ಕರ್ನಾಟಕ

karnataka

ETV Bharat / entertainment

Darling Krishna: 'ಕೌಸಲ್ಯಾ ಸುಪ್ರಜಾ ರಾಮ' ಬಿಡುಗಡೆಗೆ ಮುಹೂರ್ತ ಫಿಕ್ಸ್; ಹೈಪ್​, ಬಿಲ್ಡಪ್​ ಬೇಡ ಅಂತಿದ್ದಾರೆ ನಿರ್ದೇಶಕರು! - ಈಟಿವಿ ಭಾರತ ಕನ್ನಡ

'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾದ ಬಿಡುಗಡೆ ದಿನಾಂಕ ನಾಳೆ ಅನೌನ್ಸ್​ ಆಗಲಿದೆ. ಇದಕ್ಕಾಗಿ ಚಿತ್ರತಂಡ, ರಿಲೀಸ್​ ಡೇಟ್​ ಪ್ರಿ-ಅನೌನ್ಸ್​ಮೆಂಟ್ ವಿಡಿಯೋ ಹಂಚಿಕೊಂಡಿದೆ.

kausalya supraja rama
ಕೌಸಲ್ಯಾ ಸುಪ್ರಜಾ ರಾಮ

By

Published : Jun 30, 2023, 4:19 PM IST

'ಲವ್​ ಮಾಕ್ಟೇಲ್​' ಖ್ಯಾತಿಯ ಡಾರ್ಲಿಂಗ್​ ಕೃಷ್ಣ ನಟನೆಯ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಮೊಗ್ಗಿನ ಮನಸು, ಬಚ್ಚನ್​, ಮುಂಗಾರು ಮಳೆ 2 ಮುಂತಾದ ಹಿಟ್​ ಚಿತ್ರಗಳನ್ನು ನೀಡಿರುವ ಸ್ಯಾಂಡಲ್​ವುಡ್​ ಸ್ವ-ಮೇಕ್​ ನಿರ್ದೇಶಕ ಶಶಾಂಕ್​ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಸಾಕಷ್ಟು ಪೋಸ್ಟರ್​ಗಳು ರಿಲೀಸ್​ ಆಗಿದ್ದು, ಸಿನಿಮಾದ ಬಿಡುಗಡೆಗೂ ದಿನಾಂಕ ಗೊತ್ತು ಮಾಡಲಾಗಿದೆ. ನಿಮ್ಮ ಕ್ಯಾಲೆಂಡರ್​ನಲ್ಲಿ ಯಾವ ದಿನಾಂಕವನ್ನು ಗೊತ್ತು ಮಾಡಬೇಕು ಎಂಬುದನ್ನು ನಾಳೆ ಚಿತ್ರತಂಡ ಅಧಿಕೃತವಾಗಿ ತಿಳಿಸಲಿದೆ.

ಇದರ ಸಲುವಾಗಿಯೇ ಇಂದು 'ಕೌಸಲ್ಯಾ ಸುಪ್ರಜಾ ರಾಮ' ಟೀಮ್​, ರಿಲೀಸ್​ ಡೇಟ್​ ಪ್ರಿ-ಅನೌನ್ಸ್​ಮೆಂಟ್​ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ನಿರ್ದೇಶಕ ಶಶಾಂಕ್​, ಡಾರ್ಲಿಂಗ್‌ ಕೃಷ್ಣ ಮತ್ತು ಮಿಲನಾ ನಾಗರಾಜ್​ ಮಾತನಾಡುತ್ತಿರುವ ದೃಶ್ಯ ಇದಾಗಿದೆ. ಸಿನಿಮಾ ಬಿಡುಗಡೆಯ ದಿನಾಂಕವನ್ನು ಶನಿವಾರ ಅನೌನ್ಸ್​ ಮಾಡಲಾಗುವುದು ಎಂದು ತಿಳಿಸುವುದಕ್ಕೆ ಈ ವಿಡಿಯೋ ಮಾಡಲಾಗಿದೆ. ಸದ್ಯ ಟ್ರೆಂಡಿಂಗ್​ ಆಗಿದೆ.

