ಕರ್ನಾಟಕ

karnataka

ETV Bharat / entertainment

'ಕೆಂಡ' ಚಿತ್ರಕ್ಕೆ ನಿರ್ಮಾಪಕಿಯಾಗಿ ಹೊಸ ದಾಖಲೆ ಬರೆದ 'ಗಂಟುಮೂಟೆ' ರೂಪಾ ರಾವ್ - ಈಟಿವಿ ಭಾರತ ಕನ್ನಡ

Kenda movie: 'ಗಂಟುಮೂಟೆ' ಚಿತ್ರದಿಂದ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದ ರೂಪಾ ರಾವ್, ಇದೀಗ 'ಕೆಂಡ' ಚಿತ್ರದ ಮೂಲಕ ನಿರ್ಮಾಪಕಿಯಾಗಿ ಮಿಂಚಲಿದ್ದಾರೆ.

Kenda movie produced by Roopa Rao
ರೂಪಾ ರಾವ್

By ETV Bharat Karnataka Team

Published : Nov 7, 2023, 5:51 PM IST

'ಗಂಟುಮೂಟೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ನಿರ್ದೇಶಕಿಯಾಗಿ ಗಮನ ಸೆಳೆದವರು ರೂಪಾ ರಾವ್. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಕೊರತೆ ಎದ್ದು ಕಾಣುತ್ತಿರುವ ಹೊತ್ತಿನಲ್ಲಿ ರೂಪಾ ರಾವ್ 'ಗಂಟುಮೂಟೆ' ಚಿತ್ರದ ಮೂಲಕ ಮಹಿಳಾ ನಿರ್ದೇಶಕಿಯರ ಸಾಲಿನಲ್ಲಿ ಸ್ಥಾನ ಪಡೆದುಕೊಂಡವರು. ಈ ಚಿತ್ರದ ಬಳಿಕ ರೂಪಾ ಅವರ ಮುಂದಿನ ಸಿನಿಮಾ ಬಗ್ಗೆ ಬಾರಿ ಕುತೂಹಲವಿತ್ತು. ಇದೀಗ ಅವರ ಹೊಸ ಚಿತ್ರ ಆಗಿದೆ.

'ಕೆಂಡ'

ಆದರೆ,ಈ ಬಾರಿ ನಿರ್ಮಾಪಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ. ರೂಪಾ ರಾವ್ 'ಕೆಂಡ' ಚಿತ್ರದ ಮೂಲಕ ನಿರ್ಮಾಪಕಿಯಾಗಿ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ನಾನಾ ದಿಕ್ಕುಗಳಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರದ ಮೂಲಕ ಒಂದು ಅಭೂತ ಪೂರ್ವವಾದ ದಾಖಲೆಯನ್ನು ಬರೆಯುವ ತವಕದಲ್ಲಿ ರೂಪಾ ರಾವ್ ಇದ್ದಾರೆ.

ಇತ್ತೀಚೆಗಷ್ಟೇ 'ಕೆಂಡ' ಚಿತ್ರದ ಒಂದಷ್ಟು ಪಾತ್ರಗಳನ್ನು ಚಿತ್ರತಂಡ ಪರಿಚಯಿಸಿತ್ತು. ಆ ಪಾತ್ರಗಳು ಮೂಡಿ ಬಂದಿದ್ದ ಪರಿಯನ್ನು ಕಂಡಿದ್ದ ಪ್ರೇಕ್ಷಕರೆಲ್ಲರೊಳಗೂ ಕೆಂಡದ ಬಗೆಗೊಂದು ಕೌತುಕ ಹುಟ್ಟಿಸಿತ್ತು. ಅಷ್ಟರ ಮಟ್ಟಿಗೆ ನಿರ್ದೇಶಕ ಸಹದೇವ್ ಕೆಲವಡಿ ಮತ್ತು ತಂಡ ಕೆಂಡ ಚಿತ್ರದ ಪಾತ್ರವರ್ಗವನ್ನು ರಿವೀಲ್ ಮಾಡಿತ್ತು. ಅಷ್ಟಕ್ಕೂ ಈ ಹಿಂದೆ ಗಂಟುಮೂಟೆ ಚಿತ್ರವನ್ನು ರೂಪಾ ರಾವ್ ಮತ್ತು ಸಹದೇವ್ ಕೆಲವಡಿ ಜೊತೆಯಾಗಿ ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ:ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ 'ಮೆಲ್ಲಗೆ' ರೊಮ್ಯಾಂಟಿಕ್‌ ಹಾಡು ಬಿಡುಗಡೆ

