ಕರ್ನಾಟಕ

karnataka

ETV Bharat / entertainment

ನವರಾತ್ರಿ ಸಂಭ್ರಮಕ್ಕೆ ತಾರಾ ಮೆರಗು; ರಶ್ಮಿಕಾ, ಕತ್ರಿನಾ, ಜಾಹ್ನವಿ ಸೇರಿದಂತೆ ಹಲವರು ಭಾಗಿ - ತ್ರಿಶೂರ್​ನಲ್ಲಿ ಅದ್ದೂರಿ ನವರಾತ್ರಿ ಸಂಭ್ರಮ

ತ್ರಿಶೂರ್​ನಲ್ಲಿ ಆಯೋಜಿಸಲಾಗಿದ್ದ ನವರಾತ್ರಿ ಸಂಭ್ರಮದಲ್ಲಿ ಬಾಲಿವುಡ್​ ತಾರೆಯರು ಆಗಮಿಸಿದ್ದು, ಹಬ್ಬದ ಮೆರುಗನ್ನು ಮತ್ತಷ್ಟ ಹೆಚ್ಚಿಸಿದರು.

katrina-kaifs-impeccable-demeanour-at-navratri-event-leaves-fans-in-awe-watch
katrina-kaifs-impeccable-demeanour-at-navratri-event-leaves-fans-in-awe-watch

By ETV Bharat Karnataka Team

Published : Oct 23, 2023, 1:31 PM IST

ಬೆಂಗಳೂರು: ಸುಪ್ರಸಿದ್ದ ಆಭರಣ ಬ್ರಾಂಡ್​ ಕೇರಳದ ತ್ರಿಶೂರ್​ನಲ್ಲಿ ಅದ್ದೂರಿ ನವರಾತ್ರಿ ಸಂಭ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ನಟ ನಾಗರ್ಜುನ ಮತ್ತು ಚೈತನ್ಯ ಅಕ್ಕಿನೇನಿ, ಕತ್ರಿನಾ ಕೈಫ್​, ಅಜಯ್​ ದೇವಗನ್​, ಜಾಹ್ನವಿ ಕಪೂರ್​, ಕೃತಿ ಸನೋನ್​, ರಶ್ಮಿಕಾ ಮಂದಣ್ಣ, ಶಿಲ್ಪಾ ಶೆಟ್ಟಿ, ವಾಮಿಗಾ ಗಬ್ಬಿ ಮತ್ತಿತ್ತರು ಭಾಗಿಯಾಗಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಭಾಗಿಯಾದ ತಾರೆಯರು ಸಾಂಪ್ರದಾಯಿಕ ಧಿರಿಸಿನಲ್ಲಿ ಮಿಂಚಿರುವುದು ವಿಶೇಷವಾಗಿದೆ.

ಕಾರ್ಯಕ್ರಮದಲ್ಲಿ ನಟಿ ಕತ್ರಿನಾ ಕೈಫ್​​ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದರು. ಈ ವೇಳೆ, ಅವರ ಹಣೆಯಲ್ಲಿದ್ದ ಬಿಂದಿ ಎಲ್ಲರ ಕಣ್ಣು ಸೆಳೆಯಿತು. ಬಂದಿದ್ದ ಅತಿಥಿಗಳ ಜೊತೆಗೆ ಸ್ನೇಹ ಮಾತುಕತೆ ನಡೆಸಿದ ಅವರು, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ಯಾಪರಜಿಗಳು ನಟಿ ಕತ್ರಿನಾ ಕೈಫ್​​ ಅವರ ಈ ಕಾರ್ಯಕ್ರಮದ ವಿಡಿಯೋವನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅವರನ್ನು ಕಂಡ ಅಭಿಮಾನಿಗಳು ಶ್ಲಾಘಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕಮೆಂಟ್​ ಮಾಡಿರುವ ಅನೇಕ ಮಂದಿ, 'ಆಕೆಯ ಸೌಂದರ್ಯ ಮಾತಿಗೆ ಮೀರಿದ್ದು' ಎಂದರೆ, ಮತ್ತೊಬ್ಬರು, 'ನಿಜ ಸೌಂದರ್ಯವತಿ' ಎಂದಿದ್ದಾರೆ. ಮತ್ತೊಬ್ಬರು 'ಆಕೆ ಎಲ್ಲರನ್ನೂ ಹಿಂದಿಕ್ಕಿದ್ದಾರೆ' ಎಂದಿದ್ದು, 'ಸೌಂದರ್ಯ ಮತ್ತು ಸೊಬಗಿನ ರಾಣಿ' ಎಂದು ಉದ್ಘರಿಸಿದ್ದಾರೆ.

