ಕರ್ನಾಟಕ

karnataka

ETV Bharat / entertainment

Jailer: ದೇಶಾದ್ಯಂತ ಜೈಲರ್​ ಹವಾ - ರಜನಿಕಾಂತ್​ ಸಿನಿಮಾ ವೀಕ್ಷಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್​ - Pinarayi Vijayan

Kerala CM Pinarayi Vijayan: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ಜೈಲರ್​ ಸಿನಿಮಾ ವೀಕ್ಷಿಸಿದ್ದಾರೆ.

Pinarayi Vijayan watch Jailer Movie
ಜೈಲರ್ ವೀಕ್ಷಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್​

By

Published : Aug 13, 2023, 4:54 PM IST

ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಇಂಡಿಯನ್​ ಸೂಪರ್​ ಸ್ಟಾರ್​ ರಜನಿಕಾಂತ್ ಮುಖ್ಯಭೂಮಿಕೆಯ ಜೈಲರ್​ ಸಿನಿಮಾ ಅದ್ಭುತ ಪ್ರದರ್ಶನ ಮುಂದುವರಿಸಿದೆ. ಆಗಸ್ಟ್ 10 ರಂದು ತೆರೆಗಪ್ಪಳಿಸಿರುವ ಈ ಸಿನಿಮಾ, ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶ ಕಂಡಿದೆ. ಇದೀಗ, ರಾಜಕೀಯ ಗಣ್ಯರೂ ಸಹ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಗುರುವಾರ ತೆರೆಕಂಡಿರುವ ಜೈಲರ್​ ಮೊದಲ ದಿನವೇ 50 ಕೋಟಿ ರೂ. ಸಂಪಾದನೆ ಮಾಡಿ ಸದ್ದು ಮಾಡಿದೆ. ನೆಲ್ಸನ್​ ದಿಲೀಪ್​ ಕುಮಾರ್​ ಆ್ಯಕ್ಷನ್ ಕಟ್​ ಹೇಳಿರುವ ಸಿನಿಮಾದಲ್ಲಿ 'ತಲೈವಾ' ಅದ್ಭುತ ಅಭಿನಯ ಮಾಡಿದ್ದು, ಪ್ರೇಕ್ಷಕರು ಮತ್ತು ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ಮೆಚ್ಚಿ ಕೊಂಡಾಡಿದ್ದಾರೆ.

ಜೈಲರ್ ವೀಕ್ಷಿಸಿದ ಕೇರಳ ಸಿಎಂ:​ ರಜನಿಕಾಂತ್ ತಮ್ಮ ವಿಭಿನ್ನ ನಟನೆಯಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಪ್ರಿಯರು ಚಿತ್ರಮಂದಿರಗಳತ್ತ ಧಾವಿಸುತ್ತಿದ್ದಾರೆ. ಇದೀಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರೂ ಕೂಡ ಸಿನಿಮಾ ವೀಕ್ಷಿಸಿ ಆನಂದಿಸಿದ್ದಾರೆ. ಇದು ಚಿತ್ರತಂಡ ಮತ್ತು ಅಭಿಮಾನಿಗಳ ಖುಷಿಯನ್ನು ದ್ವಿಗುಣಗೊಳಿಸಿದೆ.

ಪಿಣರಾಯಿ ವಿಜಯನ್​ ಅವರು ಮಲ್ಟಿಫ್ಲೆಕ್ಸ್​ಗೆ ಭೇಟಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ಕ್ಲಿಪ್​​ನಲ್ಲಿ ಬಿಗಿ ಭದ್ರತೆಯ ನಡುವೆ ಕೇರಳ ಮುಖ್ಯಮಂತ್ರಿ ತಮ್ಮ ಕುಟುಂಬಸ್ಥರೊಂದಿಗೆ ಸಿನಿಮಾ ವೀಕ್ಷಿಸಲು ಹೋಗುತ್ತಿರುವುದನ್ನು ಕಾಣಬಹುದು. ವೈರಲ್​ ಆಗಿರುವ ವಿಡಿಯೋ ಪ್ರಕಾರ, ಕೇರಳದ ಲುಲು ಮಾಲ್​ನಲ್ಲಿರುವ ಪಿವಿಆರ್​ ಸಿನಿಮಾ ಹಾಲ್​ನಲ್ಲಿ ಸಿಎಂ ಫ್ಯಾಮಿಲಿ ಜೈಲರ್​ ಸಿನಿಮಾ ವೀಕ್ಷಿಸಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:Jawan Song: ನಾಳೆ ಜವಾನ್ ರೊಮ್ಯಾಂಟಿಕ್​​​ ಸಾಂಗ್​ ರಿಲೀಸ್;​ ಚಲೇಯಾ ಟೀಸರ್​ ನೋಡಿದ್ರಾ?

ಜೈಲರ್​ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಧೂಳೆಬ್ಬಿಸಿದೆ. ಉತ್ತಮ ಪ್ರದರ್ಶನ ಮುಂದುವರಿದಿದ್ದು, ಕಲೆಕ್ಷನ್​ ಅಂಕಿಅಂಶ ಏರುವ ಸಾಧ್ಯತೆ ಹೆಚ್ಚಿದೆ. ವರದಿಗಳ ಪ್ರಕಾರ, ಎಲ್ಲ ಭಾಷೆಗಳೂ ಸೇರಿ ಭಾರತದಲ್ಲಿ 109 ಕೋಟಿ ರೂ. ಗಳಿಸುವಲ್ಲಿ ಸಿನಿಮಾ ಯಶಸ್ವಿ ಆಗಿದೆ. ತಮಿಳು ಸಿನಿಮಾ ಹಿಂದಿ, ತೆಲುಗು, ಮಲಯಾಳಂ, ಕನ್ನಡಕ್ಕೂ ಡಬ್​ ಆಗಿದೆ.

ಇದನ್ನೂ ಓದಿ:Actor Rajinikanth: ಭಾರತದಲ್ಲಿ ಜೈಲರ್​ ಅಬ್ಬರ.. ಆಧ್ಯಾತ್ಮಿಕ ಪ್ರವಾಸದಲ್ಲಿ ರಜನಿಕಾಂತ್​ - ಬದ್ರಿನಾಥ್ ದೇವಸ್ಥಾನದಲ್ಲಿ ವಿಶೇಷ ಪೂಜೆ

ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನದ ಜೈಲರ್​ ಆಗಸ್ಟ್ 10 ರಂದು ತೆರೆಕಂಡಿದೆ. ಜಗತ್ತಿನಾದ್ಯಂತ 7,000ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ತೆರೆ ಕಂಡ ಮೂರೇ ದಿನದೊಳಗೆ 100 ಕೋಟಿ ಕ್ಲಬ್​ ಸೇರುವ ಮೂಲಕ 2023ರ ಹಿಟ್​ ಸಿನಿಮಾವಾಗಿ ಹೊರಹೊಮ್ಮಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, ಮೊದಲ ದಿನವೇ 48.35 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಯಿತು. ಎರಡನೇ ದಿನ 25.75 ಕೋಟಿ ರೂ., ಮೂರನೇ ದಿನ 35 ಕೋಟಿ ರೂ. ಸೇರಿ ಮೂರು ದಿನಗಳಲ್ಲಿ 109.10 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ABOUT THE AUTHOR

...view details