ಕರ್ನಾಟಕ

karnataka

ETV Bharat / entertainment

17.50 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಅಪಾರ್ಟ್​ಮೆಂಟ್​ ಖರೀದಿಸಿದ ಈ ನಟ.. ಏನೇನೆಲ್ಲ ಇದೇ ಗೊತ್ತೇ? - ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ

ನಟ ಕಾರ್ತಿಕ್​ ಆರ್ಯನ್​ 17.50 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಅಪಾರ್ಟ್​ಮೆಂಟ್ ಖರೀದಿಸಿದ್ದಾರೆ.

Kartik Aaryan
ಕಾರ್ತಿಕ್​ ಆಯನ್​

By

Published : Jul 8, 2023, 6:56 PM IST

ಸಿನಿ ಲೋಕದ ತಾರೆಯರು ಐಷಾರಾಮಿ ಮನೆ, ಫ್ಲಾಟ್​, ಕಾರು ಖರೀದಿಸುತ್ತಾ ಸುದ್ದಿಯಲ್ಲಿರುತ್ತಾರೆ. ಇದೀಗ ಆ ಸಾಲಿಗೆ ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಕೂಡ ಸೇರಿದ್ದಾರೆ. ಮುಂಬೈನ ಬೆಲೆಬಾಳುವ ಜುಹು ಪ್ರದೇಶದಲ್ಲಿ ಈಗಾಗಲೇ ಅವರ ಕುಟುಂಬ ವಾಸವಿರುವ ಅಪಾರ್ಟ್​ಮೆಂಟ್​ನ ಅದೇ ಕಟ್ಟಡದಲ್ಲಿ ಮತ್ತೊಂದು ಐಷಾರಾಮಿ ಅಪಾರ್ಟ್​ಮೆಂಟ್​ ಅನ್ನು ಖರೀದಿಸಿದ್ದಾರೆ. ಮೂಲಗಳ ಪ್ರಕಾರ, ನಟ ಜೂನ್​ 30 ರಂದು 17.50 ಕೋಟಿ ರೂ. ಬೆಲೆ ಬಾಳುವ ಈ ಅಪಾರ್ಟ್​ಮೆಂಟ್​ ಅನ್ನು ಕೊಂಡುಕೊಂಡಿದ್ದಾರೆ.

ವರದಿಗಳ ಅನುಸಾರ, ಕಾರ್ತಿಕ್ ಆರ್ಯನ್​ ಅವರು ಜುಹುವಿನ ಸಿದ್ಧಿ ವಿನಾಯಕ್ ಸೊಸೈಟಿಯ ಎರಡನೇ ಮಹಡಿಯಲ್ಲಿ 1536 ಚದರ ಅಡಿ ವಿಸ್ತೀರ್ಣದ ಆಸ್ತಿಯನ್ನು ಖರೀದಿಸಿದ್ದಾರೆ. ನಿಖರವಾದ ಮೌಲ್ಯ 7.49 ಕೋಟಿ ಎಂದು ಹೇಳಲಾಗಿದ್ದರೂ, ಅಪಾರ್ಟ್​ಮೆಂಟ್​ ಅನ್ನು 17.50 ಕೋಟಿ ರೂ ಪ್ರೀಮಿಯಂ ದರದಲ್ಲಿ ಖರೀದಿಸಲಾಗಿದೆ ಎಂದು ವರದಿಯಾಗಿದೆ. ಇದಲ್ಲದೇ ಆರ್ಯನ್​ ಅವರ ಕುಟುಂಬವು ಅದೇ ಕಟ್ಟದಲ್ಲಿ 8ನೇ ಮಹಡಿಯ ಐಷಾರಾಮಿ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದಾರೆ.

