ಕರ್ನಾಟಕ

karnataka

ETV Bharat / entertainment

'ಕಾಫಿ ವಿತ್ ಕರಣ್​'ನಲ್ಲಿ ಪಾಸ್ಟ್ ರಿಲೇಶನ್​ಶಿಪ್ ಚರ್ಚೆ:​ 'ಗೌಪ್ಯತೆ' ಗೌರವಿಸಿ ಎಂದ ಕಾರ್ತಿಕ್ ಆರ್ಯನ್ - Koffee with Karan

ಹಿಂದಿನ ಸಂಬಂಧಗಳು, ಗೌಪ್ಯತೆ, ಪರಸ್ಪರ ಗೌರವದ ಬಗ್ಗೆ ಸಂದರ್ಶನವೊಂದರಲ್ಲಿ ನಟ ಕಾರ್ತಿಕ್ ಆರ್ಯನ್ ಮಾತನಾಡಿದ್ದಾರೆ.

Kartik Aaryan speaks on past relationships and privacy
ಕಾರ್ತಿಕ್ ಆರ್ಯನ್

By ETV Bharat Karnataka Team

Published : Nov 21, 2023, 5:55 PM IST

ಬಾಲಿವುಡ್​​ ಬೆಡಗಿ ಸಾರಾ ಅಲಿ ಖಾನ್ ಇತ್ತೀಚೆಗೆ ಬಾಲಿವುಡ್ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ 'ಕಾಫಿ ವಿತ್ ಕರಣ್ ಸೀಸನ್ 8'ರಲ್ಲಿ ಕಾಣಿಸಿಕೊಂಡರು. ಈ ಹಿಂದೆ ನಟ ಕಾರ್ತಿಕ್ ಆರ್ಯನ್ ಜೊತೆ ಸಾರಾ ಡೇಟಿಂಗ್​​ ನಡೆಸಿದ್ದರು ಎಂಬ ವದಂತಿಗಳಿವೆ. ಈ ಬಗ್ಗೆ ಚಾಟ್​ ಶೊನಲ್ಲಿ ಸಾರಾ ಮಾತನಾಡಿದ್ದರು. ಇದೇ ಕಾರ್ಯಕ್ರಮದಲ್ಲಿ, ಕಾರ್ತಿಕ್ ಆರ್ಯನ್ ಜೊತೆ ಕೆಲ ಕಾಲ ಸುದ್ದಿಯಾದ ನಟಿ ಅನನ್ಯಾ ಪಾಂಡೆ ಕೂಡ ಭಾಗಿಯಾಗಿದ್ದರು.

ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ನಟ ಕಾರ್ತಿಕ್ ಆರ್ಯನ್​, ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಇಚ್ಛಿಸುತ್ತಾರೆ. ಸಾರ್ವಜನಿಕವಾಗಿ ತಮ್ಮ ಪರ್ಸನಲ್​​ ವಿಚಾರಗಳನ್ನು ಚರ್ಚಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಆದ್ಯತೆ ನೀಡುವುದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಸಂಬಂಧಗಳ ಗೌಪ್ಯತೆ ಗೌರವಿಸುವ ಬಗ್ಗೆ ಮಾತನಾಡಿದ್ದಾರೆ. ವಿಚಾರ ಕೇವಲ ಇಬ್ಬರು ವ್ಯಕ್ತಿಗಳಿಗೆ ಸಂಬಂಧಿಸಿದ್ದರೆ, ಇತರರು ಅದನ್ನು ಸಾರ್ವಜನಿಕವಾಗಿ ಚರ್ಚಿಸಬಾರದು ಎಂದು ತಿಳಿಸಿದ್ದಾರೆ.

ಡೇಟಿಂಗ್​ನಲ್ಲಿದ್ದ ಇಬ್ಬರೂ ಗೌಪ್ಯತೆ ಕಾಪಾಡಿಕೊಳ್ಳಬೇಕು. ಸಂಬಂಧ ಮುಂದುವರಿಯದಿದ್ದರೂ ಕೂಡ ಒಟ್ಟಿಗೆ ಕಳೆದ ಸಮಯ ಗೌರವಿಸಬೇಕು. ಪರಸ್ಪರ ಗೌರವ ಮುಖ್ಯ. ಏಕೆಂದರೆ ರಿಲೇಶನ್​​ಶಿಪ್​​ ಬಗ್ಗೆ ಮಾತನಾಡಲು ಹೊರಟರೆ, ಆ ಚರ್ಚೆ ಇಬ್ಬರನ್ನೂ ಒಳಗೊಳ್ಳುತ್ತದೆ. ಹಾಗಾಗಿ ಪರಸ್ಪರ ಗೌರವ ಕೊಟ್ಟು, ಸಾರ್ವಜನಿಕವಾಗಿ ಮೌನ ವಹಿಸಿದರೆ ಸೂಕ್ತ ಎಂದು ತಿಳಿಸಿದರು.

ಇದನ್ನೂ ಓದಿ:ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ: 'ಬ್ಯಾಡ್ ಮ್ಯಾನರ್ಸ್' ನಟ ಅಭಿಷೇಕ್ ಅಂಬರೀಶ್​

ಸಂದರ್ಶನದಲ್ಲಿ, ಕಾಫಿ ವಿತ್ ಕರಣ್ ಶೋನಲ್ಲಿ ನಿಮ್ಮ ಕುರಿತು ಚರ್ಚಿಸುವ ಸೆಲೆಬ್ರಿಟಿಗಳ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆ ನಟ ಕಾರ್ತಿಕ್ ಆರ್ಯನ್ ಅವರಿಗೆ ಎದುರಾಯಿತು. ನನ್ನ ವೈಯಕ್ತಿಕ ಜೀವನದ ಸುತ್ತಲಿನ ಚರ್ಚೆಯನ್ನು ನಾನು ಪ್ರಶಂಸಿಸುವುದಿಲ್ಲ ಎಂದು ನಟ ಸ್ಪಷ್ಟಪಡಿಸಿದ್ದರು. "ಇಬ್ಬರು ವ್ಯಕ್ತಿಗಳ ನಡುವೆ ಸಂಬಂಧವಿದ್ದರೆ, ಇನ್ನೊಬ್ಬರು ಅದರ ಬಗ್ಗೆ ಮಾತನಾಡಬಾರದು ಎಂಬುದರ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ. ನಾವೆಲ್ಲರೂ ನಮ್ಮ ಸಂಬಂಧಗಳನ್ನು ಗೌರವಿಸಬೇಕು. ಯಾರ ಸಂಬಂಧದ ಬಗ್ಗೆಯೂ ಯಾರೂ ಮಾತನಾಡಬಾರದು" ಎಂದು ತಿಳಿಸಿದರು.

ಇದನ್ನೂ ಓದಿ:'ಗೂಢಚಾರಿ 2' ಸಿನಿಮಾಗೆ ಇಂಗ್ಲೆಂಡ್ ಚೆಲುವೆ: ಅಡಿವಿ ಶೇಷ್ ಜೊತೆ ಬನಿತಾ ಸಂಧು ನಟನೆ

ಲವ್ ಆಜ್ ಕಲ್ ಚಿತ್ರದ ಶೂಟಿಂಗ್​​ ಸಂದರ್ಭ ಕಾರ್ತಿಕ್ ಮತ್ತು ಸಾರಾ ಪ್ರೀತಿಯಲ್ಲಿದ್ದರು. ಆದ್ರೆ ಈ ಸಂಬಂಧ ಬೇಗ ಕೊನೆಗೊಂಡಿತು ಎಂದು ಹೇಳಲಾಗಿದೆ. ಬೇರ್ಪಟ್ಟ ನಂತರವೂ ಈ ಜೋಡಿ ಸಾರ್ವಜನಿಕವಾಗಿ ಸ್ನೇಹಿತರಂತೆ ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ಒಟ್ಟಿಗೆ ಕಾರ್ಯಕ್ರಮಗಳಿಗೆ ಆಗಮಿಸುತ್ತಾರೆ. ಇನ್ನೂ ಕಾರ್ತಿಕ್ ಮತ್ತು ಅನನ್ಯಾ ಕೂಡ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿತ್ತು. ಆದರೆ ಸದ್ಯ ಅನನ್ಯಾ ಹೆಸರು ಆದಿತ್ಯ ಜೊತೆ ಕೇಳಿ ಬರುತ್ತಿದೆ. ಕಾಫಿ ವಿಥ್ ಕರಣ್‌ ಶೋನ ಈ ಹಿಂದಿನ ಸೀಸನ್‌ನಲ್ಲಿ, ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಒಟ್ಟಿಗೆ ಭಾಗಿಯಾಗಿದ್ದರು. ಆ ಸಂದರ್ಭವೂ ನಟಿ ಸಾರಾ ಅಲಿ ಖಾನ್​​ ಮಾಜಿ ಗೆಳೆಯನ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದರು.

ABOUT THE AUTHOR

...view details