ಕರ್ನಾಟಕ

karnataka

ETV Bharat / entertainment

'ಟೈಗರ್​ 3' ಟ್ರೇಲರ್ ಬಿಡುಗಡೆಗೆ ದಿನಗಣನೆ: ಕತ್ರಿನಾ ಕೈಫ್​ ಪೋಸ್ಟರ್ ಅನಾವರಣಗೊಳಿಸಿದ ಸಲ್ಮಾನ್​ ಖಾನ್ - Katrina Kaif

Katrina Kaif Poster: ಬಹುನಿರೀಕ್ಷಿತ ಟೈಗರ್ 3 ಸಿನಿಮಾದಿಂದ ಕತ್ರಿನಾ ಕೈಫ್​ ಪೋಸ್ಟರ್ ರಿಲೀಸ್​ ಆಗಿದೆ.

Katrina Kaif poster from Tiger 3
ಟೈಗರ್​ 3 - ಕತ್ರಿನಾ ಕೈಫ್​ ಪೋಸ್ಟರ್

By ETV Bharat Karnataka Team

Published : Oct 10, 2023, 4:18 PM IST

ಬಾಲಿವುಡ್​ ಸೂಪರ್​ ಸ್ಟಾರ್ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ತೆರೆ ಹಂಚಿಕೊಂಡಿರುವ 'ಟೈಗರ್​ 3' ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳಲ್ಲೊಂದು. ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲಿದ್ದು, ಇದೇ ತಿಂಗಳ 16ರಂದು ಟ್ರೇಲರ್​ ಬಿಡುಗಡೆಯಾಗಲಿದೆ. 'ಟೈಗರ್ 3' ಟ್ರೇಲರ್​ ಬಿಡುಗಡೆಗೆ ಬೆರಳೆಣಿಕೆ ಸಂಖ್ಯೆಯ ದಿನಗಳು ಬಾಕಿ ಇರುವ ಈ ಹೊತ್ತಿನಲ್ಲಿ ನಾಯಕ ನಟ ಸಲ್ಮಾನ್ ಖಾನ್ ಅವರು ನಟಿ ಕತ್ರಿನಾ ಕೈಫ್ ಅವರ ಹೊಸ ಪೋಸ್ಟರ್ ಅನಾವರಣಗೊಳಿಸಿದರು. ಸಲ್ಮಾನ್ ಖಾನ್, ಕತ್ರಿನಾ ಕೈಫ್ ನಿರ್ವಹಿಸಿದ ಜೋಯಾ ಪಾತ್ರವನ್ನು ಸಿನಿಪ್ರಿಯರಿಗೆ ಪರಿಚಯಿಸಿದ್ದಾರೆ. ಇತ್ತ ನಟಿ ಕೂಡ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ.

ಜೋಯಾ ಪಾತ್ರದಲ್ಲಿ ಕತ್ರಿನಾ ಕೈಫ್​:ಇಂದು ಬೆಳಗ್ಗೆ ಟೈಗರ್ 3ರ ಹೊಸ ಪೋಸ್ಟರ್ ಅನಾವರಣಕ್ಕಾಗಿ ಸಲ್ಲು ಸೋಷಿಯಲ್​ ಮೀಡಿಯಾಗೆ ಎಂಟ್ರಿ ಕೊಟ್ಟರು. ಪೋಸ್ಟರ್‌ನಲ್ಲಿ ಕತ್ರಿನಾ ಕೈಫ್​​ ಜೋಯಾ ಆಗಿ ಕಾಣಿಸಿಕೊಂಡಿದ್ದಾರೆ. ಕತ್ರಿನಾರ ಜೋಯಾ ಪಾತ್ರ ದೊಡ್ಡ ಅಭಿಮಾನಿ ಬಳಗವನ್ನೇ ಒಳಗೊಂಡಿದೆ. ಆ್ಯಕ್ಷನ್ ಪ್ಯಾಕ್ಡ್ ಅವತಾರದಲ್ಲಿ ಕತ್ರಿನಾ ಕಾಣಿಸಿಕೊಳ್ಳಲಿದ್ದು, ಸಿನಿಮಾ ಮೇಲಿನ ಕುತೂಹಲ ಗರಿಗೆದರಿದೆ.