ಜಯೇಶ್ ಮತ್ತು ಕೇತಕಿ ದೋಷಿ ಅವರಿಂದ ಫ್ಲಾಟ್​ ಖರೀದಿಸಿದ ನಂತರ ಕಾರ್ತಿಕ್ ಸ್ಟ್ಯಾಂಪ್ ಡ್ಯೂಟಿ ಪಾವತಿಸಿದ್ದಾರೆ ಎಂದು ವರದಿಯಾಗಿದೆ. ಅಪಾರ್ಟ್​ಮೆಂಟ್​ ಜೊತೆಗೆ ಎರಡು ಪಾರ್ಕಿಂಗ್ ಸ್ಥಳಗಳನ್ನು ನಟ ಖರೀದಿಸುವ ನಿರೀಕ್ಷೆಯಿದೆ. ಕಾರ್ತಿಕ್​ ಆರ್ಯನ್​ ಅವರು ತಮ್ಮ ಅಪಾರ್ಟ್​ಮೆಂಟ್​ನ ಅಗತ್ಯತೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತಾಯಿ ಡಾ. ಮಾಲಾ ತಿವಾರಿಗೆ ನೀಡಿರುವುದಾಗಿ ತಿಳಿದು ಬಂದಿದೆ. 2019 ರಲ್ಲಿ ಕಾರ್ತಿಕ್ ವರ್ಸೋವಾದಲ್ಲಿ 459 ಚದರ ಅಡಿ ಅಪಾರ್ಟ್‌ಮೆಂಟ್‌ಗಾಗಿ 1.60 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದರು.

ಇದನ್ನೂ ಓದಿ:Salaar: 100 ಮಿಲಿಯನ್​ ವೀಕ್ಷಣೆ ದಾಟಿದ 'ಸಲಾರ್​' ಟೀಸರ್​; ಆಗಸ್ಟ್​ ಕೊನೆಯಲ್ಲಿ ಟ್ರೇಲರ್​ಗೆ ಮುಹೂರ್ತ

ಇನ್ನೂ ಕಾರ್ತಿಕ್​ ಆರ್ಯನ್ ಸಿನಿಮಾ ವಿಚಾರವಾಗಿ ನೋಡುವುದಾದರೆ, ಸದ್ಯ ಅವರು 'ಸತ್ಯಪ್ರೇಮ್ ಕಿ ಕಥಾ'​ ಯಶಸ್ಸಿನಲ್ಲಿದ್ದಾರೆ. ಇದಲ್ಲದೇ​ 'ಚಂದು ಚಾಂಪಿಯನ್' ಸಿನಿಮಾ ಘೋಷಿಸಿದ್ದಾರೆ. ಕಬೀರ್ ಖಾನ್ ಮತ್ತು ಸಾಜಿದ್ ನಾಡಿಯಾಡ್ವಾಲಾ ಅವರ ಸಹಯೋಗದಲ್ಲಿ ಈ ಸಿನಿಮಾ ಮೂಡಿಬರಲಿದೆ. ಈ ಚಿತ್ರದಲ್ಲಿ ಆರ್ಯನ್‌ಗೆ ಜೋಡಿಯಾಗಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದಲ್ಲದೇ, ಕಾರ್ತಿಕ್ ಅವರ ಕೈಯಲ್ಲಿ ಆಶಿಕಿ 3 ಕೂಡ ಇದೆ.

'ಸತ್ಯಪ್ರೇಮ್ ಕಿ ಕಥಾ'​: ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಜೋಡಿಯ ರೊಮ್ಯಾಂಟಿಕ್ ಮ್ಯೂಸಿಕಲ್​ ಲವ್​ಸ್ಟೋರಿ ಸಿನಿಮಾ 'ಸತ್ಯಪ್ರೇಮ್ ಕಿ ಕಥಾ'​. ಚಿತ್ರವು ಸಮೀರ್ ವಿದ್ವಾನ್ಸ್ ನಿರ್ದೇಶನದಲ್ಲಿ ಮೂಡಿ ಬಂದಿದೆ. ಚಿತ್ರದ ಶೀರ್ಷಿಕೆಯೇ ನಟ ನಟಿಯ ಹೆಸರು. ಸತ್ಯಪ್ರೇಮ್ ಆಗಿ ಕಾರ್ತಿಕ್ ಆರ್ಯನ್ ನಟಿಸಿದರೆ, ಕಥಾ ಆಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಜ್​​ರಾಜ್ ರಾವ್, ಸುಪ್ರಿಯಾ ಪಾಠಕ್, ಶಿಖಾ ತಲ್ಸಾನಿಯಾ, ರಾಜ್​​ಪಾಲ್ ಯಾದವ್, ಸಿದ್ಧಾರ್ಥ್ ರಾಂಧೇರಿಯಾ ಮತ್ತು ಅನುರಾಧಾ ಪಟೇಲ್ ಕೂಡ ಅಭಿನಯಿಸಿದ್ದಾರೆ.

ಇದನ್ನೂ ಓದಿ:'ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ': ಆದಿಪುರುಷ್​​ ಡೈಲಾಗ್​ ರೈಟರ್

ABOUT THE AUTHOR

...view details