ಕರ್ನಾಟಕ

karnataka

ETV Bharat / entertainment

Katrina Kaif: ಪ್ರವಾಸ ಮುಗಿಸಿ ಹಿಂತಿರುಗಿದ ಕತ್ರಿನಾ ಕೈಫ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು - ಈಟಿವಿ ಭಾರತ ಕನ್ನಡ

Viral Video: ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕತ್ರಿನಾ ಕೈಫ್​ ಕಾಣಿಸುತ್ತಿದ್ದಂತೆ ಅವರ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.

Katrina Kaif
ಕತ್ರಿನಾ ಕೈಫ್​

By

Published : Jul 7, 2023, 4:27 PM IST

ಬಾಲಿವುಡ್​ ನಟಿ ಕತ್ರಿನಾ ಕೈಫ್​ ತಮ್ಮ ಪತಿ, ನಟ ವಿಕ್ಕಿ ಕೌಶಲ್​ ಜೊತೆಗಿನ ಅಮೆರಿಕ ಪ್ರವಾಸ ಮುಗಿಸಿ ಹಿಂತಿರುಗಿದ್ದಾರೆ. ವಿಕ್ಕಿ ಈ ವಾರದ ಆರಂಭದಲ್ಲಿ ಮುಂಬೈಗೆ ಬಂದಿದ್ದು, ಇಂದು ಬೆಳಗ್ಗೆ ಕತ್ರಿನಾ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಕತ್ರಿನಾ ಅವರ ಉಪಸ್ಥಿತಿಯನ್ನು ಗುರುತಿಸಿದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಕೂಡಲೇ ಭದ್ರತಾ ಸಿಬ್ಭಂದಿ ಧಾವಿಸಿ, ನಟಿಯನ್ನು ಕಾರಿನವರೆಗೂ ಬಿಟ್ಟು ಬಂದ ಪ್ರಸಂಗ ನಡೆಯಿತು.

ನಟಿ ಕತ್ರಿನಾ ಕೈಫ್​ ಮುಂಬೈ ವಿಮಾನ ನಿಲ್ದಾಣದಲ್ಲಿ ಕಂದು ಬಣ್ಣದ ಮುದ್ರಿತ ಶರ್ಟ್​ ಮತ್ತು ನೀಲಿ ಬ್ಯಾಗಿ ಜೀನ್ಸ್​ನೊಂದಿಗೆ ಕಾಣಿಸಿಕೊಂಡರು. ಇನ್​ಸ್ಟಾಗ್ರಾಮ್​ನಲ್ಲಿ ಪಾಪರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ ಕತ್ರಿನಾಳ ಸುತ್ತ ಜನರು ಸುತ್ತುವreದಿರುವುದನ್ನು ಕಾಣಬಹುದು. ಅತಿ ಉತ್ಸಾಹದಿಂದ ನಟಿಯ ಹತ್ತಿರಕ್ಕೆ ಸೆಲ್ಫಿಗಾಗಿ ಬರುತ್ತಿದ್ದ ಅಭಿಮಾನಿಗಳನ್ನು ಭದ್ರತಾ ಸಿಬ್ಬಂದಿ ಅನಿವಾರ್ಯವಾಗಿ ದೂರ ಸರಿಸಬೇಕಾಯಿತು.

ಅದಾಗ್ಯೂ ನಟಿ ಕೋಪ ಮಾಡಿಕೊಳ್ಳದೇ, ತುಂಬಾ ಕೂಲ್​ ಆಗಿದ್ದರು. ಮಿಲಿಯನ್​ ಡಾಲರ್​ ನಗೆ ಬೀರುತ್ತಾ ವಿಮಾನ ನಿಲ್ದಾಣದಿಂದ ಹೊರ ಪ್ರವೇಶಿಸಿದರು. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಭಿಮಾನಿಗಳು ದೃಶ್ಯಕ್ಕೆ ಕಮೆಂಟ್​ ಮಾಡುತ್ತಿದ್ದಾರೆ. ನಟಿಯ ಅಂದ ಚೆಂದದ ಗುಣಗಾನ ಮಾಡುತ್ತಿದ್ದಾರೆ. ಅವರನ್ನು ಹತ್ತಿರದಿಂದ ನೋಡುವ ಅವಕಾಶ ನಮಗೂ ಸಿಗಬೇಕಿತ್ತು ಎನ್ನುತ್ತಿದ್ದಾರೆ.