ವಿಡಿಯೋದಲ್ಲೇನಿದೆ?:ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್​ ಟೆನ್ನಿಸ್​ ಆಡ್ತಾ ಇರ್ತಾರೆ. ಈ ವೇಳೆ ಅಲ್ಲಿಗೆ ನಿರ್ದೇಶಕ ಶಶಾಂಕ್​ ಎಂಟ್ರಿ ಕೊಡ್ತಾರೆ. ಒಂದು ಗುಡ್​ ನ್ಯೂಸ್​ ಇದೆ ಅಂತಾರೆ. 'ಏನ್​ ಸರ್​, ಇನ್ನೊಂದು ಮದುವೆ ಆಗ್ತಿದ್ದೀರಾ?' ಅಂತ ಕೃಷ್ಣ ತಮಾಷೆಯಾಗಿ ಪ್ರಶ್ನೆ ಮಾಡ್ತಾರೆ. 'ಆ ಯೋಗ ನಮಿಗೆಲ್ಲಿದೆಯಪ್ಪಾ' ಅಂತ ಡೈರೆಕ್ಟರ್​ ನಗ್ತಾ ಹೇಳ್ತಾರೆ. ಅಷ್ಟರಲ್ಲಿ ಕೃಷ್ಣ, 'ಮತ್ತೇನು, ರಿಲೀಸ್​ ಡೇಟಾ? ಯಾವಾಗ' ಅಂತಾ ಪ್ರಶ್ನಿಸ್ತಾರೆ. ಕೃಷ್ಣನ ಕಿವಿಯಲ್ಲಿ ರಿಲೀಸ್​ ಡೇಟ್​ ಅನ್ನು ಗುಟ್ಟಾಗಿ ಹೇಳ್ತಾರೆ. 'ಏನ್​ ಸರ್,​ ಕರ್ನಾಟಕದ ಜನತೆಗೂ ಹಿಂಗೆ ಕಿವಿಯಲ್ಲಿ ಹೇಳ್ತಿರಾ?' ಅಂತ ಕೃಷ್ಣ ಪ್ರಶ್ನಿಸ್ತಾರೆ.

'ಇಲ್ಲಪ್ಪಾ, ನಾಳೆ ಅನೌನ್ಸ್​ಮೆಂಟ್​ಗೆ ಒಂದೊಳ್ಳೆ ಮೋಷನ್​ ಪೋಸ್ಟರ್​ ಮಾಡ್ಸಿದ್ದೀನಿ' ಅಂತ ಶಶಾಂಕ್​ ಹೇಳ್ತಾರೆ. ಅಷ್ಟರಲ್ಲಿ ಮಿಲನಾ ಎಂಟ್ರಿ ಕೊಟ್ಟು, 'ಏನ್​ ಸರ್​, ರಿಲೀಸ್​ ಡೇಟ್​ ಇಷ್ಟು ಸಿಂಪಲ್ಲಾಗಿ ಅನೌನ್ಸ್​ ಮಾಡ್ತಿದ್ದೀರಾ? ಹೈಪು, ಬಿಲ್ಡಪ್ಪು ಏನೂ ಬೇಡ್ವಾ ಸಿನಿಮಾಗೆ' ಅಂತ ಕೇಳ್ತಾರೆ. 'ಮಿಲನಾ, ಸರಳತೆ ಮತ್ತು ಪ್ರಾಮಾಣಿಕತೆ ಯಾವತ್ತಿಗೂ ಕೆಲಸ ಮಾಡುತ್ತೆ. ಈ ಬಿಲ್ಡಪ್ಪು, ಹೈಪು ಎಲ್ಲನೂ ಸಿನಿಮಾದ ಒಳಗಡೆ ಇರ್ಬೇಕಮ್ಮ' ಅಂತಾರೆ.

