ಕರ್ನಾಟಕ

karnataka

ETV Bharat / entertainment

ಪದ್ಮಾವತಿ ಬಳಿಕ ಭೀಮ; ದುನಿಯಾ ವಿಜಯ್​ ಸಿನಿಮಾ ಹಾಡಿಗೆ ಕವಿರಾಜ್ ಸಾಹಿತ್ಯ - duniya vijay bheema movie

ದುನಿಯಾ ವಿಜಯ್​ ಅವರ ಭೀಮ ಸಿನಿಮಾ ಸಾಂಗ್​ಗೆ ಕವಿರಾಜ್ ಸಾಹಿತ್ಯ ರಚಿಸಿದ್ದಾರೆ.

Kaviraj joins Bheema movie team
ದುನಿಯಾ ವಿಜಯ್​ ಸಿನಿಮಾ ಸಾಂಗ್​ಗೆ ಕವಿರಾಜ್ ಸಾಹಿತ್ಯ

By

Published : Aug 11, 2023, 4:04 PM IST

ಊರಿಗೊಬ್ಳೆ ಪದ್ಮಾವತಿ ಹಾಡನ್ನು ಯಾರು ತಾನೆ ಕೇಳಿಲ್ಲ ಹೇಳಿ?. ಸ್ಯಾಂಡಲ್‌ವುಡ್ ಕ್ವೀನ್, ಮೋಹಕತಾರೆ ರಮ್ಯಾ ಪದ್ಮಾವತಿಯಾಗಿ ಈ‌ ಹಾಡಿನಲ್ಲಿ ಮೈ ಬಳುಕಿಸಿದ್ದರು. ರಮ್ಯಾರಿಗೆ ದುನಿಯಾ ವಿಜಯ್ ಸಾಥ್ ನೀಡಿದ್ದರು. 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್' ಸಿನಿಮಾದ ಹಾಡು ಇದಾಗಿದ್ದು, ಇಬ್ಬರೂ ಸಖತ್ ಆಗಿ ಹೆಜ್ಜೆ ಹಾಕಿದ್ದರು. ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದ್ದ ಸುಂದರ ಹಾಡಿಗೆ ಸಾಹಿತ್ಯ ರಚಿಸಿದ್ದು ಖ್ಯಾತ ಚಿತ್ರಸಾಹಿತಿ ಕವಿರಾಜ್.

ಹಾಡಿನ ಬಳಿಕ ರಮ್ಯಾ ಸ್ಯಾಂಡಲ್‌ವುಡ್ ಪದ್ಮಾವತಿ ಅಂತಾನೇ ಖ್ಯಾತಿ ಗಳಿಸಿದರು. ಅಷ್ಟರಮಟ್ಟಿಗೆ ಹಾಡು ಹಿಟ್ ಆಗಿತ್ತು. ಸೂಪರ್ ಹಿಟ್ ಹಾಡಿನ ಬಗ್ಗೆ ಈಗ್ಯಾಕೆ ಅಂತೀರಾ? ಹೌದು, ಕವಿರಾಜ್ ಮತ್ತು ದುನಿಯಾ ವಿಜಯ್​​ ಕಾಂಬಿನೇಷ್‌ನಲ್ಲಿ ಮತ್ತೊಂದು ವಿಶೇಷ ಹಾಡು ಮೂಡಿಬರುತ್ತಿದೆ. 'ಪದ್ಮಾವತಿ' ಹಾಡಿನ ನಂತರ ಹೊಸ ಬ್ಲಾಕ್ ಬಸ್ಟರ್ ಹಿಟ್‌ಗೆ ಸಜ್ಜಾಗಿದೆ ಈ ಜೋಡಿ.

ದುನಿಯಾ ವಿಜಯ್ ಸದ್ಯ 'ಭೀಮ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ವಿಜಯ್ ಸಿನಿಮಾ ರಿಲೀಸ್ ತಯಾರಿಯಲ್ಲಿದ್ದಾರೆ. 'ಭೀಮ' ಸಿನಿಮಾಗಾಗಿ ಕವಿರಾಜ್ ವಿಶೇಷ ಹಾಡೊಂದನ್ನು ಬರೆದಿದ್ದಾರೆ. ಅಂದು 'ಪದ್ಮಾವತಿ' ಅಂತಾ ಮೋಡಿ ಮಾಡಿದ್ದ ಕವಿರಾಜ್ ಇದೀಗ, 'ಬೇಡ ಬೇಡ ದೊಡ್ಡ ಪಾರ್ಟಿ...' ಎನ್ನುತ್ತಾ ಮತ್ತೆ ಗಾನಪ್ರಿಯರ ಮುಂದೆ ಬರಲು ರೆಡಿಯಾಗಿದ್ದಾರೆ.

