ಮುಂಬೈ: ಬಾಲಿವುಡ್ ಹ್ಯಾಂಡ್ಸಮ್ ಹೀರೋ ಕಾರ್ತಿಕ್ ಆರ್ಯನ್ ಮುಂಬೈನಲ್ಲಿ ತಮ್ಮ ಫ್ರೆಡ್ಡಿ (Freddy) ಪ್ರದರ್ಶನದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಬಹುನಿರೀಕ್ಷಿತ ಫ್ರೆಡ್ಡಿ ಸಿನಿಮಾ ಇಂದು ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಗಳಿಸಿದೆ.
ಫ್ರೆಡ್ಡಿ ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿ ಬಾಲಿವುಡ್ನ ಹ್ಯಾಂಡ್ಸಮ್ ಕಾರ್ತಿಕ್ ಆರ್ಯನ್ - ಕಾರ್ತಿಕ್ ಆರ್ಯನ್ ಫ್ರೆಡ್ಡಿ ಸಿನಿಮಾ
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅಭಿನಯದ ಫ್ರೆಡ್ಡಿ (Freddy) ಸಿನಿಮಾ ಇಂದು ಬಿಡುಗಡೆ ಆಗಿದೆ.
ಬಾಲಿವುಡ್ ನಟ ಕಾರ್ತಿಕ್ ಆರ್ಯನ್
ನಟ ತನ್ನ ಕಾರಿನಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. 'ಭೂಲ್ ಭುಲೈಯಾ 2' ಸ್ಟಾರ್ ಟೀ-ಶರ್ಟ್ ಮತ್ತು ಜೀನ್ಸ್‌ನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣುತ್ತಿದ್ದರು. ಕ್ಯಾಮರಾಗೆ ನಗುಮೊಗದಲ್ಲಿ ಪೋಸ್ ನೀಡಿದರು. ಅಭಿಮಾನಿಗಳೊಂದಿಗೂ ಫೋಟೋ ಕ್ಲಿಕ್ಕಿಸಿಕೊಂಡರು. ಏಕ್ತಾ ಕಪೂರ್, ಜೈ ಶೇವಾಕ್ರಮನಿ ನಿರ್ಮಾಣದ ಈ ಫ್ರೆಡ್ಡಿ ಸಿನಿಮಾವನ್ನು ಶಶಾಂಕ ಘೋಷ್ ನಿರ್ದೇಶಿಸಿದ್ದಾರೆ. ಕಾರ್ತಿಕ್ ಆರ್ಯನ್ ಜೋಡಿಯಾಗಿ ಅಲಯಾ ಎಫ್ ನಟಿಸಿದ್ದಾರೆ.
ಇದನ್ನೂ ಓದಿ:ಸ್ಟೈಲಿಶ್ ಲುಕ್ನಲ್ಲಿ ಗಮನ ಸೆಳೆದ ಬಾಲಿವುಡ್ ಪದ್ಮಾವತಿ