ಕರ್ನಾಟಕ

karnataka

ETV Bharat / entertainment

ಕೆಜಿಎಫ್ ಚಾಪ್ಟರ್​-2​: ಯಶ್​, ಸಂಜಯ್​ ದತ್​​, ರವೀನಾ​, ಶ್ರೀನಿಧಿ ಪಡೆದ ಸಂಭಾವನೆ ವಿವರ ಹೀಗಿದೆ.. - ನಾಳೆ ಕೆಜಿಎಫ್ ಚಾಪ್ಟರ್ 2 ರಿಲೀಸ್

ಕೆಜಿಎಫ್​ ಚಾಪ್ಟರ್​ 2 ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಇದರ ಮಧ್ಯೆ ಚಿತ್ರದಲ್ಲಿ ನಟಿಸಿರುವ ನಟ ನಟಿಯರು ಪಡೆದುಕೊಂಡಿರುವ ಸಂಭಾವನೆಯ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದ್ದಿದ್ದೇ. ಗಾಂಧಿ ನಗರದ ಮೂಲಗಳ ಪ್ರಕಾರ, ಚಿತ್ರದಲ್ಲಿ ನಟಿಸಿರುವ ನಟ-ನಟಿಯರ ಸಂಭಾವನೆ ಹೀಗಿದೆ..

KGF Chapter 2
KGF Chapter 2

By

Published : Apr 13, 2022, 6:11 PM IST

Updated : Apr 13, 2022, 6:24 PM IST

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಲು ಮುಂದಾಗಿರುವ 'ಕೆಜಿಎಫ್​ ಚಾಪ್ಟರ್​-2' ಸಿನಿಮಾ ನಾಳೆ ಪ್ರಪಂಚದಾದ್ಯಂತ ರಿಲೀಸ್ ಆಗಲಿದ್ದು, ಚಿತ್ರದ ವೀಕ್ಷಣೆಗೋಸ್ಕರ ಪ್ರೇಕ್ಷಕರು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ಚಿತ್ರದ ಶೂಟಿಂಗ್ ನಡೆದಿದ್ದು, ನಾಳೆ ಚಿತ್ರ ತೆರೆಗಪ್ಪಳಿಸಲಿದೆ. ಚಿತ್ರದಲ್ಲಿ ನಟನೆ ಮಾಡಿರುವ ಯಶ್​, ಸಂಜಯ್ ದತ್​, ನಟಿ ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಸೇರಿದಂತೆ ಎಲ್ಲರೂ ಪಡೆದುಕೊಂಡಿರುವ ಸಂಭಾವನೆಯ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದಿದ್ದೇ.

ಯಶ್, ಪ್ರಶಾಂತ್ ನೀಲ್​, ಅನಂತ್ ನಾಗ್, ಪ್ರಕಾಶ್ ರಾಜ್​ ಹಾಗೂ ಇತರರು ಚಿತ್ರದಲ್ಲಿನ ನಟನೆಗಾಗಿ ದೊಡ್ಡ ಮಟ್ಟದ ಸಂಭಾವನೆ ಪಡೆದುಕೊಂಡಿದ್ದಾರೆ ಅನ್ನೋದು ಗಾಂಧಿನಗರದ ಮಂದಿಯ ಮಾತು. ವರದಿಗಳ ಪ್ರಕಾರ, ರಾಕಿ ಭಾಯ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ಯಶ್​​ ಸುಮಾರು 25ರಿಂದ 27 ಕೋಟಿ ರೂ ಸಂಭಾವನೆ ಪಡೆದುಕೊಂಡಿದ್ದಾರೆಂದು ಹೇಳಲಾಗ್ತಿದೆ. ಉಳಿದಂತೆ, ಅಧೀರನ ಪಾತ್ರದಲ್ಲಿರುವ ಬಾಲಿವುಡ್​ ನಟ ಸಂಜಯ್ ದತ್​​ 9ರಿಂದ 10 ಕೋಟಿ ರೂ. ಪಡೆದುಕೊಂಡಿದ್ದಾರಂತೆ.

ನಟಿ ರವೀನಾ ಟಂಡನ್‌, ಸಂಜಯ್ ದತ್​​

ಇದನ್ನೂ ಓದಿ:ರಣ...ರಣ..ಧೀರ ಎನ್ನುತ್ತಾ ಬಂದ ‘ಸುಲ್ತಾನ್​’: ಕೆಜಿಎಫ್‌-2 ಚಿತ್ರದ ಲಿರಿಕಲ್ ಸಾಂಗ್ ರಿಲೀಸ್​

ಭಾರತದ ಪ್ರಧಾನಿಯ ಪಾತ್ರದಲ್ಲಿ ನಟಿಸಿರುವ ರವೀನಾ ಟಂಡನ್​​ ಈ ಚಿತ್ರಕ್ಕಾಗಿ 1-2 ಕೋಟಿ ರೂ. ಸಂಭಾವನೆ ತೆಗೆದುಕೊಂಡಿದ್ದಾರೆಂದು ಹೇಳಲಾಗ್ತಿದ್ದು, ನಿರ್ದೇಶಕ ಹಾಗೂ ಬರಹಗಾರ ಪ್ರಶಾಂತ್ ನೀಲ್​​ 15ರಿಂದ 20 ಕೋಟಿ ರೂ. ಹಣ ಪಡೆದಿದ್ದಾರಂತೆ.

ರೀನಾ ದೇಸಾಯಿ ಪಾತ್ರದಲ್ಲಿ ನಟಿ ಶ್ರೀನಿಧಿ ಶೆಟ್ಟಿ

ರೀನಾ ದೇಸಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀನಿಧಿ ಶೆಟ್ಟಿ 3ರಿಂದ 4 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿರುವ ಸಾಧ್ಯತೆ ಇದ್ದು, ಉಳಿದಂತೆ ವಿಜಯೇಂದ್ರ ಇಂಗಳಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರಕಾಶ್ ರೈ 80ರಿಂದ 82 ಲಕ್ಷ ರೂ. ಚಾಪ್ಟರ್​ 1 ಭಾಗದಲ್ಲಿರುವ ಅನಂತ್​ ನಾಗ್ 50ರಿಂದ 52 ಲಕ್ಷ ರೂ.ಪಡೆದುಕೊಂಡಿದ್ದಾರೆ. ಸುದ್ದಿವಾಹಿನಿವೊಂದರ ಮುಖ್ಯ ಸಂಪಾದಕಿ ದೀಪಾ ಪಾತ್ರದಲ್ಲಿ ನಟನೆ ಮಾಡಿರುವ ಮಾಳವಿಕಾ ಅವಿನಾಶ್​​ 60ರಿಂದ 62 ಲಕ್ಷ ರೂ ಸಂಭಾವನೆ ಪಡೆದುಕೊಂಡಿದ್ದಾರೆಂದು ಹೇಳಲಾಗ್ತಿದೆ.

Last Updated : Apr 13, 2022, 6:24 PM IST

ABOUT THE AUTHOR

...view details