ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಪುತ್ರ ಜೆಹ್ ಅಲಿ ಖಾನ್ (Jeh Ali Khan)ಗೆ ಇಂದು ಎರಡನೇ ಹುಟ್ಟುಹಬ್ಬದ ಸಂಭ್ರಮ. ಮಗನ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಶುಭ ಕೋರಿದ್ದಾರೆ ತಾಯಿ ಕರೀನಾ ಕಪೂರ್. ತನ್ನ ಪುಟ್ಟ ಮಗುವಿಗೆ ಶುಭ ಹಾರೈಸುತ್ತ, ಕರೀನಾ ತಮ್ಮ ಮುಂಬರುವ ಸಿನಿಮಾ ಶೂಟಿಂಗ್ ಸೆಟ್ನಿಂದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೂನಿಯರ್ ಪಟೌಡಿ ಸಹ ತಾಯಿಯೊಂದಿಗೆ ಲಂಡನ್ಗೆ ಹಾರಿರುವುದು ವಿಶೇಷ.
ನಟಿ ಕರೀನಾ ಕಪೂರ್ ಖಾನ್ ಇನ್ಸ್ಟಾಗ್ರಾಮ್ನಲ್ಲಿ ಪುತ್ರನೊಂದಿಗಿನ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜೆಹ್ ಅಲಿ ಖಾನ್ ಸಾಮಾನ್ಯವಾಗಿ ತಾಯಿಯೊಂದಿಗೆ ಶೂಟಿಂಗ್‌ನಲ್ಲಿ ಇರುತ್ತಾನೆ. ಅದರಂತೆ ನಟಿ ಹಂಚಿಕೊಂಡಿರುವ ಇಂದಿನ ಚಿತ್ರ ಕೂಡ ಶೂಟಿಂಗ್ ಸೆಟ್ನದ್ದೇ ಆಗಿದೆ. ಪುತ್ರ ಜೆಹ್ ಅಲಿ ಖಾನ್ ಅವರ ಹುಟ್ಟುಹಬ್ಬದ ಪೋಸ್ಟ್ ಅನ್ನು ಹಂಚಿಕೊಂಡ ಕರೀನಾ ಕಪೂರ್ ಖಾನ್, ತಾನು ತನ್ನ ಮಗನನ್ನು ಪೂರ್ಣ ಹೃದಯ ಮತ್ತು ಆತ್ಮದಿಂದ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ 2021ರಲ್ಲಿ ಜೆಹ್ ಅಲಿ ಖಾನ್ನನ್ನು ಸ್ವಾಗತಿಸಿದ್ದರು.
ಕರೀನಾ ಕಪೂರ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರಗಳನ್ನು ಹಂಚಿಕೊಂಡ ಕೂಡಲೇ, ಅವರ ಕಾಮೆಂಟ್‌ಗಳ ವಿಭಾಗ ಸದ್ದು ಮಾಡಲು ಆರಂಭಿಸಿತು. ನಟಿ ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್, ಡಿಸೈನರ್ ಫರಾಜ್ ಮನನ್ ಮತ್ತು ನಟಿ ಶೀಬಾ ಸೇರಿದಂತೆ ಚಿತ್ರರಂಗದ ಹಲವರು ಮತ್ತು ಕರೀನಾ ಕಪೂರ್, ಸೈಫ್ ಅಲಿ ಖಾನ್ ಅವರ ಅಭಿಮಾನಿಗಳು ಜೆಹ್ ಅಲಿ ಖಾನ್ ಜನ್ಮದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ.