ಕರ್ನಾಟಕ

karnataka

ETV Bharat / entertainment

'ಮೇರಿ ಕ್ರಿಸ್ಮಸ್' ಟೈಟಲ್​ ಟ್ರ್ಯಾಕ್; ಕತ್ರಿನಾ, ವಿಜಯ್ ಸೇತುಪತಿ ಸಿನಿಮಾ ಶೀಘ್ರದಲ್ಲೇ ತೆರೆಗೆ - ಮೇರಿ ಕ್ರಿಸ್ಮಸ್ ಹಾಡು

ಬಹುನಿರೀಕ್ಷಿತ 'ಮೇರಿ ಕ್ರಿಸ್ಮಸ್' ಸಿನಿಮಾದ ಟೈಟಲ್​ ಟ್ರ್ಯಾಕ್ ರಿಲೀಸ್​ ಆಗಿದೆ.

Merry Christmas Title track
'ಮೇರಿ ಕ್ರಿಸ್ಮಸ್' ಟೈಟಲ್​ ಟ್ರ್ಯಾಕ್

By ETV Bharat Karnataka Team

Published : Dec 26, 2023, 12:00 PM IST

ಬಾಲಿವುಡ್​​​ ಬೆಡಗಿ ಕತ್ರಿನಾ ಕೈಫ್ ಮತ್ತು ದಕ್ಷಿಣದ ಖ್ಯಾತ ತಾರೆ ವಿಜಯ್ ಸೇತುಪತಿ ನಟನೆಯ ಚೊಚ್ಚಲ ಚಿತ್ರ 'ಮೇರಿ ಕ್ರಿಸ್ಮಸ್'. ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಕ್ರಿಸ್ಮಸ್ ಶುಭ ಸಂದರ್ಭ ಚಿತ್ರದ ಟೈಟಲ್​ ಟ್ರ್ಯಾಕ್ ಅನಾವರಣಗೊಳಿಸಲಾಗಿದೆ.

ಮೇರಿ ಕ್ರಿಸ್ಮಸ್ ಟೈಟಲ್​ ಟ್ರ್ಯಾಕ್.. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರಮಂದಿರ ಪ್ರವೇಶಿಸಲಿರುವ 'ಮೇರಿ ಕ್ರಿಸ್ಮಸ್' ಚಿತ್ರದ ಟ್ರೇಲರ್​ ಅನ್ನು ಇತ್ತೀಚೆಗಷ್ಟೇ ಅನಾವರಣಗೊಳಿಸಲಾಗಿತ್ತು. ಇದೀಗ ಟೈಟಲ್​ ಟ್ರ್ಯಾಕ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರೇಕ್ಷಕರ ಗಮನ ಸೆಳೆದಿದೆ. ಸಿನಿಮಾ ಪ್ರಮೋಶನ್​ ಬಿರುಸಿನಿಂದ ಸಾಗಿದೆ.

ಪ್ರೀತಮ್ ಹಾಡನ್ನು ರಚಿಸಿದ್ದಾರೆ ಮತ್ತು ಆಶ್ ಕಿಂಗ್ ದನಿಯಾಗಿದ್ದಾರೆ. ದಿ ಮೊಸ್ಟ್ ಎಕ್ಸ್​​ಪೆಕ್ಟೆಡ್ ಪ್ರಾಜೆಕ್ಟ್​ ಅನ್ನು ಬದ್ಲಾಪುರ್ ಮತ್ತು ಅಂಧಾಧುನ್ ಖ್ಯಾತಿಯ ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದಾರೆ. ಇದೇ ಮೊದಲ ಬಾರಿ ಕತ್ರಿನಾ ಕೈಫ್, ವಿಜಯ್ ಸೇತುಪತಿ ತೆರೆ ಹಂಚಿಕೊಂಡಿದ್ದಾರೆ.

ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಟಿಪ್ಸ್‌ ಫಿಲ್ಮ್ಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಾಡನ್ನು ಹಂಚಿಕೊಂಡು, "ಪರ್ಫೆಕ್ಟ್ ಮೇರಿ ಕ್ರಿಸ್ಮಸ್ ಹಾಡು ಇಲ್ಲಿದೆ. ಸಿನಿಮಾ ಜನವರಿ 12 ರಂದು ಚಿತ್ರಮಂದಿರಗಳಲ್ಲಿ" ಎಂದು ಬರೆದುಕೊಂಡಿದೆ. ಹಾಡು ರೆಟ್ರೋ ವೈಬ್ ಹೊಂದಿದೆ. ಸದ್ಯ ಅನಾವರಣಗೊಂಡಿರುವ ಹಾಡು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಚಿತ್ರದ ಟ್ರೇಲರ್ ಅನಾವರಣಗೊಂಡು, ಸಿನಿಪ್ರಿಯರ ಕುತೂಹಲ ಕೆರಳಿತ್ತು. ಶ್ರೀರಾಮ್ ರಾಘವನ್ ಅವರು ಪ್ರೇಕ್ಷಕರಿಗೆ ಸಸ್ಪೆನ್ಸ್, ಸರ್ಪೈಸ್, ರೊಮ್ಯಾನ್ಸ್ ಅಂಶಗಳನ್ನೊಳಗೊಂಡ ಕಥೆ ಕೊಡಲು ಸಜ್ಜಾಗಿದ್ದಾರೆ. ವಿಜಯ್ ಮತ್ತು ಕತ್ರಿನಾ ಅವರ ಕೆಮಿಸ್ಟ್ರಿ ವೀಕ್ಷಿಸಲು ಪ್ರೇಕ್ಷಕರು ಕುತೂಹಲಭರಿತರಾಗಿದ್ದಾರೆ.

ಇದನ್ನೂ ಓದಿ:ಉತ್ತಮ ಪ್ರದರ್ಶನ ಕಾಣುತ್ತಿರುವ 'ಡಂಕಿ': ಕಲೆಕ್ಷನ್​ ಮಾಹಿತಿ ಹೀಗಿದೆ

ಟ್ರೇಲರ್​ನಲ್ಲಿ, ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ಮುಂಬೈನಲ್ಲಿ ಕ್ರಿಸ್ಮಸ್ ಸಂದರ್ಭ ಅಪರಿಚಿತರಂತೆ ಕಾಣಿಸಿಕೊಂಡಿದ್ದಾರೆ. ಮೋಸ, ಒಳಸಂಚು ಮತ್ತು ಕೊಲೆಯ ಸುತ್ತ ಸಿನಿಮಾದ ಕಥೆ ಸುತ್ತುತ್ತದೆ. ಶ್ರೀರಾಮ್​​ ರಾಘವನ್ ಅವರು ಈ ಅಂಶಗಳ ಮೇಲೆ ಹೆಚ್ಚು ಗಮನ ಹರಿಸಿ ಕಥೆ ರಚಿಸೋದು ನಿಮಗೆ ತಿಳಿದಿರುವ ವಿಚಾರವೇ. ಈ ಅಂಶಗಳು ಹಿಂದಿನ ಚಿತ್ರಗಳಾದ ಜಾನಿ ಗದ್ದಾರ್, ಬದ್ಲಾಪುರ್ ಮತ್ತು ಅಂಧಾಧುನ್​​ನಲ್ಲಿಯೂ ಕಾಣಿಸಿಕೊಂಡಿವೆ.

ಇದನ್ನೂ ಓದಿ:'ಸಲಾರ್​​' ಸ್ಪೀಡ್​​ಗಿಲ್ಲ ಬ್ರೇಕ್​: ​ಕಲೆಕ್ಷನ್​​ ಕಂಡು ಹುಬ್ಬೇರಿಸಿದ ಪ್ರೇಕ್ಷಕರು!

'ಮೇರಿ ಕ್ರಿಸ್ಮಸ್' ಎರಡು ಭಾಷೆಗಳಲ್ಲಿ ನಿರ್ಮಾಣಗೊಂಡಿದ್ದು, ವಿವಿಧ ಪೋಷಕ ಪಾತ್ರಗಳನ್ನು ಹೊಂದಿದೆ. ಹಿಂದಿಯಲ್ಲಿ ಸಂಜಯ್ ಕಪೂರ್, ವಿನಯ್ ಪಾಠಕ್, ಪ್ರತಿಮಾ ಕಣ್ಣನ್ ಮತ್ತು ಟಿನ್ನು ಆನಂದ್ ನಟಿಸಿದ್ದಾರೆ. ತಮಿಳಿನಲ್ಲಿ ರಾಧಿಕಾ ಶರತ್‌ಕುಮಾರ್, ಶಣ್ಮುಗರಾಜ, ಕೆವಿನ್ ಜೈ ಬಾಬು ಮತ್ತು ರಾಜೇಶ್ ವಿಲಿಯಮ್ಸ್ ನಟಿಸಿದ್ದಾರೆ. 2024ರ ಜನವರಿ 12ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ABOUT THE AUTHOR

...view details