2023ರಲ್ಲಿ ಸಾಲು ಸಾಲಾಗಿ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿವೆ. 2023ರ ಹಲವು ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವೀಸ್ ಈಗಾಗಲೇ ತೆರೆಕಂಡಿದ್ದು, ಕೆಲ ಚಿತ್ರಗಳು ಬಿಡುಗಡೆ ಹೊಸ್ತಿಲಲ್ಲಿದೆ. ಆ ಪೈಕಿ ಮೆರಿ ಕ್ರಿಸ್ಮಸ್, ಯೋಧ ಸಿನಿಮಾಗಳೂ ಸೇರಿವೆ.
ಮೆರಿ ಕ್ರಿಸ್ಮಸ್ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ: ಬಾಲಿವುಡ್ ಬಹುಬೇಡಿಕೆ ನಟಿ ಕತ್ರಿನಾ ಕೈಫ್ ಮತ್ತು ದಕ್ಷಿಣ ಚಿತ್ರರಂಗದ ಸ್ಟಾರ್ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಮೆರಿ ಕ್ರಿಸ್ಮಸ್ ಸಿನಿಮಾ ಬಿಡುಗಡೆ ದಿನಾಂಕದಲ್ಲಿ ಬದಲಾವಣೆಗಳಾಗಿವೆ. ಶ್ರೀರಾಮ್ ರಾಘವನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಡಿಸೆಂಬರ್ 15 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಬಾಲಿವುಡ್ ಬಹುಬೇಡಿಕೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಯೋಧ ಚಿತ್ರ ಕೂಡ ಅದೇ ಸಂದರ್ಭ ಬಿಡುಗಡೆ ಆಗಲಿರುವ ಹಿನ್ನೆಲೆ ಬಾಕ್ಸ್ ಆಫೀಸ್ ಫೈಟ್ ತಪ್ಪಿಸಲು ಮೆರಿ ಕ್ರಿಸ್ಮಸ್ ಬಿಡುಗಡೆ ದಿನಾಂಕ ಬದಲಾಯಿಸಲಾಗಿದೆ.
ತರಣ್ ಆದರ್ಶ್ ಟ್ವೀಟ್: ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಯೋಧ ಬಿಡುಗಡೆಗೂ ಮುನ್ನ ಅಂದರೆ ಡಿಸೆಂಬರ್ 8ಕ್ಕೆ ಮೇರಿ ಕ್ರಿಸ್ಮಸ್ ತೆರೆಕಾಣಲಿದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ಮೇರಿ ಕ್ರಿಸ್ಮಸ್ ಮತ್ತು ಯೋಧ ಬಿಡುಗಡೆ ದಿನಾಂಕದ ಕುರಿತು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 8ಕ್ಕೆ ಮೆರಿ ಕ್ರಿಸ್ಮಸ್ ತೆರೆಕಾಣಲಿದೆ ಎಂದು ಟ್ವೀಟ್ ಮಾಡಿದ್ದಾರೆ.