ನಾಗರ್ಜುನ ಮತ್ತು ಅವರ ಮಗ ಚೈತನ್ಯ ಅಕ್ಕಿನೇನಿ ಕೂಡ ಈ ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಈ ವೇಳೆ ನಾಗಾರ್ಜುನ ಹೂವಿನ ಚಿತ್ತಾರದ ಕುರ್ತಾ ಪೈಜಾಮದಲ್ಲಿ ಮಿಂಚಿದರೆ, ಚೈತನ್ಯ ಬಿಳಿ ಬಣ್ಣದ ಸರಳ ಪೈಜಾಮದಲ್ಲಿ ಕಂಗೊಳಿಸಿದರು.

ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್​​, ಸೌಂದರ್ಯಕ್ಕೆ ಮತ್ತೊಂದು ರೂಪದಂತೆ ಕಂಡರು. ಗುಲಾಬಿ ಬಣ್ಣದ ಸೀರೆಯಲ್ಲಿ ಅವರು ಮಿಂಚಿದರು. ನಟಿ ಶಿಲ್ಪ ಶೆಟ್ಟಿ ಕೆಂಪು ಬಣ್ಣದ ಲೆಹಂಗಾದಲ್ಲಿ ಕಂಗೊಳಿಸಿದರೆ, ನಟಿ ರಶ್ಮಿಕಾ ಮಂದಣ್ಣ ಹಳದಿ ಬಣ್ಣದ ಅನಾರ್ಕಲಿ ಧಿರಿಸಿನಲ್ಲಿ ಕಂಡರು. ಜಾಹ್ನವಿ ಕಪೂರ್​ ಲ್ಯಾವೆಂಡರ್​ ಬಣ್ಣದ ಟಿಶ್ಯೂ ಸಿಲ್ಕ್​​ ಸೀರೆಯಲ್ಲಿ ಗಮನಸೆಳೆದರು.

ನಟಿ ಸೋನಾಕ್ಷಿ ಸಿನ್ಹಾ ಅವರ ಗೆಳೆಯ ಎನ್ನಲಾದ ಜಾಹೀರ್​​ ಇಕ್ಬಾಲ್​ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿದರು. ಈ ವೇಳೆ, ಅವರು ಕೆಂಪು ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದು, ಟೆಂಪಲ್​ ಆಭರಣ ಗಮನ ಸೆಳೆಯಿತು. ಅಜಯ್​ ದೇವಗನ್​ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾದರು. ಅವರು ಲ್ಯಾವೆಂಡರ್​ ಬಣ್ಣದ ಕುರ್ತಾ ಜೊತೆಗೆ ಕಪ್ಪು ಬಣ್ಣದ ಪೈಜಾಮ ಧರಿಸಿದರು. ಇನ್ನು ನಟಿ ಕಾಜೋಲ್​ ಮುಂಬೈನ ದುರ್ಗಾ ಪೂಜೆಯಲ್ಲಿ ಭಾಗಿಯಾದರು.

ಇದನ್ನೂ ಓದಿ: ನ್ಯೂಜಿಲೆಂಡ್​ ವಿರುದ್ದ ಕೊಹ್ಲಿ ಅಬ್ಬರ: ಪತಿಯ ಆಟಕ್ಕೆ ಮನಸೋತ ಪತ್ನಿ ಅನುಷ್ಕಾ ಇನ್​ಸ್ಟಾದಲ್ಲಿ ಮೆಚ್ಚುಗೆ

ABOUT THE AUTHOR

...view details