ಕರ್ನಾಟಕ

karnataka

ETV Bharat / entertainment

ರಣ...ರಣ..ಧೀರ ಎನ್ನುತ್ತಾ ಬಂದ ‘ಸುಲ್ತಾನ್​’: ಕೆಜಿಎಫ್‌-2 ಚಿತ್ರದ ಲಿರಿಕಲ್ ಸಾಂಗ್ ರಿಲೀಸ್​ - Sulthan lyrical video

ರಣ...ರಣ..ಧೀರ ರುದಿರೆಬ್ಬಿ ನಿಂತ ರಣಧೀರ.. ಎಂದು ಈ ಲಿರಿಕಲ್ ಸಾಂಗ್ ಶುರುವಾಗುತ್ತದೆ. ಸಾಂಗ್​ನ ಸಾಲುಗಳು ತುಂಬಾನೇ ಪವರ್ ಫುಲ್ ಆಗಿದ್ದು, ಇದೀಗ 'ಸುಲ್ತಾನ್‌' ಸಾಂಗ್​ ಇಡೀ ಚಿತ್ರದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ.

ಕೆಜಿಎಫ್‌-2 ಚಿತ್ರದ ಲಿರಿಕಲ್ ಸಾಂಗ್ ರಿಲೀಸ್​
ಕೆಜಿಎಫ್‌-2 ಚಿತ್ರದ ಲಿರಿಕಲ್ ಸಾಂಗ್ ರಿಲೀಸ್​

By

Published : Apr 13, 2022, 1:36 PM IST

ಭಾರತೀಯ ಚಿತ್ರರಂಗ ಅಲ್ಲದೇ ವಿಶ್ವದೆಲ್ಲೆಡೆ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿರೋ ಸಿನಿಮಾ ಕೆಜಿಎಫ್ ಚಾಪ್ಟರ್ 2. ನಾಳೆ ತೆರೆಗೆ ಅಪ್ಪಳಿಸಲಿರುವ ಕೆಜಿಎಫ್‌ 2 ಚಿತ್ರದ ‘ಸುಲ್ತಾನ್​’ ವಿಡಿಯೋ ಸಾಂಗ್‌ ಇಂದು ಬಿಡುಗಡೆಯಾಗಿದೆ. ಬೆಳಗ್ಗೆ ಲಹರಿ ಮ್ಯೂಸಿಕ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಸಾಂಗ್​ ರಿಲೀಸ್​​ ಆಗಿದೆ.

ರಣ...ರಣ..ಧೀರ ರುದಿರೆಬ್ಬಿ ನಿಂತ ರಣಧೀರ.. ಎಂದು ಈ ಲಿರಿಕಲ್ ಸಾಂಗ್ ಶುರುವಾಗುತ್ತದೆ. ಸಾಂಗ್​ನ ಸಾಲುಗಳು ತುಂಬಾನೇ ಪವರ್ ಫುಲ್ ಆಗಿದ್ದು, ಇದೀಗ 'ಸುಲ್ತಾನ್‌' ಸಾಂಗ್​ ಇಡೀ ಚಿತ್ರದ ಬಗ್ಗೆ ಜನರ ನಿರೀಕ್ಷೆ ಹೆಚ್ಚಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಹಾಡು ಬಿಡುಗಡೆಯಾಗಿದೆ. ಈ ಹಿಂದೆ 'ತೂಫಾನ್‌' ಸಾಂಗ್​ ರಿಲೀಸ್‌ ಆಗಿತ್ತು.

ರಾಕಿಂಗ್ ಸ್ಟಾರ್ ಯಶ್ ರಾಖಿ ಭಾಯ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್​ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನವಿದೆ. ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಳೆ ಕೆಜಿಎಫ್ ಸಿನಿಮಾ ರಿಲೀಸ್ ಆಗುತ್ತಿದೆ.

ವಿಜಯ್ ಕಿರಂಗದೂರ ಮನೆಗೆ ಭೇಟಿ: ಕೆಜಿಎಫ್ ಚಾಪ್ಟರ್-2 ಬಿಡುಗಡೆಗೆ ಒಂದು ದಿನ ಬಾಕಿ ಇದೆ. ಮತ್ತೊಂದು ಕಡೆ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರ್ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಸಕ್ಸಸ್​ಗಾಗಿ ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಅವರು‌ ಹೊಂಬಾಳೆ ತವರು ಮಂಡ್ಯದ ಕಿರಗಂದೂರಿಗೆ ಭೇಟಿ ನೀಡಿದ್ದಾರೆ.

ವಿಜಯ್ ಕಿರಂಗದೂರ ಮನೆಗೆ ಭೇಟಿ

ಕಿರಗಂದೂರು ನಿರ್ಮಾಪಕ ವಿಜಯ್ ಅವರು ಹುಟ್ಟಿದ ಊರು. ಹೀಗಾಗಿ ವಿಜಯ್ ಕಿರಂಗದೂರ ಊರಿನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೇ, ತಾವು ಹುಟ್ಟಿದ ಮನೆಗೆ ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ವಿಜಯ್ ಕಿರಂಗದೂರ್ ಕರೆದುಕೊಂಡು ಹೋಗಿ ಸಹೋದರ, ಅಪ್ಪ, ಅಮ್ಮ ಮತ್ತು ಸಂಬಂಧಿಕರನ್ನು ಭೇಟಿ ಮಾಡಿಸಿದ್ದಾರೆ. ಅಷ್ಟೇ ಅಲ್ಲಾ, ವಿಜಯ್ ಕಿರಗಂದೂರು ಅವರ ಮನೆಯಲ್ಲೇ‌ ಮಧ್ಯರಾತ್ರಿಯವರೆಗೂ ಕಾಲ ಕಳೆದಿದ್ದಾರೆ.

ಇದನ್ನೂ ಓದಿ:'ಕೆಜಿಎಫ್​​ ಚಾಪ್ಟರ್​​-2' ಬಿಡುಗಡೆಗೆ ಕ್ಷಣಗಣನೆ: ಯಶ್‌ ಕ್ಷಮೆ ಕೇಳಿದ್ದೇಕೆ? ವಿಡಿಯೋ ನೋಡಿ

ABOUT THE AUTHOR

...view details