'ಸರ್​, ಇದೆಲ್ಲಾ ಅಣ್ಣೋರ ಕಾಲದಲ್ಲಿ ಆಯ್ತು. ಇವತ್ತೇನಿದ್ರೂ, ನಮ್ಮ ಪೀಪಿ ನಾವೇ ಊದ್ಬೇಕು. ನಮ್​ ಹಾರ ನಾವೇ ಹಾಕೋಬೇಕು. ನಮ್​ ಕೇಕ್​ ನಾವೇ ಕಟ್​ ಮಾಡ್ಬೇಕು' ಅಂತ ಕೃಷ್ಣ ಹೇಳ್ತಾರೆ. ಅಷ್ಟರಲ್ಲಿ ಶಶಾಂಕ್​, 'ಲವ್​ ಮಾಕ್ಟೇಲ್​ 2ಗೆ ಯಾವ ಪೀಪಿ ಊದಿದೆ, ಯಾವ ಕೇಕ್​ ಕಟ್​ ಮಾಡ್ದೇಪ್ಪ? ಕಂಟೆಂಟ್​ ಚೆನ್ನಾಗಿದೆ ಅಂತಾನೇ ಜನ ಬಂದು ನೋಡಿ ಬ್ಲಾಕ್​ ಬಸ್ಟರ್​ ಮಾಡಿಲ್ವ' ಅಂತ ತಿರುಗೇಟು ನೀಡ್ತಾರೆ. ಅದಕ್ಕೆ ಕೃಷ್ಣ 'ಎಲ್ಲಾ ಹಂಗೇ ವರ್ಕ್​ ಆಗಲ್ಲ ಸರ್​' ಅಂತಾರೆ. ಅದೇ ಮೂಮೆಂಟ್​ಗೆ ಮಿಲನಾ ಹೇಳೋ ಮಾತು ಸಖತ್​ ಕಾಮಿಡಿಯಾಗಿದೆ.

'ಕೃಷ್ಣ, ನಿನ್​ ತಲೇಲಿ ಉದುರಿರೋದು ಎರಡೇ ಕೂದಲು. ಅವರ ತಲೇಲಿ ನೋಡಿ, ಅರ್ಧ ಕೂದಲೇ ಇಲ್ಲ. ಸುಮ್ನೆ ಅವರು ಹೇಳಿದಂಗೆ ಕೇಳೋದು ಒಳ್ಳೇದು' ಅಂತಾರೆ. ಆಗ ಕೃಷ್ಣ ಅವ್ರು ಶಶಾಂಕ್​ಗೆ, 'ಸರಿ ಸರ್​, ನಾಳೆ ರಿಲೀಸ್​ ಡೇಟ್​ ಅನೌನ್ಸ್​ ಮಾಡ್ಕೊಳ್ಳಿ. ಸಿನಿಮಾ ಕಂಟೆಂಟ್​ ತುಂಬಾ ಚೆನ್ನಾಗಿದೆಯಲ್ವಾ. ಹಾಗಿದ್ರೆ ಪ್ರೊಮೋಷನ್​ ಬೇಕು ಅಂತೇನಿಲ್ಲ. ಹಂಗೇ ರಿಲೀಸ್​ ಮಾಡ್ಬಿಡಿ. ನಾನು ಆಟ ಆಡ್ತಾ ಇರ್ತೀನಿ' ಅಂತಾರೆ. ಅಷ್ಟರಲ್ಲಿ ಶಶಾಂಕ್​ಗೆ ಪ್ಯಾಥೋ ಮ್ಯೂಸಿಕ್​ ಪ್ಲೇ ಆಗುತ್ತೆ. ಅಲ್ಲಿಗೆ ನಾಳೆ ರಿಲೀಸ್​ ಡೇಟ್​ ಅನೌನ್ಸ್​ ಮಾಡ್ತೀವಿ ಎಂದ ಬರಹದ ಮೂಲಕ ವಿಡಿಯೋ ಕೊನೆಗೊಳ್ಳುತ್ತದೆ.​ ಸದ್ಯ ಈ ಸಂಭಾಷಣೆ ಸಖತ್​ ವೈರಲ್​ ಆಗುತ್ತಿದೆ.

ಇದನ್ನೂ ಓದಿ:'ಕೌಸಲ್ಯಾ ಸುಪ್ರಜಾ ರಾಮ'ನಾದ ಡಾರ್ಲಿಂಗ್ ಕೃಷ್ಣ.. ಮೊಗ್ಗಿನ ಮೊನಸು ಖ್ಯಾತಿಯ ಶಶಾಂಕ್ ನಿರ್ದೇಶನ

ABOUT THE AUTHOR

...view details