ಕರ್ನಾಟಕ

karnataka

ETV Bharat / entertainment

'ದಂಗಲ್'​​ ದಾಖಲೆ ಉಡೀಸ್​ ಮಾಡಿದ 'ಕೆಜಿಎಫ್​ 2': ಹಿಂದಿಯಲ್ಲಿ ಹೆಚ್ಚು ಗಳಿಸಿದ 2ನೇ ಚಿತ್ರ ಎಂಬ ಹೆಗ್ಗಳಿಕೆ! - ದಂಗಲ್ ದಾಖಲೆ ಬ್ರೇಕ್ ಮಾಡಿದ ಕೆಜಿಎಫ್​

ಕೆಜಿಎಫ್​ ಚಾಪ್ಟರ್ 2 ನಿರ್ಮಿಸಿರುವ ರೆಕಾರ್ಡ್​ಗಳಿಗೆ ಲೆಕ್ಕವೇ ಇಲ್ಲ. ಇದೀಗ ಹಿಂದಿ ಆವತರಣಿಕೆಯಲ್ಲಿ ದಂಗಲ್ ಸಿನಿಮಾ​​ ದಾಖಲೆ ಉಡೀಸ್​ ಮಾಡಿದೆ.

KGF Chapter 2 overtakes Dangal
KGF Chapter 2 overtakes Dangal

By

Published : May 5, 2022, 3:50 PM IST

ಹೈದರಾಬಾದ್​:ಭಾರತೀಯ ಚಿತ್ರರಂಗದಲ್ಲಿ ನಿತ್ಯ ಒಂದಿಲ್ಲೊಂದು ಹೊಸ ದಾಖಲೆ ನಿರ್ಮಾಣ ಮಾಡ್ತಿರುವ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಫ್ಟರ್ 2 ಇದೀಗ ಹಿಂದಿಯಲ್ಲಿ ಮತ್ತೊಂದು ಸಾಧನೆ ಮಾಡಿದೆ. ಹಿಂದಿ ಅವತರಣಿಕೆಯಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿರುವ ಎರಡನೇ ಚಿತ್ರವಾಗಿ ಹೊರಹೊಮ್ಮಿದೆ. ಇದರ ಜೊತೆಗೆ ಅಮೀರ್ ಖಾನ್ ನಟನೆಯ 'ದಂಗಲ್​' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡಿದೆ.

ಹಿಂದಿ ಅವತರಣಿಕೆಯಲ್ಲಿ ಪ್ರಭಾಸ್ ನಟನೆಯ ಬಾಹುಬಲಿ 2 ಚಿತ್ರ 510.99 ಕೋಟಿ ರೂ. ಗಳಿಕೆ ಮಾಡಿದ್ದು, ದಂಗಲ್​ 387.38 ಕೋಟಿ ರೂ. ಗಳಿಸಿತ್ತು. ಆದರೆ, ಇದೀಗ ಕೆಜಿಎಫ್​ ಚಾಪ್ಟರ್ 2, 391.65 ಕೋಟಿ ರೂ.ಗಳಿಕೆ ಮಾಡುವ ಮೂಲಕ ದಂಗಲ್​ ರೆಕಾರ್ಡ್​ ಧೂಳಿಪಟ ಮಾಡಿದೆ.

ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ವಿಶ್ಲೇಷಕ ತಾರಕ್ ಆದರ್ಶ್​​ ಟ್ವೀಟ್ ಮಾಡಿದ್ದು, ಹಿಂದಿ ಆವತರಣಿಕೆಯಲ್ಲಿ ದಂಗಲ್ ಸಿನಿಮಾ ರೆಕಾರ್ಡ್​​ ಇದೀಗ ಕೆಜಿಎಫ್​​2 ಚಿತ್ರದಿಂದ ಬ್ರೇಕ್​ ಆಗಿದೆ ಎಂದು ತಿಳಿಸಿದ್ದಾರೆ. ಉಳಿದಂತೆ ಹಿಂದಿಯಲ್ಲಿ ಸಲ್ಮಾನ್ ಖಾನ್ ನಟನೆಯ ಟೈಗರ್​ ಜಿಂದಾ ಹೈ 339.16 ಕೋಟಿ, ಅಮೀರ್ ಖಾನ್ ನಟನೆಯ ಪಿಕೆ 340.8 ಕೋಟಿ, ರಣಬೀರ್ ಕಪೂರ್​ ನಟನೆಯ ಸಂಜು 342.53 ಕೋಟಿ ರೂಗಳಿಕೆ ಮಾಡಿವೆ.

ಪ್ರಪಂಚದಾದ್ಯಂತ ಅಮೀರ್ ಖಾನ್ ನಟನೆಯ ದಂಗಲ್​ 2024 ಕೋಟಿ ರೂ. ಗಳಿಕೆ ಮಾಡಿ ಮೊದಲ ಸ್ಥಾನದಲ್ಲಿದ್ದು, ಪ್ರಭಾಸ್ ನಟನೆಯ ಬಾಹುಬಲಿ-2, 1,810 ಕೋಟಿ ರೂ. ಹಾಗೂ ಯಶ್ ನಟನೆಯ ಕೆಜಿಎಫ್​ ಚಾಪ್ಟರ್-2 ಇಲ್ಲಿಯವರೆಗೆ 1,056 ಕೋಟಿ ರೂ. ಗಳಿಕೆ ಮಾಡಿದೆ.

ABOUT THE AUTHOR

...view details