ಸಿಸಿಎಲ್ ಕ್ರಿಕೆಟ್ ಲೀಗ್ ಬಳಿಕ ಸೌತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಕ್ರಿಕೆಟ್ ಟೂರ್ನಿ ಅಂದ್ರೆ ಅದು ಕೆಸಿಸಿ. 'ಕರ್ನಾಟಕ ಚಲನಚಿತ್ರ ಕಪ್' ಹೆಸರಿನಲ್ಲಿ ಸ್ಯಾಂಡಲ್ವುಡ್ ಕಲಾವಿದರೆಲ್ಲರೂ ಒಂದೆಡೆ ಸೇರಿ ಒಗ್ಗಟ್ಟು ಪ್ರದರ್ಶಿಸುವ ವೇದಿಕೆ. ಈಗಾಗಲೇ ಕೆಸಿಸಿ ಸೀಸನ್ 1 ಮತ್ತು 2 ಯಶಸ್ವಿಯಾಗಿದ್ದು, ನಟ ಸುದೀಪ್ ನೇತೃತ್ವದಲ್ಲಿ ಇಂದು ಕೆಸಿಸಿ ಸೀಸನ್ 3 ಆರಂಭವಾಗಿದೆ.
ಕನ್ನಡ ಚಲನಚಿತ್ರ ಕಪ್ ಹಿನ್ನೆಲೆಯಲ್ಲಿ ಬೆಳ್ಳಿ ತೆರೆ ಮೇಲೆ ಮಿಂಚುವ ತಾರೆಗಳೆಲ್ಲ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಟ್ಟುಗೂಡಿದ್ದಾರೆ. ನಮ್ಮ ತಾರೆಯಗಳ ಜೊತೆಗೆ ಇಂಟರ್ನ್ಯಾಷನಲ್ ತಾರೆಯರು ಸಹ ಫೀಲ್ಡ್ಗಿಳಿದ್ದಿದ್ದು ಮತ್ತೊಂದು ವಿಶೇಷ. ತಾರೆಯರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಕೂಡ ಉಪಸ್ಥಿತರಾಗಿದ್ದರು.
ಎರಡು ಕೆಸಿಸಿ ಟೂರ್ನಿಮೆಂಟ್ ಯಶಸ್ವಿಯಾಗಿ ಆಯೋಜನೆ ಮಾಡಿದ್ದ ಕಿಚ್ಚ ಈ ಬಾರಿ ಇನಷ್ಟು ರಂಗು ರಂಗಾಗಿ ಕನ್ನಡ ಚಲನಚಿತ್ರ ಕಪ್ ಆಯೋಜನೆ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಇಷ್ಟು ದಿನ ಅಭ್ಯಾಸ ಮಾಡಿ ಇಂದು ಗ್ರೌಂಡ್ಗೆ ಇಳಿದ್ದಾರೆ.
ಸಿಎಂ ಬೊಮ್ಮಾಯಿ ಕಾರ್ಯಕ್ರಮಕ್ಕೆ ಧ್ವಜಾರೋಹಣ ಮಾಡೋ ಮೂಲಕ ಚಾಲನೆ ನೀಡಿದರು. ಆರೋಗ್ಯ ಸಚಿವ ಡಾ.ಸುಧಾಕರ್ ಇದ್ದರು. 80 ಅಡಿ ಉದ್ದ 140 ಅಡಿ ಅಗಲವಿರೋ ಕನ್ನಡ ಧ್ವಜವನ್ನು ತಾರೆಯರು ಹಿಡಿದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.