ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್, 'ಧೂಮಂ’ ಚಿತ್ರವನ್ನು ನಿರ್ಮಿಸುವ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದೆ. ಮಾಲಿವುಡ್ ಬಹುಬೇಡಿಕೆಯ ನಟ ಫಹಾದ್ ಫಾಸಿಲ್ ಜೊತೆ ನಿರ್ಮಾಪಕ ವಿಜಯ್ ಕಿರಂಗದೂರು ಕೈಜೋಡಿಸಿದ್ದಾರೆ. ಈ ಚಿತ್ರವು ಜೂನ್ 23 ರಂದು ಬಿಡುಗಡೆಯಾಗಲಿದ್ದು, ಇಂದು ಟ್ರೇಲರ್ ರಿಲೀಸ್ ಆಗಿದೆ.
ಈ ಪ್ಯಾನ್ ಇಂಡಿಯಾ ಸಿನಿಮಾದ ಫಸ್ಟ್ ಲುಕ್ ಏಪ್ರಿಲ್ನಲ್ಲಿ ಅನಾವರಣಗೊಂಡಿತ್ತು. ಆ ಪೋಸ್ಟರ್ಗೆ 'ಬೆಂಕಿಯಿಲ್ಲದೇ ಹೊಗೆ ಇಲ್ಲ, ಮೊದಲ ಕಿಡಿ ಇಲ್ಲಿದೆ' ಎಂಬ ಕ್ಯಾಪ್ಷನ್ ಕೊಟ್ಟು ಗಮನ ಸೆಳೆದಿತ್ತು. ಇದೀಗ ಟ್ರೇಲರ್ ರಿಲೀಸ್ ಆಗಿದ್ದು, ಸಿನಿ ಪ್ರೇಕ್ಷಕರ ನಿರೀಕ್ಷೆ ಮುಗಿಲೆತ್ತರಕ್ಕೇರಿದೆ. ಸಿನಿಮಾಗಾಗಿ ಕಾಯುತ್ತಿದ್ದೇವೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಧೂಮಂ ಸಿನಿಮಾವನ್ನು ಲೂಸಿಯಾ ಮತ್ತು ಯೂಟರ್ನ್ ಖ್ಯಾತಿಯ ಪವನ್ ಕುಮಾರ್ ನಿರ್ದೇಶಿಸಿದ್ದಾರೆ. ಪ್ರಖ್ಯಾತ ಬಹುಭಾಷಾ ನಟ ಫಹಾದ್ ಫಾಸಿಲ್ ನಾಯಕನಾಗಿ ನಟಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಚ್ಯುತ್ ಕುಮಾರ್, ಜಾಯ್ ಮ್ಯಾಥ್ಯೂ, ದೇವ್ ಮೋಹನ್, ಅನು ಮೋಹನ್, ರೋಶನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಧೂಮಂ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ, ಸುರೇಶ್ ಅವರ ಸಂಕಲನ ಮತ್ತು ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಅನೀಸ್ ನಾಡೋಡಿ (ಪ್ರೊಡಕ್ಷನ್ ಡಿಸೈನ್) ಮತ್ತು ಪೂರ್ಣಿಮಾ ರಾಮಸ್ವಾಮಿ (ವಸ್ತ್ರ ವಿನ್ಯಾಸ)ವಿರಲಿದೆ.