ನಿರ್ದೇಶಕರಾಗಬೇಕು ಎಂಬ ಬಯಕೆ ಹೊಂದಿದ್ದ ಸಹದೇವ್ ಮಾಡಿಕೊಂಡಿದ್ದ ಕಥೆ ಆರಂಭಿಕವಾಗಿಯೇ ರೂಪಾರನ್ನು ಸೆಳೆದಿತ್ತಂತೆ. ಒಂದಷ್ಟು ವರ್ಷಗಳ ಕಾಲ ಒಟ್ಟಿಗೆ ಕಾರ್ಯ ನಿರ್ವಹಿಸಿದ್ದರಿಂದಾಗಿ, ಸಹದೇವ್ ಆ ಕಥೆಗೆ ಯಾವ ಸ್ವರೂಪದಲ್ಲಿ ದೃಶ್ಯರೂಪ ಕೊಡಬಹುದು ಎಂಬ ಸ್ಪಷ್ಟ ಅಂದಾಜು ರೂಪಾ ಅವರಿಗಿತ್ತು. ಆ ಕಾರಣದಿಂದಲೇ ಕೆಂಡ ನಿರ್ಮಾಣ ಕಾರ್ಯದಲ್ಲಿ ಅವರು ಭಾಗಿಯಾಗಿದ್ದಾರೆ.

ರೂಪಾ ರಾವ್

ರೂಪಾ ರಾವ್ ನಿರ್ಮಾಪಕಿಯಾಗಿ ಒಂದು ಪಕ್ಕಾ ಗ್ಯಾಂಗ್​ಸ್ಟರ್ ಕಥೆಯ ಕೆಂಡವನ್ನು ನಿರ್ಮಾಣ ಮಾಡಿದ್ದಾರೆ. ಈ ಬಗೆಯ ಚಿತ್ರವನ್ನು ನಿರ್ಮಾಣ ಮಾಡಿದ ಮೊದಲ ನಿರ್ಮಾಪಕಿ ಎಂಬ ದಾಖಲೆ ರೂಪಾ ರಾವ್ ಅವರ ಮುಡಿಗೇರಿದೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲಿಯೇ ಇಂತಹದೊಂದು ಪಲ್ಲಟದ ರೂವಾರಿಯಾಗಿ ರೂಪಾ ರಾವ್ ಗುರುತಿಸಿಕೊಳ್ಳುತ್ತಾರೆ.

ಹಲವಾರು ವಿಶೇಷತೆಗಳನ್ನು ಹೊಂದಿರುವ ಕೆಂಡ ಚಿತ್ರದ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಸದ್ಯದಲ್ಲಿಯೇ ಟೀಸರ್ ಲಾಂಚ್ ಮಾಡಲು ಚಿತ್ರತಂಡ ತಯಾರಾಗುತ್ತಿದೆ. ಈಗಾಗಲೇ ಕೆಂಡ ಹಲವಾರು ಅಂತಾರಾಷ್ಟ್ರೀಯ ಫಿಲ್ಮ್​ ಫೆಸ್ಟಿವಲ್‍ಗಳಲ್ಲಿ ಮಿಂಚಲು ಅಣಿಗೊಳ್ಳುತ್ತಿದೆ. ಇದೇ ಹೊತ್ತಿನಲ್ಲಿ ನಿರ್ದೇಶಕಿಯಾಗಿಯೂ ಕ್ರಿಯಾಶೀಲರಾಗಿರುವ ರೂಪಾ ರಾವ್, ಸಣ್ಣ ಗ್ಯಾಪಿನಲ್ಲಿ 'ಆಸ್ಮಿನ್' ಎಂಬ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಅದು ಇಷ್ಟರಲ್ಲಿಯೇ ಓಟಿಟಿಯಲ್ಲಿ ಬಿಡುಗಡೆಗೊಳ್ಳಲಿದೆ. ಕೆಂಡ ಬಿಡುಗಡೆಯಾದ ಬೆನ್ನಲ್ಲಿಯೇ ರೂಪಾ ರಾವ್ ನಿರ್ದೇಶನದ ಬಿಗ್ ಬಜೆಟ್​ನ ಚಿತ್ರ ಚಾಲೂ ಆಗಲಿದೆಯಂತೆ.

ಇದನ್ನೂ ಓದಿ:'ದಿ ವೆಕೆಂಟ್ ಹೌಸ್' ಹಾರರ್​ ಸಿನಿಮಾವಲ್ಲ; ಖಾಲಿ ಮನೆ ಸುತ್ತ ನಡೆಯೋ​ ಕಥೆ - ಎಸ್ತರ್ ನರೋನ್ಹಾ

ABOUT THE AUTHOR

...view details