ಕೆಜಿಎಫ್ ಸಿನಿಮಾ ಮೂಲಕ ಖ್ಯಾತಿ ಗಳಿಸಿ, ಕೆಜಿಎಫ್ ತಾತ ಎಂದೇ ಕರೆಸಿಕೊಳ್ಳುವ ಕೃಷ್ಣ ಜಿ ರಾವ್ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಸಂಬಂಧಿಕರ ಮನೆಗೆ ಕೃಷ್ಣ ಅವರು ಹೋಗಿದ್ದರು ಎನ್ನಲಾಗಿದ್ದು, ಅಲ್ಲಿ ಸುಸ್ತು ಕಂಡುಬಂದ ಕಾರಣ ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ವಿನಾಯಕ ಆಸ್ಪತ್ರೆಯ ಐಸಿಯುವಿನಲ್ಲಿ ಕೃಷ್ಣ ಜಿ ರಾವ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಜಿಎಫ್ ಹಾಗೂ ಕೆಜಿಎಫ್ 2 ಸಿನಿಮಾದಲ್ಲಿನ ಪಾತ್ರವು ಕೃಷ್ಣ ಅವರಿಗೆ ದೊಡ್ಡಮಟ್ಟದ ಖ್ಯಾತಿ ತಂದುಕೊಟ್ಟಿದೆ.