ಆ್ಯಕ್ಷನ್​ ಅವತಾರದಲ್ಲಿಕತ್ರಿನಾ:ಹೊಸ ಪೋಸ್ಟರ್​ನಲ್ಲಿ, ಕತ್ರಿನಾ ಕೈಫ್ ಹಗ್ಗದ ಸಹಾಯದೊಂದಿಗೆ ಜಂಪ್​ ಮಾಡಿ, ಶೂಟ್ ಮಾಡುತ್ತಿರುವುದನ್ನು ಕಾಣಬಹುದು. ಕೇಶರಾಶಿಯನ್ನು ಪೋನಿಟೇಲ್‌ ಶೈಲಿಯಲ್ಲಿ ಕಟ್ಟಿದ್ದು, ಕಂಪ್ಲೀಟ್​ ಬ್ಲ್ಯಾಕ್​ ಓಟ್​ಫಿಟ್​ನಲ್ಲಿ ಆ್ಯಕ್ಷನ್​ ಲುಕ್​ ಕೊಟ್ಟಿದ್ದಾರೆ. ನಟ, ನಟಿ ಶೇರ್ ಮಾಡಿರುವ ಈ ಹೊಸ ಪೋಸ್ಟರ್ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದ್ದು, ಸಾಮಾಜಿಕ ಜಾಲತಾಣಲ್ಲಿ ವೈರಲ್​ ಆಗುತ್ತಿದೆ.

ದೀಪಾವಳಿಗೆ ಸಿನಿಮಾ ಬಿಡುಗಡೆ:ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಪೋಸ್ಟರ್ ಶೇರ್ ಮಾಡಿರುವ​ ಸಲ್ಮಾನ್​​ ಖಾನ್​​, ''ಜೋಯಾ (ಫೈಯರ್​ ಎಮೋಜಿಯೊಂದಿಗೆ), ಅಕ್ಟೋಬರ್​ 16ರಂದು ಟೈಗರ್​ 3 ಟ್ರೇಲರ್​ ಅನಾವರಣ. ಈ ದೀಪಾವಳಿ ಸಂದರ್ಭ ಚಿತ್ರಮಂದಿರಗಳಲ್ಲಿ ಟೈಗರ್​ 3 ರಿಲೀಸ್​ ಆಗಲಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ. ಮತ್ತೊಂದೆಡೆ ಕತ್ರಿನಾ ಕೈಫ್​​ ತಮ್ಮ ಪೋಸ್ಟರ್ ಶೇರ್ ಮಾಡಿ, "ಫೈಟಿಂಗ್ ಫೈರ್ ವಿಥ್ ಫೈರ್, ಟೈಗರ್ 3 ಟ್ರೇಲರ್​​ ಅಕ್ಟೋಬರ್ 16 ರಂದು ನಿಮ್ಮೆದುರು ಬರಲಿದೆ. ದೀಪಾವಳಿಯಂದು ಚಿತ್ರಮಂದಿರಗಳಲ್ಲಿ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಟೈಗರ್ 3 ಬಿಡುಗಡೆಯಾಗುತ್ತಿದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಬೈಜು ಬಾವ್ರಾ'ದಲ್ಲಿ ನಯನತಾರಾಗೆ ಮಹತ್ವದ ಪಾತ್ರ?

ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ಅನ್ನು ಯಶ್ ರಾಜ್ ಫಿಲ್ಮ್ಸ್ ಮೂಲಕ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ವಾರ್ ಮತ್ತು ಪಠಾಣ್​​ ಬಳಿಕ ಬಿಡುಗಡೆ ಆಗುತ್ತಿರುವ ಯಶ್​ ರಾಜ್​ ಫಿಲ್ಮ್ಸ್​ ನಿರ್ಮಾಣದ ಸ್ಪೈ ಯೂನಿವರ್ಸ್‌ನಲ್ಲಿ ಐದನೇ ಚಿತ್ರ ಇದು. ಪೋಸ್ಟರ್​, ಟೀಸರ್, ಟೈಗರ್​ ಕಾ ಮೆಸೇಜ್​ ಶೀರ್ಷಿಕೆಯ ಟೀಸರ್​ ಈಗಾಗಲೇ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದು, ಅಕ್ಟೋಬರ್ 16 ರಂದು ಟ್ರೇಲರ್ ರಿಲೀಸ್ ಆಗಲಿದೆ. ನವೆಂಬರ್​ 10ರಂದು ಮೂರು ಭಾಷೆಗಳಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ:ಮಾನಸಿಕ ಆರೋಗ್ಯ: 'ಮುಜುಗರಕ್ಕೆ ಒಳಗಾಗದೇ ತಜ್ಞರ ಸಹಾಯ ಪಡೆಯಿರಿ' .. ಅಮೀರ್ ಖಾನ್ ಸಲಹೆ

ABOUT THE AUTHOR

...view details