ಕರ್ನಾಟಕ

karnataka

ETV Bharat / entertainment

ಕೆಜಿಎಫ್ ಖ್ಯಾತಿಯ ತಾತ ಈಗ ಹೀರೋ... ಚಿತ್ರದ ಫಸ್ಟ್ ಲುಕ್ ರಿವೀಲ್ - ನ್ಯಾನೋ ನಾರಾಯಣಪ್ಪ ಚಿತ್ರದಲ್ಲಿ ಕೃಷ್ಣ ಜಿ ರಾವ್​​

ಕೆಜಿಎಫ್ ಕನ್ನಡ ಚಿತ್ರರಂಗವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸಿನಿಮಾ. ಈ ಚಿತ್ರದಿಂದ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿ ಮಿಂಚಿದ್ರೆ, ನಿರ್ದೇಶಕ ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದಲ್ಲಿ ಸ್ಟಾರ್ ಡೈರೆಕ್ಟರ್ ಆಗಿ ಹೊರ ಹೊಮ್ಮಿದ್ರು. ಈ ಸಿನಿಮಾ ಅದೆಷ್ಟೋ ಕಲಾವಿದರ ಬದುಕಿಗೆ ಹೊಸ ತಿರುವು ಕೊಟ್ಟಿದೆ. ಕೆಜಿಎಫ್ ಸಿನಿಮಾದಲ್ಲಿ ಕುರುಡನಾಗಿ ಅಜ್ಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹಿರಿಯ ನಟ ಕೃಷ್ಣ ಜಿ. ರಾವ್, ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ..

KGF tata
ಕೆಜಿಎಫ್ ಖ್ಯಾತಿಯ ತಾತ ಕೃಷ್ಣ ಜಿ ರಾವ್​​

By

Published : Jun 27, 2022, 5:50 PM IST

Updated : Jun 28, 2022, 10:54 AM IST

ಕೆಜಿಎಫ್ ತಾತ ಅಂತಾನೇ ಖ್ಯಾತಿ ಪಡೆದಿರುವ ಕೃಷ್ಣ ಜಿ. ರಾವ್ ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾದ ಸಾರಥಿ ಕುಮಾರ್ ನಿರ್ದೇಶನದ ಹೊಸ ಸಿನಿಮಾ ‘ನ್ಯಾನೋ ನಾರಾಯಣಪ್ಪ’ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ. ಹತ್ತು ತಲೆಯುಳ್ಳ ರಾವಣನ ಅವತಾರದಲ್ಲಿ ರಿಲೀಸ್ ಆಗಿರುವ ಫಸ್ಟ್ ಲುಕ್​ನಲ್ಲಿ ಕೃಷ್ಣ ಜಿ ರಾವ್ ಕಿರೀಟ, ಗ್ಲಾಸ್ ಹಾಕಿ ಫೋಸ್ ಕೊಟ್ಟಿದ್ದಾರೆ. ನ್ಯಾನೋ ಕಾರು ಕೂಡ ಹೈಲೇಟ್ ಆಗಿದ್ದು, ಒಂದಷ್ಟು ಪ್ರತಿಭಾನ್ವಿತ ಕಲಾವಿದರು ಪೋಸ್ಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಾಕ್ರೋಚ್ ಸುಧಿ, ಗಿರೀಶ್ ಶಿವಣ್ಣ, ಪ್ರಶಾಂತ್ ಸಿದ್ದಿ, ಆನಂತು, ಅಪೂರ್ವ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸ್ತಿದ್ದಾರೆ. ಕೆಮಿಸ್ಟ್ರೀ ಆಫ್ ಕರಿಯಪ್ಪ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಉಣಬಡಿಸಿದ್ದ ನಿರ್ದೇಶಕ ಕುಮಾರ್, ಕ್ರಿಟಿಕಲ್ ಕೀರ್ತನೆಗಳು ಸಿನಿಮಾದಲ್ಲಿ ಬೆಟ್ಟಿಂಗ್ ಧಂದೆಯ ಕರಾಳತೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದರು. ಇದೀಗ ನ್ಯಾನೋ ನಾರಾಯಣಪ್ಪ ಸಿನಿಮಾದ ಮೂಲಕ ಮತ್ತೊಮ್ಮೆ ಚಿತ್ರಪ್ರೇಮಿಗಳನ್ನು ಎಂಟರ್‌ಟೈನ್ ಮಾಡಲು ಸಜ್ಜಾಗಿದ್ದಾರೆ.

ನ್ಯಾನೋ ನಾರಾಯಣಪ್ಪ

ಈ ಚಿತ್ರಕ್ಕೆ ಕುಮಾರ್ ಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಕೂಡ ಹಾಕಿದ್ದಾರೆ. ಇದೊಂದು ಕಾಮಿಡಿ ಎಮೋಷನಲ್ ಡ್ರಾಮಾ ಸಿನಿಮಾವಾಗಿದೆ. ತುಂಬ ಕಾಡುವ ಕಥೆ, ಮನೆ ಮಂದಿಯಲ್ಲಾ ಕುಳಿತು ನೋಡುವ ಸಿನಿಮಾ ಅಂತಾರೆ ಕುಮಾರ್. ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಆಗಸ್ಟ್​ನಲ್ಲಿ ಸಿನಿಮಾವನ್ನು ತೆರೆಗೆ ತರಲು ಯೋಜನೆ ಹಾಕಿಕೊಂಡಿದೆ.

ಇದನ್ನೂ ಓದಿ:ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ಆ್ಯಕ್ಷನ್-ಕಟ್.. ಕ್ಲಾಪ್​ ಮಾಡಿದ ಟಾಲಿವುಡ್​ ಪವರ್​ ಸ್ಟಾರ್​​..

ಕುಮಾರ್ ನಿರ್ಮಾಣದ ನ್ಯಾನೋ‌ ನಾರಾಯಣಪ್ಪ ಸಿನಿಮಾಗೆ ರಾಜಶಿವಶಂಕರ ಛಾಯಾಗ್ರಾಹಣ, ಆಕಾಶ್ ಪರ್ವ ಸಂಗೀತ, ಸಿದ್ದು ಸಂಕಲನವಿದೆ. ಸದ್ಯ ಫಸ್ಟ್ ಲುಕ್ ರಿವೀಲ್ ಮಾಡಿರುವ ಚಿತ್ರತಂಡ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈ ಸಿನಿಮಾದಿಂದ ಕೆಜಿಎಫ್ ಕೃಷ್ಣ ಜಿ ರಾವ್​​ಗೆ ಮತ್ತಷ್ಟು ಸಿನಿಮಾ ಅವಕಾಶಗಳು ಸಿಗೋದಂತೂ ಗ್ಯಾರಂಟಿ.

Last Updated : Jun 28, 2022, 10:54 AM IST

For All Latest Updates

ABOUT THE AUTHOR

...view details