ಕರ್ನಾಟಕ

karnataka

ETV Bharat / entertainment

2 ದಿನದಲ್ಲಿ ₹300 ಕೋಟಿ ಗಡಿ ದಾಟಿದ ಕೆಜಿಎಫ್​​-2... ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ - 300 ಕೋಟಿ ಗಳಿಕೆ ಮಾಡಿದ ಕೆಜಿಎಫ್​

ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್-2 ಸಿನಿಮಾ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕೇವಲ ಎರಡು ದಿನಗಳಲ್ಲಿ ಪ್ರಪಂಚದಾದ್ಯಂತ ದಾಖಲೆಯ ₹300 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದೆ ಎಂಬ ವರದಿ ಲಭ್ಯವಾಗಿದೆ.

KGF Chapter2
KGF Chapter2

By

Published : Apr 16, 2022, 3:59 PM IST

Updated : Apr 16, 2022, 4:50 PM IST

ಸಿನಿಮಾ ಪ್ರಪಂಚದಲ್ಲಿ ಇಲ್ಲಿಯವರೆಗೆ ನಿರ್ಮಾಣಗೊಂಡಿದ್ದ ಎಲ್ಲ ದಾಖಲೆ ಕೆಜಿಎಫ್​ ಚಾಪ್ಟರ್​-2ರ ಮುಂದೆ ಧೂಳಿಪಟವಾಗಿವೆ. ಇದರ ಜೊತೆಗೆ ಹೊಸ ರೆಕಾರ್ಡ್‌ ಕೂಡ ಕ್ರಿಯೇಟ್​ ಆಗಿದೆ. ಚಿತ್ರ ತೆರೆ ಕಂಡ ಕೇವಲ ಎರಡು ದಿನಗಳಲ್ಲಿ ದಾಖಲೆಯ 300 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ ಎಂಬ ವರದಿ ಲಭ್ಯವಾಗಿದೆ.

ಮೊದಲ ದಿನವೇ ₹170 ಕೋಟಿ ಕ್ಲಬ್​ ಸೇರಿದ್ದ ಕೆಜಿಎಫ್​ ಚಾಪ್ಟರ್-2 ದಿನದಿಂದ ದಿನಕ್ಕೆ ತನ್ನ ಗಳಿಕೆಯಲ್ಲಿ ಏರುಗತಿ ಕಾಣುತ್ತಿದೆ. ಕಳೆದ ಗುರುವಾರ ಪ್ರಪಂಚದಾದ್ಯಂತ ಈ ಸಿನಿಮಾ ತೆರೆ ಕಂಡಿದ್ದು, ಟಿಕೆಟ್ ಪಡೆದುಕೊಳ್ಳಲು ಸಿನಿ ರಸಿಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಮೊದಲ ಎರಡ ದಿನದಲ್ಲೇ ಜಾಗತಿಕವಾಗಿ ಬಾಕ್ಸ್ ಆಫೀಸ್​ಗಳಿಕೆಯಲ್ಲಿ ₹300 ಕೋಟಿ ಗಡಿ ದಾಟಿದೆ.

ಭಾರತದಲ್ಲೇ 240 ಕೋಟಿ ರೂ ಗಳಿಕೆ: ಹೊಂಬಾಳೆ ಫಿಲಂಸ್​ ಟ್ವೀಟ್ ಮಾಡಿರುವ ಪ್ರಕಾರ, ಚಿತ್ರ ಬಿಡುಗಡೆಯಾದ ಎರಡು ದಿನದಲ್ಲಿ ಭಾರತದಲ್ಲೇ 240 ಕೋಟಿ ರೂ. ಗಳಿಕೆ ಮಾಡಿದೆ ಎಂದು ತಿಳಿಸಿದೆ. ಆದರೆ, ಪ್ರಪಂಚದಾದ್ಯಂತ ಈ ಚಿತ್ರ 300 ಕೋಟಿ ರೂ. ಗಡಿ ಕ್ರಾಸ್ ಮಾಡಿದೆ.

ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ಚಿತ್ರರಂಗದ ವಿಶ್ಲೇಷಕರಾದ ರಮೇಶ್ ಬಾಲಾ ಎಂಬುವವರು ಟ್ವೀಟ್ ಮಾಡಿದ್ದು, ಕೆಜಿಎಫ್​ ಚಾಪ್ಟರ್​-2 ಚಿತ್ರ ಬಿಡುಗಡೆಯಾದ ಎರಡೇ ದಿನದಲ್ಲಿ ಬಾಕ್ಸ್​ ಆಫೀಸ್ ಗಲ್ಲಾ ಪೆಟ್ಟಿಗೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, 300 ಕೋಟಿ ರೂ. ಗಳಿಕೆ ಮಾಡಿದೆ ಎಂದಿದ್ದಾರೆ. ವಿಶೇಷವೆಂದರೆ ಹಿಂದಿ ಅವತರಣಿಕೆಯಲ್ಲೇ ಚಿತ್ರ ₹120 ಕೋಟಿ ರೂ. ಗಡಿ ದಾಟಿದೆ ಎಂದಿದ್ದಾರೆ.

ಇದನ್ನೂ ಓದಿ:ನನ್ನ ಮುಂದಿನ ಸಿನಿಮಾ 'ದಿ ಡೆಲ್ಲಿ ಫೈಲ್ಸ್​': ವಿವೇಕ್​ ಅಗ್ನಿಹೋತ್ರಿ ಘೋಷಣೆ

ಈ ಹಿಂದೆ ರಾಜಮೌಳಿ ನಿರ್ದೇಶನದ ಬಾಹುಬಲಿ 1ರ ಹಿಂದಿ ಅವತರಣಿಕೆ ಮೊದಲ ದಿನ 37 ಕೋಟಿ, ಟೈಗರ್ ಶ್ರಾಫ್​-ಹೃತಿಕ್ ರೋಷನ್ ನಟನೆಯ ವಾರ್ ಸಿನಿಮಾ 29 ಕೋಟಿ ರೂ. ಗಳಿಕೆ ಮಾಡಿತ್ತು. ಆದರೆ ಕೆಜಿಎಫ್ ಹಿಂದಿ ಅವತರಣಿಕೆ 54 ಕೋಟಿ ರೂ. ಮೊದಲ ದಿನವೇ ಗಳಿಕೆ ಮಾಡಿದೆ. ಇಂದು ಮತ್ತು ನಾಳೆ ವಿಕೆಂಡ್​ ಆಗಿರುವ ಕಾರಣ ಕೆಜಿಎಫ್​ ಚಾಪ್ಟರ್-2ರ ಎಲ್ಲ ಅವತರಣಿಕೆಯ ಸಿನಿಮಾ ಟಿಕೆಟ್ ಈಗಾಗಲೇ ಸೋಲ್ಡ್​ ಆಗಿವೆ. ಎರಡು ದಿನಗಳಲ್ಲಿ ಚಿತ್ರ ಹೆಚ್ಚಿನ ಹಣ ಗಳಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗ್ತಿದೆ.

Last Updated : Apr 16, 2022, 4:50 PM IST

ABOUT THE AUTHOR

...view details