ಹೈದರಾಬಾದ್ : ಬಾಲಿವುಡ್ ನಟಿ ಕತ್ರಿನಾ ಕೈಫ್ ತಾನು ಹೋದಲ್ಲೆಲ್ಲಾ ವಿಭಿನ್ನವಾಗಿ ಉಡುಗೆತೊಟ್ಟು ಕಾಣಿಸಿಕೊಳ್ಳುತ್ತಿರುತ್ತಾರೆ. ನಟಿ ತನ್ನ ಉನ್ನತ ದರ್ಜೆಯ ಫ್ಯಾಷನ್ಗಾಗಿ ಸತತವಾಗಿ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇಂದು (ಗುರುವಾರ) ಮುಂಬೈ ವಿಮಾನ ನಿಲ್ದಾಣದಲ್ಲಿ ವೆಸ್ಟ್ ಸೂಟ್ ಮತ್ತು ಡೆನಿಮ್ ಜಾಕೆಟ್ನಲ್ಲಿ ಸಖತ್ ಹಾಟ್ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಕೈಫ್ ವಿಭಿನ್ನವಾಗಿ ಜಾಕೆಟ್ ಧರಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನೆಟ್ಟಿಗರು ನೀವು ಸರಿಯಾಗಿ ಜಾಕೆಟ್ ಧರಿಸಿಲ್ಲ ಎಂದು ನಟಿಯನ್ನು ಟ್ರೋಲ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪಾಪರಾಜೋ ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿ, ಕತ್ರಿನಾ ಬೂದು ಬಣ್ಣದ ವೆಸ್ಟ್ ಸೂಟ್ ಧರಿಸಿರುವುದನ್ನು ಕಾಣಬಹುದು. ತನ್ನ ಭುಜದಿಂದ ಕೆಳಗೆ ಭಾರೀ ಗಾತ್ರದ ಡೆನಿಮ್ ಜಾಕೆಟ್ ಧರಿಸಿದ್ದಾರೆ. ತಲೆ ಕೂದಲನ್ನು ಸುಂದರವಾಗಿ ಕಟ್ಟಿಕೊಂಡಿದ್ದು, ಕಣ್ಣಿಗೆ ಕಪ್ಪು ಬಣ್ಣದ ದಪ್ಪನಯಾ ಸನ್ಗ್ಲಾಸ್ ಹಾಕಿಕೊಂಡಿದ್ದಾರೆ. ಕಾಲಿಗೆ ಬಿಳಿ ಬಣ್ಣದ ಸ್ನೀಕರ್ಸ್ನೊಂದಿಗೆ ತನ್ನ ಫ್ಯಾಷನ್ ಮುಂದುವರೆಸಿದ್ದಾರೆ. ಈ ರೀತಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕತ್ರಿನಾ ತನ್ನ ಮನಮೋಹಕ ನೋಟದಿಂದ ಎಲ್ಲರನ್ನು ಸಂಪೂರ್ಣವಾಗಿ ಬೆರಗುಗೊಳಿಸಿದ್ದಾರೆ.
ಇದನ್ನೂ ಓದಿ :ಅಭಿಮಾನಿಗಳಿಗೆ ಸಮಯ ಕೊಟ್ಟ ಕತ್ರಿನಾ ಕೈಫ್ - ವಿಕ್ಕಿ ಕೌಶಲ್ ದಂಪತಿ
ಈ ಸಂದರ್ಭದಲ್ಲಿ ಸೆರೆ ಹಿಡಿದ ವಿಡಿಯೋವನ್ನು ಹಂಚಿಕೊಂಡ ತಕ್ಷಣ, ಸಾಮಾಜಿಕ ಜಾಲತಾಣದ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ನಟಿ ಧರಿಸಿರುವ ವಿಭಿನ್ನ ಉಡುಗೆಯಂತೆ ವಿಭಿನ್ನವಾಗಿ ಕಾಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ. ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ, "ಕತ್ರಿನಾ ಅವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ, ಅವರು ಅದ್ಭುತವಾಗಿದ್ದಾರೆ!" ಇನ್ನೊಬ್ಬರು ಹೀಗೆ ಬರೆದಿದ್ದಾರೆ, "ಬಿಯಾಂಡ್ ಬ್ಯೂಟಿಫುಲ್! ಮತ್ತೊಬ್ಬ ಅಭಿಮಾನಿ "ಈಗ ಇದು ಪರಿಪೂರ್ಣ ವಿಮಾನ ನಿಲ್ದಾಣದ ನೋಟ!" ಎಂದು ಬರೆದಿದ್ದಾರೆ.