ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ ಹೆಚ್ಚು ಸದ್ದು ಮಾಡಿದ ಮಾಡುತ್ತಿರುವ ಚಿತ್ರ. ಈ ಚಿತ್ರದ ಹಿಂದೆ ಹಲವಾರು ಕೆಲಸಗಾರರ ಶ್ರಮ ಇದೆ. ಅವರನ್ನೆಲ್ಲಾ ಒಟ್ಟಾಗಿ ಕರೆದುಕೊಂಡು ಹೋದ ಸಿನಿಮಾದ ನಿರ್ಮಾಪಕ ವಿಜಯ್ ಕಿರಂಗದೂರ್ ಸಾಹಸವನ್ನು ಮೆಚ್ಚಲೇಬೇಕು.
ಕೆಜಿಎಫ್ ಚಾಪ್ಟರ್ 2 ಸಿನಿಮಾದ ತೆರೆ ಹಿಂದಿನ ಶ್ರಮಜೀವಿಗಳು ಇವರೇ!
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾದ ತೆರೆಯ ಹಿಂದೆ 50ಕ್ಕೂ ಹೆಚ್ಚು ಜನ ಟೆಕ್ನಿಶಿಯನ್ ಕೆಲಸ ಮಾಡಿದ್ದಾರೆ. ಪ್ರಶಾಂತ್ ನೀಲ್ ಕನಸಿಗೆ ತಕ್ಕ ಹಾಗೇ ಕ್ಯಾಮರಾ ವರ್ಕ್ ಮಾಡಿದವರು ಭುವನ್ ಗೌಡ. ಸಿನಿಮಾದಲ್ಲಿನ ಕೆಲವು ಘಟನೆಗಳ ಬಗ್ಗೆ ಇವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯ, ಪ್ರಶಾಂತ್ ನೀಲ್ ನಿರ್ದೇಶನ ಹಾಗು ನಿರ್ಮಾಪಕ ವಿಜಯ್ ಕಿರಂಗದೂರ್ ಅದ್ಧೂರಿ ವೆಚ್ಚದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಹಿಟ್ ಆಗುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಏಪ್ರಿಲ್ 14ರಂದು ವಿಶ್ವಾದ್ಯಂತ ಸಿನಿಮಾ ಬಿಡುಗಡೆ ಆಗಿ ಮೂರನೇ ವಾರ ಮುಗಿಸಿ ನಾಲ್ಕನೇ ವಾರದತ್ತ ಮುನ್ನಗುತ್ತಿದೆ. ಎಂಟನೇ ದಿನಕ್ಕೆ ವಿಶ್ವಾದ್ಯಂತ 800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಮಾಹಿತಿ ನೀಡಿತ್ತು.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾದ ತೆರೆ ಹಿಂದೆ 50 ಕ್ಕೂ ಹೆಚ್ಚು ಜನ ಟೆಕ್ನಿಶಿಯನ್ ಕೆಲಸ ಮಾಡಿದ್ದಾರೆ. ಪ್ರಶಾಂತ್ ನೀಲ್ ಕನಸಿಗೆ ತಕ್ಕ ಹಾಗೇ ಕ್ಯಾಮರಾ ವರ್ಕ್ ಮಾಡಿದವರು ಭುವನ್ ಗೌಡ. ಇವರ ಜೊತೆ ಹಲವಾರು ಜನ ಸಹ ಕೆಲಸಗಾರರಾಗಿ ಶ್ರಮಿಸಿದ್ದಾರೆ. ಸಹಾಯಕ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಕುಮಾರ್ ಗೌಡ, ಪ್ರಜ್ವಲ್, ಸ್ಯಾಂಡಿ ಹಾಗು ಲೈಟ್ ಮ್ಯಾನ್ ಆಗಿ ಕೆಲಸ ಮಾಡಿರುವ ಸಾಗರ್ ಹಾಗು ಶರಣ್ ಈ ಸಿನಿಮಾದ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ.