ಇತ್ತೀಚೆಗೆ ಎಫ್1 ಗ್ರ್ಯಾಂಡ್ ಪ್ರಿಕ್ಸ್ ಗಾಗಿ ಮೊನಾಕೊಗೆ ಪ್ರಯಾಣ ಬೆಳೆಸಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸೋಮವಾರ ರಾತ್ರಿ ದೇಶಕ್ಕೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾಗಳಲ್ಲಿ ಬಾಲಿವುಡ್ ಬ್ಯೂಟಿ ಸೆರೆಯಾಗಿದ್ದಾರೆ. ನಟಿ ಎಂದಿನಂತೆ ಸಂಪೂರ್ಣ ಬಿಳಿ ಉಡುಗೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಭಾರತಕ್ಕೆ ಮರಳುವ ವೇಳೆ ಬೆಬೋ ಏರ್ಪೋರ್ಟ್ ಲುಕ್ಗಾಗಿ ವೈಟ್ ಅಂಡ್ ವೈಟ್ ಡ್ರೆಸ್ ಆರಿಸಿಕೊಂಡರು.
ಇನ್ಸ್ಟಾಗ್ರಾಮ್ನಲ್ಲಿ ಪಾಪರಾಜಿ ಶೇರ್ ಮಾಡಿರುವ ವಿಡಿಯೋದಲ್ಲಿ, ನಟಿ ಕರೀನಾ ಕಪೂರ್ ಖಾನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಬಿಳಿ ಬಟ್ಟೆಯನ್ನು ಧರಿಸಿದ್ದಾರೆ. ಮ್ಯಾಚಿಂಗ್ ಶೂ, ಸನ್ಗ್ಲಾಸ್, ಹ್ಯಾಂಡ್ ಬ್ಯಾಗ್ ಅವರ ನೋಟವನ್ನು ಸಂಪೂರ್ಣಗೊಳಿಸಿತು. ಕಡಿಮೆ ಮೇಕ್ಅಪ್ ಹಾಕಿದ್ದ ಕರೀನಾ ಕಪೂರ್ ಖಾನ್, ಕೇಶರಾಶಿಯನ್ನು ಬಿಗಿಯಾಗಿ (ಬನ್) ಕಟ್ಟಿದ್ದರು.
ನಟಿ ಕರೀನಾ ಕಪೂರ್ ಖಾನ್ ಅವರ ಏರ್ಪೋರ್ಟ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಫಿಟ್ನೆಸ್ ಐಕಾನ್ನ ನೋಟಕ್ಕೆ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ನಟಿಯ ವಿಮಾನ ನಿಲ್ದಾಣದ ನೋಟಕ್ಕೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರರೊಬ್ಬರು "ಫೈಯರ್ ಬೆಬೋ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು "ಸೂಪರ್" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಸಾಮಾಜಿಕ ಜಾಲತಾಣ ಬಳಕೆದಾರರು, "ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಿಮ್ಮ ಡ್ರೆಸ್ಸಿಂಗ್ ಸೆನ್ಸ್ ತುಂಬಾ ಚೆನ್ನಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಹಲವರು ರೆಡ್ ಹಾರ್ಟ್ ಮತ್ತು ಫೈಯರ್ ಎಮೋಜಿಗಳಿಂದ ತಮ್ಮ ಮೆಚ್ಚುಗೆಯ ಮಹಾಮಳೆ ಸುರಿಸಿದ್ದಾರೆ.
ಕರೀನಾ ಕಪೂರ್ ಖಾನ್ ಶೀಘ್ರದಲ್ಲೇ ಸುಜೋಯ್ ಘೋಷ್ ನಿರ್ದೇಶನ ಪ್ರೊಜೆಕ್ಟ್ನೊಂದಿಗೆ ಡಿಜಿಟಲ್ ವೇದಿಕೆಗೆ ಚೊಚ್ಚಲ ಪ್ರವೇಶ ಮಾಡಲಿದ್ದಾರೆ. ವಿಜಯ್ ವರ್ಮಾ ಮತ್ತು ಜೈದೀಪ್ ಅಹ್ಲಾವತ್ ಅವರು ಮಹತ್ವದ ಪಾತ್ರಗಳಲ್ಲಿ ನಟಿಸಿರುವ ಈ ಯೋಜನೆಯು ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್‌ನ ಅಧಿಕೃತ ರೂಪಾಂತರವಾಗಿದೆ, ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಾಣಲಿದೆ.