ಕರ್ನಾಟಕ

karnataka

ETV Bharat / entertainment

ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ವಿಕ್ಯಾಟ್ ತಯಾರಿ - ಕತ್ರಿನಾ ವಿಕ್ಕಿ ಲೇಟೆಸ್ಟ್ ನ್ಯೂಸ್

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ನಾಳೆ ವಿವಾಹ ವಾರ್ಷಿಕೋತ್ಸವ ಆಚರಿಸಲಿದ್ದು, ದಂಪತಿ ಗಿರಿಧಾಮವೊಂದಕ್ಕೆ (hill station) ತಲುಪಿದ್ದಾರೆ.

Katrina kaif and Vicky Kaushal Wedding Anniversary
ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ವಿವಾಹ ವಾರ್ಷಿಕೋತ್ಸವ

By

Published : Dec 8, 2022, 2:02 PM IST

ಬಾಲಿವುಡ್​ ಸ್ಟಾರ್​ ಜೋಡಿಯಾದ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಕಳೆದ 2021ರ ಡಿಸೆಂಬರ್​ 9ರಂದು ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಪೋರ್ಟ್​ ಬವೇರಾದಲ್ಲಿ ಅದ್ಧೂರಿಯಾಗಿ ಹಮ್ಮಿಕೊಂಡಿದ್ದ ಮದುವೆ ಸಮಾರಂಭದಲ್ಲಿ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಕತ್ರಿನಾಗೆ, ವಿಕ್ಕಿ ಕೌಶಲ್ ಮಾಂಗಲ್ಯಧಾರಣೆ ಮಾಡುವುದರೊಂದಿಗೆ ಸಪ್ತಪದಿ ತುಳಿದಿದ್ದರು. ನಾಳೆ ವಿವಾಹ ವಾರ್ಷಿಕೋತ್ಸವ ಆಚರಿಸಲಿದ್ದು, ದಂಪತಿ ಗಿರಿಧಾಮವೊಂದಕ್ಕೆ (hill station) ತಲುಪಿದ್ದಾರೆ.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಸಂಪೂರ್ಣ ತಯಾರಿ ನಡೆಸಿದ್ದಾರೆ. ಕತ್ರಿನಾ ಕೈಫ್ ಸಾಮಾಜಿಕ ಜಾಲತಾಣದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ವಾರ್ಷಿಕೋತ್ಸವದ ಸಿದ್ಧತೆ ಕುರಿತು ಮಾಹಿತಿಯನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಕ್ಯಾಟ್ ವಿವಾಹದ ಸುಂದರ ಕ್ಷಣ

ಕತ್ರಿನಾ ಕೈಫ್ ತಮ್ಮ ಕೆಲವು ಸುಂದರವಾದ ಚಿತ್ರಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಕತ್ರಿನಾ ಮುಖದಲ್ಲಿ ಮೊದಲ ವಿವಾಹ ವಾರ್ಷಿಕೋತ್ಸವದ ಸಂತಸ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಚಿತ್ರಗಳಿಗೆ 'ಪರ್ವತಗಳಲ್ಲಿ' ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋವನ್ನು ತಮ್ಮ ಗಂಡ ವಿಕ್ಕಿ ಸೆರೆ ಹಿಡಿದಿರೋದು ಎಂದು ಹೇಳಿಕೊಂಡಿದ್ದಾರೆ.

ಕತ್ರಿನಾ ಕೈಫ್

ಇದನ್ನೂ ಓದಿ:ಆ ವಿಡಿಯೋ ಶೇರ್ ಮಾಡದಂತೆ ಕತ್ರಿನಾ ಮನವಿ.. ಪತ್ನಿ ಮಾತು ಮೀರಿ ದೃಶ್ಯ ಹಂಚಿಕೊಂಡ ವಿಕ್ಕಿ!

ABOUT THE AUTHOR

...view details