ಹೈದರಾಬಾದ್ : ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವೆಂದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ 'ಕೆಜಿಎಫ್: ಚಾಪ್ಟರ್ 2'. ಸದ್ಯ ಈ ಚಿತ್ರದ ಟ್ರೈಲರ್ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಈಗ ಭಾರತದ ಯಾವುದೇ ರಾಜ್ಯದಲ್ಲೂ ಕೇಳಿದರು ರಾಕಿ ಬಾಯಿ ಹವಾ ಜೋರಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೆಜಿಎಫ್ ಚಾಪ್ಟರ್-2 ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ಅದಕ್ಕೂ ಮೊದಲು ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದೆ.
ಕೆಜಿಎಫ್: ಚಾಪ್ಟರ್- 2 ಚಿತ್ರ ತಂಡದಿಂದ ಎಮೋಷನಲ್ ಸಾಂಗ್ ರಿಲೀಸ್ - ಕೆಜಿಎಫ್: ಚಾಪ್ಟರ್ 2 ಚಿತ್ರ ತಂಡದಿಂದ ಸಾಂಗ್ ರಿಲೀಸ್
‘ಗಗನ ನೀ..’ ಎಂಬ ಹಾಡನ್ನ ಕೆಜಿಎಫ್ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡಿಗೆ ಕಿನ್ನಲ್ ರಾಜ್ ಸಾಹಿತ್ಯ ಬರೆದಿದ್ದು, ಸುಚೇತಾ ಬಸ್ರೂರು ಅವರ ಕಂಠದಲ್ಲಿ ಈ ಎಮೋಷನಲ್ ಗೀತೆ ಮೂಡಿಬಂದಿದೆ. ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ವರ್ಷನ್ಗಳಲ್ಲಿ ಸಾಂಗ್ ರಿಲೀಸ್ ಆಗಿದೆ.
ಕೆಜಿಎಫ್ ಚಿತ್ರತಂಡ ಹೊಸ ಹಾಡೊಂದನ್ನ ಬಿಡುಗಡೆ ಮಾಡಿದೆ. ‘ಗಗನ ನೀ..’ ಎಂಬ ಹಾಡನ್ನ ಬಿಡುಗಡೆ ಮಾಡಿದೆ. ಈ ಹಾಡಿಗೆ ಕಿನ್ನಲ್ ರಾಜ್ ಸಾಹಿತ್ಯ ಬರೆದಿದ್ದು, ಸುಚೇತಾ ಬಸ್ರೂರು ಅವರ ಕಂಠದಲ್ಲಿ ಈ ಎಮೋಷನಲ್ ಗೀತೆ ಮೂಡಿಬಂದಿದೆ. ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ವರ್ಷನ್ಗಳಲ್ಲಿ ಸಾಂಗ್ ರಿಲೀಸ್ ಆಗಿದೆ. ನಟಿ ಅರ್ಚನಾ ಜೋಯಿಸ್ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದಲ್ಲಿ ರಾಕಿ ಬಾಯಿ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.
ಈಗ ತಾಯಿ ಸೆಂಟಿಮೆಂಟ್ ಸಾಂಗ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ, ಚಿತ್ರದ ಬಗ್ಗೆ ಮತ್ತೊಷ್ಟು ನಿರೀಕ್ಷೆ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ವಸಿಷ್ಠ ಸಿಂಹ, ಪ್ರಕಾಶ್ ರಾಜ್, ಸೇರಿದಂತೆ ಹಲವು ಘಟಾನುಘಟಿ ಕಲಾವಿದರು ಅಭಿನಯಿಸಿದ್ದಾರೆ. ಇಡೀ ತಂಡ ಈಗ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕರ್ನಾಟಕ ಮಾತ್ರವಲ್ಲದೇ ಆಂಧ್ರ ಪ್ರದೇಶ, ತೆಲಂಗಾಣ, ಚೆನ್ನೈ, ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲೂ ಪ್ರಚಾರ ಮಾಡುತ್ತಿದೆ.