ದುನಿಯಾ ವಿಜಯ್​ ಸಿನಿಮಾ ಸಾಂಗ್​ಗೆ ಕವಿರಾಜ್ ಸಾಹಿತ್ಯ

ಬೇಡ ಬೇಡ ದೊಡ್ಡ ಪಾರ್ಟಿ ಕುಡಿಸು ನೀ ಸಾಕು ಬೈ ಟೂ ಟೀ... ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಭೀಮ ಸಿನಿಮಾದ ಹೈ ವೋಲ್ಟೇಜ್ ಸಾಂಗ್​. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿನ ಮೇಲೆ ಸಿನಿಪ್ರಿಯರ ನಿರೀಕ್ಷೆ ಹೆಚ್ಚಾಗಿದ್ದು, ತೆರೆಮೇಲೆ ಸಿನಿಮಾ, ಹಾಡನ್ನು ಆನಂದಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ:ಗರ್ಭಪಾತದ ಬಗ್ಗೆ ಬಹಿರಂಗಪಡಿಸಿದ ರಾಣಿ ಮುಖರ್ಜಿ.. 5 ತಿಂಗಳು ಗರ್ಭದಲ್ಲಿದ್ದ ಶಿಶು ಇನ್ನಿಲ್ಲವೆಂದು ತಿಳಿದ ನಟಿಯ ಪರಿಸ್ಥಿತಿ ಹೇಗಿತ್ತು?

ಬೇಡ ಬೇಡವೆಂದರೂ ಚೇರ್ ಮೇಲೆ ನನ್ನನ್ನು ಕೂರಿಸಿ, ತಾವು ಹಿಂದೆ ನಿಂತು ಒಬ್ಬ ತಂತ್ರಜ್ಞರಿಗೆ ಗೌರವ ನೀಡಿದ್ದು ಹೃದಯವಂತನ ಲಕ್ಷಣ. ದುನಿಯಾ ವಿಜಯ್ ತಂತ್ರಜ್ಞರನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರಿಗೆ ಗೌರವ ಸಲ್ಲಿಸುತ್ತಾರೆ. ಹಾಗಾಗಿಯೇ ವಿಜಯ್ ಎಂದರೆ ತಂತ್ರಜ್ಞರಿಗೂ ಇಷ್ಟ ಎಂದು ಚಿತ್ರಸಾಹಿತಿ ಕವಿರಾಜ್ ಹೇಳಿದ್ದಾರೆ. ಕವಿರಾಜ್ ಚೇರ್ ಮೇಲೆ ಕುಳಿತಿದ್ದು, ಸುತ್ತ ಭೀಮ ಟೀಂ ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದು, 'ಭೀಮನ ಟೀಂ ಕಡೆಯಿಂದ ಚರಣ್ ರಾಜ್ ಸಂಗೀತದಲ್ಲಿ ಒಂದು ಖಡಕ್ ಸಾಂಗ್ ಲೋಡಿಂಗ್...' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಸೋಷಿಯಲ್​ ಮೀಡಿಯಾದಲ್ಲಿ ಪ್ರೇಮಪಕ್ಷಿಗಳ ಸದ್ದು: ಗಮನ ಸೆಳೆದ ಪರಿಣಿತಿ ರಾಘವ್​ ಜೋಡಿ

'ಭೀಮ' ಸಿನಿಮಾದ ಬಗ್ಗೆ ಹೇಳುವುದಾದರೆ, ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ರೆ, ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಕಷ್ಣ ಸಾರ್ಥಕ್ ಬಂಡವಾಳ ಹೂಡಿದ್ದಾರೆ. ಸಲಗ ಬಳಿಕ ವಿಜಿ ಆ್ಯಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ. ಸಲಗ ಸಕ್ಸಸ್‌ನಲ್ಲಿರುವ ವಿಜಿ ಭೀಮ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ABOUT THE AUTHOR

...view details