ಹೈದರಾಬಾದ್: ಬಾಲಿವುಡ್ನ ಬಾರ್ಬಿ ಡಾಲ್ ಕತ್ರಿನಾ ಕೈಫ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಖುಷಿ ನೀಡುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಕಳೆದ ವರ್ಷವಷ್ಟೇ ನಟ ವಿಕ್ಕಿ ಕೌಶಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅವರು ಸದ್ಯ ಅಭಿಮಾನಿಗಳ ಮನಸ್ಸು ಸೆಳೆಯುವ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೊಂದು ಅಚ್ಚರಿಯ ಶೀರ್ಷಿಕೆ ನೀಡಿದ್ದಾರೆ. ಹಾಗಾಗಿ ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕೌತುಕ ತರಿಸಿದೆ.
ವಿಕ್ಕಿ ಕೌಶಲ್ ಜೊತೆ ಕತ್ರಿನಾ ಕೈಫ್ ಗುರುವಾರ (ಸೆಪ್ಟೆಂಬರ್ 15) ನಟಿಯ ಇನ್‌ಸ್ಟಾಗ್ರಾಮ್ ಖಾತೆಯಿಂದ ಈ ವಿಡಿಯೋ ಹೊರಬಿದ್ದಿದೆ. ಕೆಂಪು ಬಣ್ಣದ ಕಾರ್ಡುರಾಯ್ ಡ್ರೆಸ್ ಧರಿಸಿರುವ ಕತ್ರಿನಾ, ಬೆರಗುಗೊಳಿಸುವ ನೋಟ ಬೀರುವ ಮೂಲಕ ಅಭಿಮಾನಿಗಳ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ವಿಡಿಯೋದಲ್ಲಿ ಕೌತುಕ ಮೂಡಿಸುವ ಹಲವು ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ವಿಕ್ಕಿ ಕೌಶಲ್ ಜೊತೆ ಕತ್ರಿನಾ ಕೈಫ್ ಅವರ ಮಾತು ಆಲಿಸಿದ ನೆಟಿಜನ್ಗಳು ತಲೆಗೆ ಹುಳು ಬಿಟ್ಟಿಕೊಂಡಿದ್ದಾರೆ. ವಿಡಿಯೋದಲ್ಲಿ ಗಮನ ಸೆಳೆಯುವ ಕ್ಯಾಪ್ಶನ್ ನೀಡಿರುವ ಕತ್ರಿನಾ, 'ಸದ್ಯದಲ್ಲೇ ಏನೋ ವಿಶೇಷ ಬರಲಿದೆ' (Something Special Coming Soon) ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿರಬೇಕೆಂದು ಮಾತನಾಡಿಕೊಳ್ಳುತ್ತಿದ್ದಾರೆ.
ಆಗಸ್ಟ್ 18 ರಂದು ಇದೇ ರೀತಿ ಶೀರ್ಷಿಕೆಯನ್ನು ನೀಡುವ ಮೂಲಕ ಅವರು ಅಚ್ಚರಿಗೆ ಕಾರಣರಾಗಿದ್ದರು. ತಮ್ಮ ಹೊಸ ಚಿತ್ರದ ಬಗ್ಗೆ ಹೇಳಿಕೊಳ್ಳುವ ಮೂಲಕ ಅಭಿಮಾನಿಗಳು ಇಟ್ಟುಕೊಂಡಿದ್ದ ಬಯಕೆಯನ್ನು ಭಸ್ಮ ಮಾಡಿದ್ದರು. ಅದಕ್ಕೂ ಮುನ್ನ ತಮ್ಮ ವಿವಾಹವನ್ನು ತುಂಬಾ ಸಿಕ್ರೆಟ್ ಇಟ್ಟುಕೊಂಡಿದ್ದ ಅವರು ಕೆಲವು ದಿನಗಳ ಬಳಿಕ ಹೇಳಿಕೊಳ್ಳುವ ಮೂಲಕ ಹಲವರಿಗೆ ಶಾಕ್ ನೀಡಿದ್ದರು. ಅದರಂತೆ ಇದು ಕೂಡ ಇರಬಹುದೆಂದು ಕೆಲವರು ಹೇಳಿಕೊಂಡಿದ್ದಾರೆ.
ಕೆಲವರು ತಾಯಿಯಾಗುವ ಬಗ್ಗೆ ಅಚ್ಚರಿ ಹೇಳಿಕೆ ಕೊಡಬಹುದೆಂದು ಕಾಮೆಂಟ್ ಮಾಡಿದ್ದಾರೆ. ಇಲ್ಲ.. ಇಲ್ಲ.. ಗೌರಿ ಖಾನ್ ಅವರು ಹೊಸ ಪ್ರಾಜೆಕ್ಟ್ ತರಲಿದ್ದಾರೆ. ಅದಕ್ಕೋಸ್ಕರ ಈ ವಿಡಿಯೋ ಇರಬಹುದೆಂದಿದ್ದಾರೆ. ಪತಿ ವಿಕ್ಕಿ ಕೌಶಲ್ ಜೊತೆಗಿನ ಜಾಹೀರಾತೊಂದು ಬಂದಿದ್ದು ಆ ಹೊಸ ಜಾಹೀರಾತಿಗೆ ಸಂಬಂಧಿಸಿದಂತೆ ಹೇಳಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.