ಕರ್ನಾಟಕ

karnataka

ETV Bharat / entertainment

"ದಸರಾ" ಚಿತ್ರತಂಡಕ್ಕೆ ಚಿನ್ನದ ನಾಣ್ಯ ಗಿಫ್ಟ್​ ನೀಡಿದ ನಟಿ ಕೀರ್ತಿ ಸುರೇಶ್! ಯಾಕೆ ಗೊತ್ತಾ? - ನಟಿ ಕೀರ್ತಿ ಸುರೇಶ್​ ಭರ್ಜರಿ ಗಿಫ್ಟ್​​

ಪ್ಯಾನ್​ ಇಂಡಿಯಾ ಸಿನಿಮಾ ಸಿಂಪಲ್​​ಸ್ಟಾರ್​ ನಾನಿ ಅಭಿನಯದ ದಸರಾ ಸಿನಿಮಾ ಇದೇ 30 ರಂದು ತೆರೆಗೆ ಬರಲಿದೆ. ನಾಯಕಿ ಕೀರ್ತಿ ಸುರೇಶ್​ ಸಿನಿಮಾ ತಂಡಕ್ಕೆ ಭರ್ಜರಿ ಉಡುಗೊರೆ ನೀಡಿದ್ದಾರೆ.

ನಟಿ ಕೀರ್ತಿ ಸುರೇಶ್
ನಟಿ ಕೀರ್ತಿ ಸುರೇಶ್

By

Published : Mar 21, 2023, 9:06 AM IST

ಹೈದರಾಬಾದ್:ಸಿಂಗರೇಣಿ ಕಲ್ಲಿದ್ದಲು ಗಣಿಗಳ ಹಿನ್ನೆಲೆಯ ಮಾಸ್ ಆ್ಯಕ್ಷನ್ ಸಬ್ಜೆಕ್ಟ್ ಒಳಗೊಂಡ ದಸರಾ ಸಿನಿಮಾ ತೆರೆ ಮೇಲೆ ಅಪ್ಪಳಿಸಲು ಸಿದ್ಧವಾಗಿದೆ. ಇದೇ ತಿಂಗಳ 30 ರಂದು ಸಿನಿಮಾ ಚಿತ್ರಮಂದಿಗಳಿಗೆ ಲಗ್ಗೆ ಇಡಲಿದೆ. ಇಂತಿಪ್ಪ ಚಿತ್ರತಂಡದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಸಿನಿಮಾದ ನಾಯಕಿ ನಟಿ ಕೀರ್ತಿ ಸುರೇಶ್​ ಅವರು ಚಿತ್ರತಂಡದ 130 ಸದಸ್ಯರಿಗೆ ತಲಾ 10 ಗ್ರಾಂ ತೂಕದ ಚಿನ್ನದ ನಾಣ್ಯವನ್ನು ಉಡುಗೊರೆಯಾಗಿ ನೀಡಿದ್ದಾರೆ.

ನಿಜ! ಚಿತ್ರೀಕರಣದ ಕೊನೆಯ ದಿನದಂದು ಬಬ್ಲಿ ಬೇಬಿ ಕೀರ್ತಿ ಸುರೇಶ್​ ಸಿನಿಮಾ ತಂಡಕ್ಕೆ ದುಬಾರಿ ಉಡುಗೊರೆಯನ್ನು ಕೊಟ್ಟಿದ್ದಾರೆ. ಪ್ರತಿ ಸದಸ್ಯರಿಗೆ 10 ಗ್ರಾಂನ ಚಿನ್ನದ ನಾಣ್ಯವನ್ನು ಕೀರ್ತಿ ವಿತರಿಸಿದ್ದಾರಂತೆ. ಇದಕ್ಕಾಗಿ ನಟಿ 70 ರಿಂದ 75 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇದು ಸಿನಿಮಾ ತಂಡಕ್ಕೆ ಖುಷಿ ನೀಡಿದ್ದರೆ, ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೆ ನಟಿ ಈ ಮೂಲಕ ಧನ್ಯವಾದ ಹೇಳಿದ್ದಾರೆ.