ಕೆಲಸದ ವಿಚಾರ ಗಮನಿಸುವುದಾದರೆ, ನಟಿ ಕತ್ರಿನಾ ಕೈಫ್​ ಕೊನೆಯದಾಗಿ ಹಾರರ್ ಕಾಮಿಡಿ ಫೋನ್ ಬೂತ್‌ನಲ್ಲಿ ಕಾಣಿಸಿಕೊಂಡರು. ಈ ಚಿತ್ರ ಕಳೆದ ವರ್ಷ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಗಿಟ್ಟಿಸಿತ್ತು. ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಈ ಚಿತ್ರದಲ್ಲಿ ಕತ್ರಿನಾ ಜೊತೆಗೆ ನಟಿಸಿದ್ದರು. ಟೈಗರ್​ 3 ಕತ್ರಿನಾ ಕೈಫ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ. ಮಾಜಿ ಐಎಸ್‌ಐ ಏಜೆಂಟ್ ಜೊಯಾ ಕಾಣಿಸಿಕೊಳ್ಳಲಿದ್ದಾರೆ.

'ಟೈಗರ್ 3' ಬಾಲಿವುಡ್​ ಸೂಪರ್​ ಸ್ಟಾರ್​ ನಟ ಸಲ್ಮಾನ್ ಖಾನ್, ಕತ್ರಿನಾ ನಟನೆಯ ಸ್ಪೈ ಥ್ರಿಲ್ಲರ್ ಫ್ರಾಂಚೈಸಿ ಮೂರನೇ ಭಾಗವಾಗಿದೆ. 2012ರಲ್ಲಿ ಕಬೀರ್ ಖಾನ್ ನಿರ್ದೇಶನದ 'ಏಕ್ ಥಾ ಟೈಗರ್' ಬಿಡುಗಡೆ ಆಗಿತ್ತು. ಅದರ ಮುಂದುವರಿದ ಭಾಗ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಟೈಗರ್ ಜಿಂದಾ ಹೈ 2017ರಲ್ಲಿ ಬಿಡುಗಡೆ ಆಗಿತ್ತು. ಇದೀಗ 'ಟೈಗರ್ 3' ಬಿಡುಗಡೆಗೆ ಸಿದ್ಧತೆ ನಡೆಸಿದೆ.

ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರವನ್ನು ಇದೇ ನವೆಂಬರ್​ನಲ್ಲಿ ರಿಲೀಸ್​ ಮಾಡಲು ತಯಾರಿ ನಡೆಯುತ್ತಿದ್ದು, ಶಾರುಖ್​ ಖಾನ್​ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಕತ್ರಿನಾ ಕೈಫ್​ ಅವರು ಫರ್ಹಾನ್ ಅಖ್ತರ್ ಅವರ ಜೀ ಲೇ ಝರಾ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಕೆಲಸ ಮಾಡಲಿದ್ದಾರೆ.

ವಿಕ್ಕಿ ಕೌಶಲ್ ಸದ್ಯ ತಮ್ಮ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಯಶಸ್ಸಿನಲ್ಲಿ ಖುಷಿಯಲ್ಲಿದ್ದಾರೆ. ಇನ್ನೂ ಮೇಘನಾ ಗುಲ್ಜಾರ್ ಆ್ಯಕ್ಷನ್​ ಕಟ್​ ಹೇಳಿರುವ ಸ್ಯಾಮ್ ಬಹದ್ದೂರ್‌ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಇದು ಸ್ಯಾಮ್ ಮಾಣೆಕ್​ ಷಾ ಅವರ ಬಯೋಪಿಕ್. ಇದು ಡಿಸೆಂಬರ್​ 1ರಂದು ತೆರೆಕಾಣಲು ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಸಿನಿಮಾ: ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಟ್ರೇಲರ್ ಲಾಂಚ್

ABOUT THE AUTHOR

...view details