ಹೈದರಾಬಾದ್: ನಟ ಕಾರ್ತಿಕ್ ಆರ್ಯನ್ ಅವರ ಮುಂಬರುವ ಚಿತ್ರದ ಕುರಿತು ಹೊಸ ಪ್ರಕಟಣೆಯನ್ನು ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅದ್ವಾನಿ ಅವರ ನಟನೆಯ ಬಹು ನೀರಿಕ್ಷಿತ ಚಿತ್ರ 'ಸತ್ಯ ಪ್ರೇಮ್ ಕಿ ಕಥಾ' ಸಿನಿಮಾದ ಟೀಸರ್ ಅನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಇಬ್ಬರ ಪಾತ್ರ ಪರಿಚಯದ ಟೀಸರ್ ಇದಾಗಿದ್ದು, ಇಬ್ಬರ ಮುದ್ದಾದ ಜೋಡಿಗೆ ಜನರು ಮತ್ತೊಮ್ಮೆ ಅಭಿನಂದನೆ ತಿಳಿಸಿದ್ದಾರೆ. ಈಗಾಗಲೇ ಈ ಜೋಡಿಯ ಕೆಮಿಸ್ಟ್ರಿ ಹಿಟ್ ಆಗಿದ್ದು, ಈ ಚಿತ್ರದಲ್ಲಿ ಲವರ್ಗಳಾಗದೇ ದಂಪತಿಗಳಾಗಿ ಮಿಂಚಲಿದ್ದಾರೆ. ಟೀಸರ್ನಲ್ಲಿ ಇಬ್ಬರ ಅದ್ಧೂರಿ ಮದುವೆ ಮತ್ತು ಚುಂಬನ ದೃಶ್ಯಗಳು ಕೂಡ ಕಂಡು ಬಂದಿವೆ.
ಇನ್ನು ಚಿತ್ರದ ಟೀಸರ್ ವಿಡಿಯೋ ಹಂಚಿಕೊಂಡ ಅವರು, 'ಆಕೆಯದು ಕಣ್ಣೀರು ಇರಬಹುದು.. ಆದರೆ... ಕಣ್ಣು ನನ್ನದು'' ಎಂದು ಬರೆದಿದ್ದಾರೆ. ಕಾರ್ತಿಕ್ ಅವರ ಧ್ವನಿ ಮೂಲಕ ಚಿತ್ರದ ಟೀಸರ್ ಆರಂಭವಾಗಲಿದೆ. ಬ್ಯಾಕ್ಗ್ರೌಂಡ್ನ ರೋಮ್ಯಾಟಿಂಕ್ ಟ್ಯೂನ್ ಮತ್ತಷ್ಟು ಹಿತ ನೀಡುತ್ತದೆ. ಪ್ರೀತಿಸಿದ ಹೃದಯಗಳು ಮದುವೆ ಕಥಾನಕವನ್ನು ಈ ಚಿತ್ರವನ್ನು ಹೊಂದಿದೆ.
ಪ್ರೀತಿ, ಮದುವೆ ಕುರಿತಾದ ಈ ಮುದ್ದಾದ ರೋಮ್ಯಾಂಟಿಕ್ ಚಿತ್ರ ಇದೆ ಜೂನ್ 29ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರವನ್ನು ಸಮೀರ್ ವಿಧ್ವಾನ್ ನಿರ್ದೇಶಿಸುತ್ತಿದ್ದು, ಸಜೀದ್ ನಡಿಯದ್ವಾಲ್ ಅವರು ನಿರ್ಮಿಸಿದ್ದಾರೆ. ಈ ಚಿತ್ರದ ಟೀಸರ್ ಅನ್ನು ಕಾರ್ತಿಕ್ ಮತ್ತು ಕಿಯಾರಾ ಅದ್ವಾನಿ ಇಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸುಪ್ರಿಯ ಪಾಠಕ್ ಕಪೂರ್, ಗಜರಜ್ ರಾವ್, ಸಿದ್ಧಾರ್ಥ್ ರಂಧೇರಿಯಾ, ಅನೂರಾದ ಪಟೇಲ್, ರಾಜ್ಪಾಲ್ ಯಾದವ್, ಶೇಖ್ ತಲ್ಸನಿಯಾ ಕೂಡ ಇದ್ದಾರೆ.