ಚಿತ್ರತಂಡದ ಪ್ರಕಾರ, ನಟಿ ಕೀರ್ತಿ ಸುರೇಶ್​ ಅವರು ಚಿತ್ರೀಕರಣದ ಕೊನೆಯ ದಿನದಂದು ಸಾಕಷ್ಟು ಭಾವುಕರಾಗಿದ್ದರು. ಸಿನಿಮಾ ಶೂಟಿಂಗ್​ ವೇಳೆ ತನಗೆ ಅತ್ಯುತ್ತಮವಾಗಿ ಬೆಂಬಲಿಸಿ ತಂಡದ ಎಲ್ಲ ಸದಸ್ಯರಿಗೆ ವಿಶೇಷವಾಗಿ ಧನ್ಯವಾದ ಹೇಳಬೇಕು ಎಂದು ನಿರ್ಧರಿಸಿದ್ದರಂತೆ. ಅದರಂತೆ ದುಬಾರಿ ಗಿಫ್ಟ್​ ಅನ್ನೇ ನೀಡಿದ್ದಾರೆ.

30 ರಂದು ತೆರೆ ಮೇಲೆ ದಸರಾ ಹಬ್ಬ:ತೆಲಂಗಾಣದ ಗೋದಾವರಿಖಾನಿ ಬಳಿಯಿರುವ ಸಿಂಗರೇಣಿ ಕಲ್ಲಿದ್ದಲು ಗಣಿಗಳ ಹಿನ್ನೆಲೆಯ ಆ್ಯಕ್ಷನ್​ ಆಧಾರಿತ ಸಿನಿಮಾ ಮಾರ್ಚ್ 30 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ಚಿತ್ರ 'ದಸರಾ' ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಬಹು ನಿರೀಕ್ಷಿತ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್​ ಸಖತ್​ ಸದ್ದು ಮಾಡಿದ್ದು, ಪ್ರೇಕ್ಷಕರ ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರವನ್ನು ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿ ಸುಧಾಕರ್ ಚೆರುಕುರಿ ಬಿಗ್ ಬಜೆಟ್​ನಲ್ಲಿ ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ.

ಹಳ್ಳಿ ಹುಡುಗಿಯಾಗಿ ಕೀರ್ತಿ ಸುರೇಶ್:ಚಿತ್ರದಲ್ಲಿ ಕೀರ್ತಿ ಸುರೇಶ್ ಯಾವ ರೀತಿ ಕಾಣಸಿಗುತ್ತಾರೆ ಎಂಬ ಕುತೂಹಲ ಅಭಿಮಾನಿ ಬಳಗದಲ್ಲಿತ್ತು. ಆ ಕುತೂಹಲವನ್ನು ಹಾಗೆಯೇ ಕಾಪಾಡಿಕೊಂಡು ಬಂದಿದ್ದ ಚಿತ್ರತಂಡ ಕೀರ್ತಿ ಸುರೇಶ್ ಅವರ ಜನ್ಮದಿನದಂದು ಫಸ್ಟ್ ಲುಕ್ ರಿವೀಲ್ ಮಾಡಿತ್ತು. ನಾಯಕ ನಾನಿ ರಗಡ್​ ಅವತಾರದಲ್ಲಿ ಇರುವುದನ್ನು ಮೆಚ್ಚಿದ್ದ ಅಭಿಮಾನಿಗಳು, ನಟಿ ಕೀರ್ತಿ ಸುರೇಶ್ ಅವರ ಸಿಂಪಲ್​ ಲುಕ್​ ಅನ್ನು ಸಿಕ್ಕಾಪಟ್ಟೆ ಮೆಚ್ಚಿಕೊಂಡಿದ್ದಾರೆ. ಕೀರ್ತಿ ಚಿತ್ರದಲ್ಲಿ ವೆನ್ನಲ ಪಾತ್ರ ನಿರ್ವಹಿಸಿದ್ದು, ಹಳ್ಳಿ ಹುಡುಗಿಯಾಗಿ ಕಾಣಸಿಗಲಿದ್ದಾರೆ.

ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಮೆಗಾ ಪ್ರಾಜೆಕ್ಟ್ 'ದಸರಾ' ಸಿನಿಮಾದ ಟೀಸರ್ ಬಿಡುಗಡೆ ವಿಶೇಷವಾಗಿತ್ತು. ಬಹುನಿರೀಕ್ಷಿತ ಸಿನಿಮಾದ ಟೀಸರ್ ಅನ್ನು ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಯ ಸ್ಟಾರ್ ನಟರು ಜನವರಿ 30 ರಂದು ರಿಲೀಸ್​ ಮಾಡಿದ್ದರು. ಹಿಂದಿಯಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್, ತಮಿಳಿನಲ್ಲಿ ಧನುಷ್, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ:‘ಎಲ್ಲೋ ಜೋಗಪ್ಪ ನಿನ್ನರಮನೆ'ಗೆ ನಟಿ ಸಂಜನಾ ದಾಸ್​ ಆಗಮನ​

ABOUT THE AUTHOR

...view details