ಮುಂಬೈ: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಮಲೈಕಾ ಅರೋರಾ ಆರೋಗ್ಯ ವಿಚಾರಿಸಲು ನಟಿ ಕರೀನಾ ಕಪೂರ್ ಖಾನ್ ಅವರ ಮನೆಗೆ ಬಂದಿದ್ದರು. ಈ ವೇಳೆ ಅಲ್ಲಿದ್ದ ಪಾಪರಾಜಿಗಳು ಕರೀನಾ ಫೋಟೋ ತೆಗೆಯಲು ಮುಗಿಬಿದ್ದಿದ್ದರು. ಈ ವೇಳೆ ಮತ್ತೊಂದು ಅವಘಡ ನಡೆದಿದೆ. ಫೋಟೋಗ್ರಾಫರ್ ಕಾಲಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಪರವಾಗಿ ಪ್ರಚಾರಕ್ಕೆ ತೆರಳುತ್ತಿದ್ದಾಗ ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಕಾರು ಅಪಘಾತಕ್ಕೀಡಾಗಿ ನಟಿ ತೀವ್ರ ಗಾಯಗೊಂಡಿದ್ದರು. ಬಳಿಕ ಮುಂಬೈ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಭಾನುವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಸ್ನೇಹಿತೆಯ ಆರೋಗ್ಯ ವಿಚಾರಿಸಿ, ಮಲೈಕಾ ಮನೆಯಿಂದ ಕರೀನಾ ಕಪೂರ್ ಹೊರಡುತ್ತಿದ್ದಂತೆ ಫೋಟೋಗ್ರಾಫರ್‌ಗಳು ಅವರ ಸುತ್ತ ಮುಗಿಬಿದ್ದರು.