲ ಹುಟ್ಟಿಸುವ ಸುದ್ದಿಯೊಂದನ್ನು ಇತ್ತೀಚೆಗಷ್ಟೇ ಹೊಂಬಾಳೆ ಫಿಲಂಸ್ ಹೇಳಿಕೊಂಡಿದೆ. ಈ ಸುದ್ದಿಯನ್ನು ಕೇಳಿದ ತಕ್ಷಣ ಅಭಿಮಾನಿಗಳು ಸೇರಿದಂತೆ ಚಿತ್ರರಂಗ ಅಚ್ಚರಿ ಹೊರಹಾಕಿದೆ.
ಇದನ್ನೂ ಓದಿ:’ರಾಜಮೌಳಿ ಕೊಲೆಗೆ ಸಂಚು’: ’ಹತ್ಯಾ ತಂಡದಲ್ಲಿದ್ದೇನೆ‘ ಎಂದ ಆರ್ಜಿವಿ.. ಅಷ್ಟಕ್ಕೂ ಏನಿದು ಟ್ವೀಟ್ ವಿಚಾರ?
ನೀವು 'ಕೆಜಿಎಫ್ ಚಾಪ್ಟರ್ 1' ಮತ್ತು 'ಕೆಜಿಎಫ್ ಚಾಪ್ಟರ್ 2' ನೋಡಿದ್ದೀರಿ. ಇದರ ಮುಂದುವರೆದ ಭಾಗವಾಗಿ ಈ ಚಿತ್ರ ಐದು ಭಾಗಗಳಲ್ಲಿ ತಯಾರಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಪ್ರತಿ ಸೀಕ್ವೆಲ್‌ಗೂ ಬೇರೆ ಬೇರೆ ನಾಯಕ ನಟರು ಕಾಣಿಸಿಕೊಳ್ಳಲಿದ್ದಾರೆ. 2025ರಲ್ಲಿ 'ಕೆಜಿಎಫ್ 3' ಚಿತ್ರ ಆರಂಭವಾಗಬಹುದು ಎಂದು ಹೇಳಿಕೊಂಡಿದೆ. ಈ ಸುದ್ದಿ ಗೊತ್ತಾಗಿದ್ದೇ ತಡ, ಯಶ್ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಬರುವ ಈ ಸರಣಿಯಲ್ಲೂ ಯಶ್ ಇದ್ದರೆ ಒಳ್ಳೆಯದು ಎಂದು ನೆಟಿಜನ್ಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, 'ಕೆಜಿಎಫ್ 3' ರಲ್ಲಿ ಯಾವ ನಟರಿರಲಿದ್ದಾರೆ ಅನ್ನೋದನ್ನು ಬಹಿರಂಗಪಡಿಸಿಲ್ಲ.
ಈ ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಿ 1250 ಕೋಟಿ ಕಲೆಕ್ಷನ್ ಮಾಡಿತ್ತು. ಅಲ್ಲದೇ ಕನ್ನಡ ಚಿತ್ರರಂಗವನ್ನು ಎಲ್ಲರೂ ತಿರುಗಿ ನೋಡುವಂತೆ ಮಾಡಿತು. ಈ ಚಿತ್ರದ ಮೂಲಕ ಯಶ್ ನ್ಯಾಷನಲ್ ಸ್ಟಾರ್ ಆದರೆ, ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಹಲವು ಸಹನಟ ಮತ್ತು ನಟಿಯರಿಗೂ ಸಾಕಷ್ಟು ಬೇಡಿಕೆ ಪಡೆದುಕೊಂಡವರು. ಚಿತ್ರಕ್ಕೆ ನಿರ್ದೇಶನ ಹೇಳಿದ ಪ್ರಶಾಂತ್ ನೀಲ್ ಕೆಜಿಎಫ್ ಬಳಿಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಪ್ರಶಾಂತ್ ನೀಲ್ ಅವರ ಕೆಲಸ ಮತ್ತು ಚಿತ್ರಕ್ಕಾಗಿ ಇವರು ಹಾಕಿದ ಶ್ರಮ ಕಂಡು ಹಲವರು ಇವರನ್ನು ಸಂಪರ್ಕ ಮಾಡತೊಡಗಿದರು. ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಕೂಡ ಹೊರತಾಗಿಲ್ಲ.
ಸಾಲಾರ್ನಲ್ಲಿ ಯಶ್:ಸದ್ಯ ಪ್ರಶಾಂತ್ ನೀಲ್ 'ಸಾಲಾರ್' ಚಿತ್ರಕ್ಕೆ ನಿರ್ದೇಶನ ಹೇಳುತ್ತಿದ್ದು, ಈ ಚಿತ್ರ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ. ನಟ ಪ್ರಭಾಸ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದು ದಿನದಿಂದ ದಿನಕ್ಕೆ ಸಖತ್ ಸೌಂಡ್ ಮಾಡುತ್ತಿದೆ. ಸದ್ಯ 'ಸಾಲಾರ್' ಚಿತ್ರದಲ್ಲಿ ಪ್ರಭಾಸ್ ಜೊತೆ ರಾಕಿಭಾಯ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿಯೊಂದು ಹರಿದಾಡುತ್ತಿದೆ. ಈ ಅಪ್‌ಡೇಟ್ ಕೇಳುತ್ತಿದ್ದಂತೆ ಚಿತ್ರಪ್ರೇಮಿಗಳು ಶಾಕ್ ಆಗಿದ್ದಾರೆ. ಸದ್ಯ ಶೂಟಿಂಗ್ ಹಂತದಲ್ಲಿರುವ 'ಸಾಲಾರ್' ಚಿತ್ರದಲ್ಲಿ ಯಶ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಸಹ ಕೇಳಿಬರುತ್ತಿದೆ. ಇದಕ್ಕಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರು ಯಶ್ ಅವರನ್ನು ಸಂಪರ್ಕಿಸಿದ್ದಾರೆ ಎಂಬ ವರದಿ ಕೂಡ ಬಂದಿದೆ.
ಇದನ್ನೂ ಓದಿ:ರಣಬೀರ್ ಜೊತೆ ಶ್ರದ್ಧಾ ಲಿಪ್ ಕಿಸ್: ಹುಡುಗರ ಎದೆಬಡಿತ ಹೆಚ್ಚಿಸುವ ಹಾಟ್ ಲುಕ್ನಲ್ಲಿ ಬಿಟೌನ್ ಬೆಡಗಿ
ಆದರೆ, ಯಶ್ ಒಪ್ಪಿಕೊಂಡಿದ್ದಾರೆ ಇಲ್ಲವೋ ಅನ್ನೋದರ ಬಗ್ಗೆ ಯಾವುದೇ ಖಚಿತತೆ ಇಲ್ಲ. ಇಬ್ಬರು ಪ್ಯಾನ್-ಇಂಡಿಯನ್ ಹೀರೋಗಳೇ. ಹಾಗಾಗಿ ಇಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ಚಿತ್ರಕ್ಕೆ ಇನ್ನಷ್ಟು ಮೆರಗು ಬರುತ್ತದೆ. ಇದು ನಿಜವಾಗಬೇಕು ಎಂದು ಡಾರ್ಲಿಂಗ್ ಪ್ರಭಾಸ್ ಅಭಿಮಾನಿಗಳು ಮತ್ತು ರಾಕಿಭಾಯ್ ಯಶ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.