ಕರ್ನಾಟಕ

karnataka

ETV Bharat / entertainment

ಬರ್ತ್​ಡೇ ಸಲುವಾಗಿ ಪತಿ ಮತ್ತು ಮಕ್ಕಳೊಂದಿಗೆ ವಿಹಾರಕ್ಕೆ ತೆರಳಿದ ಕರೀನಾ ಕಪೂರ್​ - ಈಟಿವಿ ಭಾರತ ಕನ್ನಡ

ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ತಮ್ಮಿಬ್ಬರು ಮಕ್ಕಳಾದ ತೈಮೂರ್​ ಮತ್ತು ಜಹಾಂಗೀರ್​ ಜೊತೆ ಪ್ರವಾಸಕ್ಕೆ ತೆರಳಿದ್ದಾರೆ.

Kareena Kapoor Khan jets off with Saif Ali Khan and kids for her birthday vacation in style
ಬರ್ತ್​ಡೇ ಸಲುವಾಗಿ ಪತಿ ಮತ್ತು ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳಿದ ಕರೀನಾ ಕಪೂರ್​

By ETV Bharat Karnataka Team

Published : Sep 17, 2023, 9:24 PM IST

ಬಾಲಿವುಡ್​ ಸ್ಟಾರ್​ ದಂಪತಿ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ತಮ್ಮಿಬ್ಬರು ಮಕ್ಕಳಾದ ತೈಮೂರ್​ ಮತ್ತು ಜಹಾಂಗೀರ್​ ಜೊತೆ ಪ್ರವಾಸಕ್ಕೆ ಹೊರಟಿದ್ದಾರೆ. ಭಾನುವಾರ ಪಟೌಡಿ ಕುಟುಂಬ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವುದು ಕಂಡುಬಂದಿದೆ. ಮಕ್ಕಳು ಕ್ಯಾಶುವಲ್​ ದಿರಿಸಿನಲ್ಲಿ ಕಾಣಿಸಿಕೊಂಡರೆ, ದಂಪತಿ ಔಟಿಂಗ್​ಗಾಗಿ ಫಾರ್ಮಲ್​ ಡ್ರೆಸ್​ಗಳನ್ನು ಆರಿಸಿಕೊಂಡಿದ್ದರು.

ಸೈಫ್​ ಅಲಿ ಖಾನ್​ ಬಿಳಿ ಪೈಜಾಮಾ, ಮರೂನ್​ ಕುರ್ತಾ ಮತ್ತು ಸನ್​ ಗ್ಲಾಸ್​ ಧರಿಸಿದ್ದರು. ಕರೀನಾ ಕಪೂರ್​ ಬಿಳಿ ಸಲ್ವಾರ್​ ಆರಿಸಿಕೊಂಡಿದ್ದರು. ಅವರು ಕೂಡ ಸನ್​ ಗ್ಲಾಸ್​ ಜೊತೆ ತಮ್ಮ ನೋಟವನ್ನು ಪೂರ್ಣಗೊಳಿಸಿದರು. ಇಬ್ಬರ ಕೈಯಲ್ಲೂ ಬ್ಯಾಗ್​ಗಳಿದ್ದವು. ದಂಪತಿಯ ಹಿರಿಯ ಮಗ ತೈಮೂರ್​ ಬ್ಯಾಗ್​ ಅನ್ನು ಬೆನ್ನಿಗೆ ಹಾಕಿಕೊಂಡಿದ್ದ. ಪ್ರವಾಸಕ್ಕಾಗಿ ಹುಡುಗ ಬಿಳಿ ಟಿ ಶರ್ಟ್​ ಮತ್ತು ಕಪ್ಪು ಜೀನ್ಸ್​ ಧರಿಸಿದ್ದ. ಜಹಾಂಗೀರ್​ ಡೆನಿಮ್​ ಮತ್ತು ಶರ್ಟ್​ನಲ್ಲಿ ಕಾಣಿಸಿಕೊಂಡ.

ಪಾಪರಾಜಿಗಳು ಹಂಚಿಕೊಂಡಿರುವ ವಿಡಿಯೋದಲ್ಲಿ, ಪಟೌಡಿ ಕುಟುಂಬ ಮುಂಬೈ ವಿಮಾನ ನಿಲ್ದಾಣದ ಬಳಿ ಕಾರಿನಿಂದ ಇಳಿದು ಪ್ರವೇಶದ್ವಾರದ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಸೆಪ್ಟೆಂಬರ್​ 21 ರಂದು ಕರೀನಾ ಕಪೂರ್​ ಅವರಿಗೆ 43 ವರ್ಷ ವಯಸ್ಸಾಗಲಿದೆ. ಈ ನಿಮಿತ್ತ ಬರ್ತ್​ಡೇ ಸೆಲೆಬ್ರೇಷನ್​ಗಾಗಿ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ ದಂಪತಿ ತಾವು ವಿಹಾರಕ್ಕಾಗಿ ತೆರಳುತ್ತಿರುವ ಸ್ಥಳವನ್ನು ಬಹಿರಂಗಪಡಿಸಿಲ್ಲ.

ಇದನ್ನೂ ಓದಿ:Jaane Jaan trailer: ಒಟಿಟಿಗೆ ಎಂಟ್ರಿ ಕೊಡಲು ಕರೀನಾ ಕಪೂರ್​ ಖಾನ್​ ರೆಡಿ!

ಓಟಿಟಿಗೆ ಕರೀನಾ ಕಪೂರ್..ಬಾಲಿವುಡ್​ ಬೇಬೋ ಕರೀನಾ ಕಪೂರ್​ ಖಾನ್​ ಮೂಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್​​​ ಜಾನೆ ಜಾನ್​​ (Jaane Jaan). ಟೈಟಲ್​ನಿಂದಲೇ ಕುತೂಹಲ ಮೂಡಿಸಿರುವ ಸಿನಿಮಾದ ಟ್ರೇಲರ್​ ಈಗಾಗಲೇ ಅನಾವರಣಗೊಂಡಿದೆ. ಇದರಲ್ಲಿ ಕರೀನಾ ತಾಯಿ ಪಾತ್ರ ನಿರ್ವಹಿಸಿದ್ದಾರೆ. ಜಬ್​ ವಿ ಮೆಟ್​ ಸಿನಿಮಾ ನಟಿ ಜೊತೆಗೆ ಜೈದೀಪ್​ ಅಹ್ಲಾವತ್​ ಮತ್ತು ಲಸ್ಟ್ ಸ್ಟೋರಿಸ್​ 2 ಖ್ಯಾತಿಯ ವಿಜಯ್​ ವರ್ಮಾ ಕಾಣಿಸಿಕೊಂಡಿದ್ದಾರೆ. ಇದು ಸೆಪ್ಟೆಂಬರ್​ 21ರಂದು ನೆಟ್​ಫ್ಲಿಕ್ಸ್ ನಲ್ಲಿ ಲಭ್ಯವಾಗಲಿದೆ.

ಇದಲ್ಲದೇ, ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ದೇಶನದ ಮುಂಬರುವ ಯೋಜನೆಯೊಂದಿಗೆ ಕರೀನಾ ಅವರು ನಿರ್ಮಾಪಕಿಯಾಗಿ ಹೊರಹೊಮ್ಮಲಿದ್ದಾರೆ. ಕ್ರೈಂ ಡ್ರಾಮಾ ಚಿತ್ರದಲ್ಲಿ ಅವರು ತನಿಖಾಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ. ಟಬು, ಕೃತಿ ಸನೋನ್ ಮತ್ತು ದಿಲ್ಜಿತ್ ದೋಸಾಂಜ್ ಅವರೊಂದಿಗೆ 'ದಿ ಕ್ರ್ಯೂ'ನಲ್ಲಿಯೂ ಪ್ರಮುಖ ಪಾತ್ರವನ್ನು ಚಿತ್ರಿಸುತ್ತಿದ್ದಾರೆ. ಈ ಸಿನಿಮಾ 2024ರ ಮಾರ್ಚ್​ 22ರಂದು ಥಿಯೇಟರ್​ಗೆ ಬರಲಿದೆ.

ಇದನ್ನೂ ಓದಿ:'ರಾಣಿ-ಪೂ' ಒಂದೇ ಫ್ರೇಮ್​ನಲ್ಲಿ.. ಕರೀನಾ ಜೊತೆ ನಟಿಸಲು ಅವಕಾಶ ಕೇಳಿದ ಆಲಿಯಾ ಭಟ್​

ABOUT THE AUTHOR

...view details